ಜನ್ಮದಾತ ಅಪ್ಪ
ಪುಟ್ಟ ಹೆಜ್ಜೆ ಇಡುವಾಗ
ಮಕ್ಕಳು ಬೀಳದಂತೆ
ಕೈಹಿಡಿದು ನಡೆಸಿದಾತ
ಪುಟ್ಟ ಕಂದನ ತೊದಲು
ನುಡಿ ಕೇಳಿ ಸಂಭ್ರಮಿಸಿದಾತ
ಹೆಗಲ ಮೇಲೆ ಹೊತ್ತು
ಜಾತ್ರೆ ಸಂತೆ ಸುತ್ತಿದಾತ
ತಾನು ಆಳಾಗಿ ದುಡಿದು
ಮಕ್ಕಳನ್ನು ಅರಸರಂತೆ ಬೆಳೆಸಿದಾತ
ಓದು ಬರಹ ಬಾರದಾತ
ಮಕ್ಕಳನ್ನು ಸಾಕ್ಷರರನ್ನಾಗಿ
ಮಾಡಿದಾತ
ಮಕ್ಕಳ ಖುಷಿಯಲ್ಲಿ
ತನ್ನ ಖುಷಿ ಕಂಡಾತ
ತಾನು ಹಸಿದಿದ್ದರು
ಮಕ್ಕಳ ಹಸಿವು ನೀಗಿಸಿದಾತ
ನೋವಲೂ ನಗುಬಲ್ಲ ಆತ
ಮಕ್ಕಳ ನಗುವ ನೋಡ ಬಯಸಿದಾತ
ಆತನೇ ನಮ್ಮ ಜನ್ಮದಾತ ಅಪ್ಪ.
- ರಾಜೇಸಾಬ ರಾಟಿ