ಕೊಪ್ಪಳ : ಕರ್ನಾಟಕದಲ್ಲಿ ಮತ್ತೊಬ್ಬ ಏಕನಾಥ ಶಿಂಧೆ ಹುಟ್ಡುತ್ತಾರೆ ಮತ್ತೆ ಬಿಜೆಪಿ ಸರಕಾರ ಬರುತ್ತೆ ಅಂತ ಬಿಜೆಪಿಯವರು ಕನಸು ಕಾಣುತ್ತಿದ್ದಾರೆ ಅವರ ಕನಸು ನನಸಾಗುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಶುಕ್ರವಾರ ಕನಕಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಡಿ ಕೆ ಶಿವಕುಮಾರ ಪ್ರಯಾಗರಾಜ್ ಗೆ ಹೋದ ತಕ್ಷಣ ಬಿಜೆಪಿಗೆ ಹೋಗುತ್ತಾರೆ ಎನ್ನುವುದು ತಪ್ಪು
ಭಕ್ತಿ ಅವರವರಿಗೆ ಬಿಟ್ಟಿದ್ದು. ವಿರೋಧ ಪಕ್ಷದವರನ್ನು ಮಾತನಾಡಿಸಬಾರದು ಅಂತ ಇದೆಯಾ. ನನಗೆ ಈಗಲೂ ಬಿಜೆಪಿಯಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ.
ಎಸ್ ಸಿಪಿ ಟಿಎಸ್ ಪಿ ಜಾರಿಗೆ ತಂದಿದ್ದು ಸಿದ್ದರಾಮಯ್ಯ. ದಲಿತರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಕೇಂದ್ರ ಬಜೆಟ್ ನಲ್ಲಿ ಶೇ.24 ರಷ್ಟು ಅನುದಾನ ಎಸ್ಸಿ ಎಸ್ಟಿ ಸಮುದಾಯಕ್ಕೆ ಕೊಡಿಸಲಿ ಎಂದರು.
ಬಜೆಟ್ ಕುರಿತು ಮಾತನಾಡಿದ ಅವರು ಹಿಂದಿನ ರಾಜ್ಯ ಬಜೆಟ್ ನಲ್ಲಿ ಆಗಿರುವ ಘೋಷಣೆಗಳಿಗೂ ಹಣ ತರುತ್ತೇವೆ. ಈ ಸಲದ ಬಜೆಟ್‌ನಲ್ಲಿ ಏನೇನು ಬೇಕು ಎಂಬುದನ್ನು ಸಿಎಂ ಗಮನಕ್ಕೆ ತಂದಿದ್ದೇವೆ ಎಂದರು.