Advt. 
 Views   1063
Dec 13 2023 1:09PM

ರವಿಚಂದ್ರನ್ ಹೀರೊಯಿನ್ ನಿರ್ದೇಶಿಸಿದ ಸಿನಿಮಾ


ಕೊಪ್ಪಳ : ಇದು ಕೊಪ್ಪಳ ತಾಲೂಕಿನ ಬಿಸರಳ್ಳಿ ಮೂಲದ ಇಬ್ಬರು ಬಾಲಪ್ರತಿಭೆಗಳು ನಟಿಸಿದ ಸಿನಿಮಾ. ತಂದೆ ತಾಯಿ ಮಕ್ಕಳೊಂದಿಗೆ ನೋಡಬೇಕಾದ ಮಕ್ಕಳ ಸಿನಿಮಾ. ರವಿಚಂದ್ರನ್ ಹಿರೋಯಿನ್ ಅಪೂರ್ವ ನಿರ್ದೇಶಿಸಿದ ಸಿನಿಮಾ. ಬೆಂಗಳೂರು ಅಂತರ ರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ಪ್ರಥಮ ಬಹುಮಾನ ಮತ್ತು ಅಪ್ಪು ಚಲನಚಿತ್ರೋತ್ಸವದಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದ ಸಿನಿಮಾ. 

ಇದುವೇ ' ಓ ನನ್ನ ಚೇತನ '  ಸಿನಿಮಾ !

ಇದೇ ಡಿ. 15 ರಂದು ರಾಜ್ಯಾದ್ಯಂತ ಮತ್ತು ಕೊಪ್ಪಳದ ಲಕ್ಷ್ಮೀ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದೆ. ಮೊಬೈಲ್ ಗೀಳಿಗೆ ಬಿದ್ದ ಮಕ್ಕಳ ಕಥಾ ಹಂದರದ ಸಿನಿಮಾ ಇದು.

ಬಿಸರಳ್ಳಿ ಮೂಲದ ಮಂಜುನಾಥ ಕೊಪ್ಪದ ಅವರ ಪುತ್ರ 7 ನೇ ತರಗತಿ ವಿದ್ಯಾರ್ಥಿ ಪ್ರತೀಕ್, ಇತನ ಅಣ್ಣ ಪ್ರಥಮ‌ ಪಿಯುಸಿ ಓದುತ್ತಿರುವ ಪ್ರತೀಕ್ ನಟಿಸಿರುವ ಸಿನಿಮಾ ಇದು.

ಪ್ರತೀಕ್ ಓ ನನ್ನ ಚೇತನ, ರಣಾಗ್ರ , ದರ್ಶನ ನಟನೆಯ ತಾರಕ್,  ಜೂನಿ ಸಿನಿಮಾದಲ್ಲಿ ನಟಿಸಿದ್ದಾನೆ.

ಪ್ರೀತಮ್ ಓ ನನ್ನ ಚೇತನ, ನಮ್ಮವರು, ಮಿಂಚು ಹುಳು, ಅಗನ್, ಐರಾವನ್ ಸಿನಿಮಾದಲ್ಲಿ ಹಾಗೂ ಅದಕ್ಕೂ ಮೊದಲು ಡ್ರಾಮಾ ಜೂನಿಯರ್ಸ್, ಅಗ್ನಿಸಾಕ್ಷಿ, ಗಿರಿಜಾ ಕಲ್ಯಾಣ ಧಾರಾವಾಹಿ ಹಾಗೂ ಕೆಲ ಕಿರುಚಿತ್ರಗಳಲ್ಲಿ ನಟಿಸಿದ್ದಾನೆ. 

ರವಿಚಂದ್ರನ್ ಅವರು ಬಹಳ ವರ್ಷಗಳ ಕಾಲ ಶ್ರಮ ಹಾಕಿ ಮಾಡಿದ್ದ 'ಅಪೂರ್ವ ' ಸಿನಿಮಾದ ನಾಯಕಿ ಅಪೂರ್ವ ಈ ' ಓ ನನ್ನ ಚೇತನ'  ಸಿನಿಮಾ ನಿರ್ದೇಶಕಿ.

ಮೊನ್ನೆ ಸೋಮವಾರ ಬೆಂಗಳೂರಿನಲ್ಲಿ ಓ ನನ್ನ ಚೇತನ ಸಿನಿಮಾ ಟ್ರೇಲರ್ ರವಿಚಂದ್ರನ್ ಬಿಡುಗಡೆಗೊಳಿಸಿದ್ದಾರೆ.
------------
ಬುಧವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಈ ಸಿನಿಮಾದ ಪೋಸ್ಟರ್ ಬಿಡುಗಡೆಗೊಳಿಸಿದ ಚಲನಚಿತ್ರ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ನಿರ್ದೇಶಕ ಬಸವರಾಜ ಕೊಪ್ಪಳ, ಪ್ರತೀಕ್,  ಪ್ರೀತಮ್ ಹಾಗೂ ಬಿಸರಳ್ಳಿ ಗ್ರಾ.ಪಂ ಅಧ್ಯಕ್ಷ ರವೀಂದ್ರಗೌಡ ಮಾಲಿಪಾಟೀಲ್ , ಮಂಜುನಾಥ ಅಂಗಡಿ, ಸುಧಾಕರ ಮುಜಗೊಂಡ ಇತರರು ನಮ್ಮ ಪ್ರತಿಭೆಗಳ ಈ ಸಿನಿಮಾ ಬೆಂಬಲಿಸುವಂತೆ ಮನವಿ ಮಾಡಿದರು.



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Mar 25 2025 8:41PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ಯಾರಂಟಿ ಸಮಿತಿಗಳನ್ನು ರದ್ದುಪಡಿಸಿ : KRS ಪಕ್ಷ ಆಗ್ರಹ
Mar 25 2025 5:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : OFC ಕೇಬಲ್ ಗಳಿಗೆ ಬೆಂಕಿ ಅವಘಡ
Mar 24 2025 9:34PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
Mar 24 2025 7:49PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ
Mar 23 2025 2:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಮಸ್ಯೆಗಳಿಗೆ ದನಿಯಾದರೆ ಸಮ್ಮೇಳನಗಳಿಗೆ ಸಾರ್ಥಕತೆ : ಮಾಲಾ ಬಡಿಗೇರ
Mar 21 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 21 2025 10:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಂಕಿ ಹೊತ್ತಿ ಮದುವೆ ಬಟ್ಟೆ ಬಂಗಾರ ಸಮೇತ ಮನೆ ಆಹುತಿ
Mar 19 2025 10:38PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಧ್ವನಿ ಎತ್ತಿದವರಿಗೆ ಥ್ಯಾಂಕ್ಸ್ ಮೌನಿಗಳ ವಿರುದ್ದ ಆಕ್ರೋಶ
Mar 19 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮದ್ಯ ಜೂಜಾಟದ ಕೇಸಿಗೆ ಯಾರೂ ಜಮಾನತ್ ಕೊಡಲ್ಲ
Mar 19 2025 8:39AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸರಕಾರಕ್ಕೆ ಪತ್ರ ಬರೆದ ಹಾಲವರ್ತಿ ಗ್ರಾಮಸ್ಥರು





     
Copyright © 2021 Agni Divya News. All Rights Reserved.
Designed & Developed by We Make Digitize