ನಿನ್ನ ನೆನಪನ್ನು ಅಳಿಸಿ ಹೋಗು
*** *** *** *** *** *** *** ***
ಹೃದಯದಲ್ಲಿ ಪ್ರೀತಿ ಮೂಡಿಸಿ
ಮನದಲಿ ನನ್ನ ಹರಸಿ
ನಿನ್ನದೇ ಧ್ಯಾನದಲ್ಲಿ ನನ್ನ ಮರೆಸಿ
ಬಿಟ್ಟು ಹೊರಟಿರುವೆ ನನ್ನ ದೂರ ಸರಿಸಿ
ನೀ ಹೋಗುವ ಮುನ್ನ
ನನ್ನ ಮನದಲ್ಲಿಯ
ನಿನ್ನ ನೆನಪನ್ನು ಅಳಿಸಿ ಹೋಗು
ಪ್ರೀತಿಯಿಂದ ನನ್ನ ಮುದ್ದಿಸಿ
ನಲ್ಮೆಯಿಂದ ತೊಳಲಿ ಆಲಂಗಿಸಿ
ಬಿಸಿ ಅಪ್ಪುಗೆ ಭಾವನೆ ಮೂಡಿಸಿ
ಬಿಟ್ಟು ಹೊರಟಿರುವೆ ನನ್ನ ದೂರ ಸರಿಸಿ
ನೀ ಹೋಗುವ ಮುನ್ನ
ನನ್ನ ಮನದಲ್ಲಿಯ
ನಿನ್ನ ನೆನಪನ್ನು ಅಳಿಸಿ ಹೋಗು
ಬದುಕಿನುದ್ದಕ್ಕೂ ಜೊತೆಗಿರುವೆ ಎಂದು ತಿಳಿಸಿ
ದಿನವೂ ನಿನ್ನ ಧ್ಯಾನದಲ್ಲೆ ನನ್ನ ಕುರಿಸಿ
ಈಗ ಹೇಳದೇ ಕೇಳದೇ ನನ್ನ ಮೌನವಾಗಿಸಿ
ಬಿಟ್ಟು ಹೊರಟಿರುವೆ ನನ್ನ ದೂರ ಸರಿಸಿ
ನೀ ಹೋಗುವ ಮುನ್ನ
ನನ್ನ ಮನದಲ್ಲಿಯ
ನಿನ್ನ ನೆನಪನ್ನು ಅಳಿಸಿ ಹೋಗು.
✍️- ರಾಜೇಸಾಬ k. ರಾಟಿ.