ಗಂಗಾವತಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಕಾಣಿಸಿಕೊಂಡು ಜನರಲ್ಲಿ ಭಯ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ.
ಗಂಗಾವತಿಯ ಜಯನಗರ , ಸಿದ್ದಿಕೇರಿ ರಸ್ತೆ ಪ್ರದೇಶದಲ್ಲಿ ಚಿರತೆಗಳಿದ್ದು ಆಗಾಗ ಜನರ ಕಣ್ಣಿಗೆ ಕಾಣಿಸಿ ಜನರಲ್ಲಿ ಭಯ ಹುಟ್ಟಿಸಿದ ಘಟನೆ ನಡೆಯುತ್ತಿತ್ತು. ಚಿರತೆ ಹಿಡಿಯಲು ಅರಣ್ಯ ಇಲಾಖೆ ಜಯನಗರದಲ್ಲಿ ಇರಿಸಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ. ಇದು ಎರಡು ವರ್ಷದ ಗಂಡು ಚಿರತೆ ಎಂದು ತಿಳಿದು ಬಂದಿದೆ.
ನಗರ ಹತ್ತಿರ ಚಿರತೆ ಕಾಣಿಸಿಕೊಂಡಿದ್ದರಿಂದ ಸುಮಾರು ಒಂದೂವರೆ ಲಕ್ಷ ಜನಸಂಖ್ಯೆಯ ಗಂಗಾವತಿ ನಗರದಲ್ಲಿ ತೀವ್ರ ಚರ್ಚೆ ಭಯ ಹುಟ್ಟಿತ್ತು. ಗಂಗಾವತಿ ವಲಯ ಅರಣ್ಯ ಇಲಾಖೆ ಬೋನ್ ಇಟ್ಟು ಚಿರತೆ ಸೆರೆಯಾಗಲು ಯಶಸ್ವಿಯಾಗಿದೆ. ಈ ಮೂಲಕ ಜನರಲ್ಲಿ ತುಸು ನೆಮ್ಮದಿ ಮೂಡಿಸಿದೆ.