"ಅಪ್ಪು ನಮನ"
--------❤------
ಎಲ್ಲವೂ ಇದೆ
ಎಲ್ಲರೂ ಇದ್ದಾರೆ
ಈ ಭೂಮಿಯ ಮೇಲೆ
ನಿನ್ನ ಹೊರತು
ಆರೋಗ್ಯದಿಂದಲೇ ಇದ್ದೆ
ನಗು ನಗುತ್ತಾ..
ನಗು ಮುಖದ ಒಡೆಯ
ತಿಳಿಯದು ನನಗೆ
ನಿನ್ನ ಸಾವಿಗೆ ಕಾರಣ
ನಗುತ್ತಿದ್ದೆ ನಗಿಸುತ್ತಿದ್ದೆ
ಚಟುವಟಿಕೆಯಿಂದಲೇ ಇದ್ದೆ
ಒಮ್ಮೆಲೇ ಯಾಕೆ ಸ್ತಬ್ಧವಾದೆ
ಮೌನವನ್ನು ಮಾತ್ರ ಉಳಿಸಿ ಬಿಟ್ಟು
ಕರ್ನಾಟಕವೂ ನಿನ್ನಿಂದ
ಹೆಮ್ಮೆ ಪಡುತ್ತಿತ್ತು
ಕನ್ನಡಕ್ಕಾಗಿ ಬದುಕಿ
ಕನ್ನಡದ 'ರಾಜರತ್ನ'ವಾಗಿದ್ದೆ
ದೇವರೇ ಬೇಡುವೆನು ನಿನ್ನಲ್ಲಿ
ಮರಳಿ ಕಳುಹಿಸಿ ಬಿಡು ಭೂವಿಗೆ
ನಮ್ಮ 'ವೀರ ಕನ್ನಡಿಗ' ನನ್ನ
ಚಿರಂಜೀವಿಯಾಗಿರು ಎಂದು ಹೇಳಿ.
- ರಾಜೇಸಾಬ ಕೆ. ರಾಟಿ