ಕೊಪ್ಪಳ : ವೈದ್ಯರ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವ ವಿಶೇಷ ಕಾನೂನು ಜಾರಿ ಮಾಡಿರುವ ರೀತಿ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡುವ ದುಷ್ಟರಿಗೆ ಕಠಿಣ ಶಿಕ್ಷೆ ನೀಡುವ ವಿಶೇಷ ಕಾನೂನು ಮಾಡುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ನಾಗರಾಜ ಜುಮ್ಮನ್ನವರ ಆಗ್ರಹಿಸಿದರು.
ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಪಿಡಿಒ ಹಾಗೂ ಗಣಿ ಇಲಾಖೆ ಅಧಿಕಾರಿಗಳ ಮೇಲಿನ ಹಲ್ಲೆ ಖಂಡಿಸಿ ಸೋಮವಾರ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾ. ಪಂ. ಪಿಡಿಒ ರತ್ನಮ್ಮ ಅವರ ಮೇಲೆ ಅದೇ ಪಂಚಾಯತಿ ಸದಸ್ಯೆ ಶಾಂತಮ್ಮ ಬಂಡಿವಡ್ಡರ್ ಮತ್ತು ಅವರ ಮಗ ಭೀಮೇಶ್ ಬಂಡಿವಡ್ಡರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ
ಫೆ. 28 ರಂದು ಹಿರೇಸಿಂದೋಗಿ ಹತ್ತಿರ ಹಿರೇಹಳ್ಳದಲ್ಲಿ ಅಕ್ರಮ ಮಗಳು ಸಾಗಾಣಿಕೆ ತಡೆದು ಕ್ರಮ ಜರುಗಿಸಲು ಹೋದಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಾಗರಾಜ್ ಹಾಗೂ ಸಚಿನ್ ಇವರ ಮೇಲೆ ಹಲ್ಲೆ ಐವರು ಹಲ್ಲೆ ನಡೆಸಿದ್ದಾರೆ.
ಈ ಎರಡು ಹಲ್ಲೆ ಪ್ರಕರಣಗಳನ್ನು ಸರಕಾರಿ ನೌಕರರ ಸಂಘ ಖಂಡಿಸುತ್ತದೆ ಜಿಲ್ಲೆಯಲ್ಲಿ ಐದಾರು ವರ್ಷಗಳಿಂದ ಇಂಥ ಹಲ್ಲೆಗಳು ನಡೆದಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕುವುದು ನಡೆಯುತ್ತಿದೆ . ಹಲ್ಲೆಕೋರರ ವಿರುದ್ದ ಕಠಿಣ ಕ್ರಮ ಜರುಗಿಸಿ ಹಲ್ಲೆಗೊಳಗಾದ ನೌಕರರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.
ಪಿಡಿಓ ಮಢಲಡ ಹಲ್ಲೆ ಮಾಡಿದ ಗ್ರಾ.ಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ ಇವರ ಸದಸ್ಯತ್ವವನ್ನು ಪಂಚಾಯತ್ ರಾಜ್ ಅಧಿನಿಯಮ 1993 ನಿಯಮ 43 ಎ ಅನ್ವಯ ರದ್ದುಪಡಿಸುವಂತೆ ಜುಮ್ಮನ್ನವರ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ರಾಜ್ಯ ಪರಿಷತ್ ಸದಸ್ಯ ಆಸೀಫ್ ಅಲಿ, ಜಿಲ್ಲಾ ಕಾರ್ಯದರ್ಶಿ ಶಿವಪ್ಪ ಜೋಗಿ ಖಜಾಂಚಿ ಜಯತೀರ್ಥ ದೇಸಾಯಿ , ಎನ್. ಮಂಜುನಾಥ್, ನಾಗರಾಜ ಕುಷ್ಟಗಿ ಪಿ.ಎಸ್.ಅಮರದೀಪ ಸೇರಿದಂತೆ ನಿವಿದ ಗ್ರಾ. ಪಂ. ಪಿಡಿಒಗಳು ಹಾಗೂ ಅಧಿಕಾರಿ - ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
ನಂತರ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.