ಕೊಪ್ಪಳ : ಪೊಲೀಸ್ ಫೈರಿಂಗ್ ತರಬೇತಿ ಸಂದರ್ಭದಲ್ಲಿ ಗುಂಡು ತಗುಲಿ ಕುರಿಗಾಯಿ ಮಹಿಳೆ ಗಾಯಗೊಂಡ ಘಟನೆ ಇಂದು ಮಂಗಳವಾರ ಜರುಗಿದೆ.
ಘಟನೆಯು ತಾಲೂಕಿನ ಜಬ್ಬಲಗುಡ್ಡ - ಕುಮ್ಮಟದುರ್ಗ ಹತ್ತಿರ ಜರುಗಿದೆ. ಅಲ್ಲಿ ಡಿ.ಆರ್. ಪೊಲೀಸ್ ಫೈರಿಂಗ್ ತರಬೇತಿ ನಡೆದಿದ್ದು ತರಬೇತಿ ವೇಳೆ ಈ ಯಡವಟ್ಟು ನಡೆದು ಮಹಿಳೆಯ ಎಡ ತೋಳಿಗೆ ಗುಂಡು ತಗುಲಿದೆ.
ಅಲ್ಲಿ ಕುರಿ ಕಾಯಲು ಬಂದಿದ್ದ ಜಬ್ಬಲಗುಡ್ಡದ ರೇಣುಕಮ್ಮ ಜಗದೀಶ ಕಬ್ಬೇರ ಎಂಬ ಮಹಿಳೆಗೆ ಗುಂಡು ತಗುಲಿದ್ದು ಪೊಲೀಸರು ತಮ್ಮ ವಾಹನದಲ್ಲಿ ಕರೆತಂದು ಮಹಿಳೆಯನ್ನು ಮುನಿರಾಬಾದ್ ಆಸ್ಪತ್ರೆಗೆ ದಾಖಲಿಸಿದ್ದಾರೆ.