ಹೊಸ ವರುಷ ಬಂತು ನೋಡ
--------------------------------------
ಹೊಸ ವರುಷ ಬಂತು ನೋಡ
ಹೊಸ ಹುರುಪು ತಂತು ನೋಡ
ಮೂಡುತ್ತಿದೆ ಮನದಲಿ ಹೊಸ ಚೈತನ್ಯ
ಹೀಗೆ ಇರಲಿ ಸದಾ ಹರುಷ
ಕಹಿ ನೆನಪುಗಳು ಮರೆಯಾಗಲಿ
ಸಿಹಿ ನೆನಪುಗಳು ಉಳಿಯಲಿ
ಕಂಡ ಕನಸುಗಳು ನನಸಾಗಲಿ
ತುಂಬಿರಲಿ ಹರುಷ ಬದುಕಿನಲ್ಲಿ
ಎದೆಯ ತುಂಬಾ ಪ್ರೀತಿಯ ಝೇಂಕಾರ
ಮನದ ತುಂಬ ಖುಷಿಯ ಬಿಂಬ
ಕಂಗಳಲ್ಲಿ ಮೂಡಿದೆ ಭರವಸೆಯ ಚಿತ್ರ
ಉಕ್ಕಲಿ ಹೊಸ ವರುಷದ ಉತ್ಸಾಹ
ಹಳೆಯ ಪುಟ ತಿರುವಲೇ ಬೇಕು
ಹೊಸ ಪುಟ ತೆರೆಯಲು
ಬದುಕಲಿ ಹಳೆಯ ವರುಷದ ಅಂತ್ಯ
ಹೊಸ ವರುಷದ ಆರಂಭ
ಬರುವ ಸವಾಲುಗಳನ್ನು ಎದುರಿಸಿ ಬೀಗಬೇಕಿದೆ
ಹೊಸ ವರ್ಷದಲ್ಲಿ ಸದೃಢವಾಗಿ ಬದುಕಲು.
- ರಾಜೇಸಾಬ ಕೆ. ರಾಟಿ