Advt. 
 Views   3866
Oct 5 2023 8:43AM

ಜನುಮ ದಿನದ ಆಚರಣೆ ಸಾರ್ಥಕ ಆಗಿರಲಿ…


ನೂರಾರು ಕಾಲ ಸುಖವಾಗಿ ಬಾಳು ಹ್ಯಾಪಿ ..ಹ್ಯಾಪಿ ಬರ್ತ್ ಡೇ, ನಿನ್ನ ಬಾಳು ಎಂದೂ ಬೆಳಕಾಗಬೇಕು ಹ್ಯಾಪಿ ಹ್ಯಾಪಿ ಬರ್ತ್ ಡೇ” ಹಾಡನ್ನು ಭಾವಚಿತ್ರದೊಂದಿಗೆ ಅಂಟಿಸಿ ಸ್ಟೇಟಟ್ಸ್ ಹಾಕಿ, ಕೇಕ್ ತಂದು ಅರ್ಧ ಮೈ- ಕೈಗೆ ಅಂಟಿಸಿಕೊಂಡು ಉಳಿದ ಸ್ವಲ್ಪ ತಿಂದು ಈ ನೆಪವಿಟ್ಟುಕೊಂಡು ಕುಡಿದು, ಕುಪ್ಪಳಿಸುವ ಹುಚ್ವುತನದ ಹೊಸಬರ ದಂಡೆ ಇದೆ ಇಲ್ಲಿ.

ಜನುಮ ದಿನವನ್ನು ಅಂಧಾದುಂದಿ ಮಾಡುವವರೂ ಇದ್ದಾರೆ. ಪೋಟೊ - ಪ್ಲೇಕ್ಸಗಳು ಹಾರ -ತುರಾಯಿಗಳ ಸಡಗರ ಬೇರೆ. ಇನ್ನು ಮುಂದೆ ಹೋಗಿ ಬರ್ತ್ ಡೇಗಾಗಿ ಆಸ್ಪತ್ರೆಗೆ ಹೋಗಿ ಹಣ್ಣು -ಹಂಪಲು ಹಿಡಿದು ಪೋಟೊಗೆ ಪೋಸ್ ಕೊಡುವ ವೀರರು ಬಹಳ ಮಂದಿ.

ಈ ರೀತಿಯ ಹುಟ್ಟು ಹಬ್ಬದ ಆಚರಣೆಗೆ ಅರ್ಥವಿಲ್ಲ. ಅದ್ಯಾಗೂ ಇನ್ನು ಒಂದು ವಿಷಯವಿದೆ, ಅದೆನೆಂದರೆ ಪಕ್ಕದ ಮನೆಯ ಮುರುಗೇಶ ಗ್ರಾಂಡ್ ಆಗಿ ಮೊನ್ನೆ ಹುಟ್ಟು ಹಬ್ಬ  ಆಚರಿಸಿಕೊಂಡನೆಂದು ತಾನು ಆಚರಿಸಿಕೊಳ್ಳುವ ಆಧುನಿಕ ಜನರ ಖಯಾಲಿ ಕಂಡಾಗಗಲೆಲ್ಲ ನನಗಂತೂ ನಗು.

ಪ್ರತಿಯೊಬ್ಬರ ಜೀವನದಲ್ಲೂ ಜನುಮ ದಿನವೆಂಬುದು ವಿಶೇಷತೆಯ ಹೂರಣವಿದ್ದಂತೆ. ಆದರೆ ಅದನ್ನು ಮಿತವಾಗಿ, ಹಿತವಾಗಿ ತಿಂದರಷ್ಟೇ ಅದು ಸ್ವಾದವಾಗುವುದು ಮತ್ತು ಆರೋಗ್ಯಕ್ಕೂ ಒಳ್ಳೆಯದು. ಆ ನಿಟ್ಟಿನಲ್ಲಿ ಹುಟ್ಟುಹಬ್ಬವನ್ನು ಇನ್ನು ಭಿನ್ನವಾಗಿ , ಸ್ವಾಸ್ಥ್ಯವಾಗಿ, ಆರೋಗ್ಯಕರ ಹವ್ಯಾಸಗಳಿಂದ ಮತ್ತು ಚಟುವಟಿಕೆಗಳಿಂದ ಆಚರಿಸಿಕೊಳ್ಳಬಹುದು.

ಸಂಪ್ರದಾಯಕ ಆಚರಣೆ:  ಹುಟ್ಟು ಹಬ್ಬದ ದಿನದಂದು ನಸುಕಿನಲ್ಲಿ‌ ಎದ್ದು ಸ್ನಾನ ಮುಗಿಸಿ ಹೊಸ ಉಡುಪುಗಳ ಧರಿಸಿ , ದೇವಾಲಯಕ್ಕೆ ಹೋಗಿ ಅರ್ಚನೆ ಮಾಡಿಸಿ , ಮನೆಯ ಗುರು-ಹಿರಿಯರಿಂದ ಆಶೀರ್ವಾದ ಪಡೆಯಬೇಕು. ನಂತರ  ಸಿಹಿ ತಿಂದು ಮನೆಯವರ ಜೊತೆ ಬೆರೆತು ಖುಷಿ-ಖುಷಿಯಾಗಿ  ಲವಲವಿಕೆಯಿಂದ ಕೂಡಿದ ಚಟುವಟಿಕೆಗಳನ್ನು ಮಾಡುತ್ತಾ   ಜನುಮ ದಿನ ಕಳೆಯಬೇಕು.

ಗಿಡ ನೆಡುವುದರ ಮೂಲಕ ಆಚರಣೆ:  ಕಾಡು ಇದ್ದರೆ  ನಾಡು ಎನ್ನುವ ಮಾತನ್ನು ಬರೀ ಪ್ರಬಂಧ , ಭಾಷಣಗಳಿಗೆ ಸೀಮಿತಗೊಳಿಸದೇ ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬದಂದು ಸಸಿಗಳನ್ನು ನೆಟ್ಟು ಅವನ್ನು  ನಿರಂತರ ಪೋಷಿಸುತ್ತಾ ಬಂದರೆ ಸಮಾಜಕ್ಕೆ ನಿಮ್ಮ ಅಳಿಲು ಸೇವೆ ನೀಡಿದಂತೆ ಹಾಗೂ ನಿಮ್ಮ ಜನ್ಮದಿನಕ್ಕೆ ಶೋಭೆ ತಂದಂತೆ.  ಈ  ಮೂಲಕ ಹಸಿರನ್ನು ಉಳಿಸಿದಂತಾಗುತ್ತದೆ‌.

ಅವಶ್ಯಕತೆಯುಳ್ಳವರಿಗೆ ಸಹಾಯ ಮಾಡಿ:
ಕೆಲವರಿಗೆ ಆಹಾರದ ಅವಶ್ಯಕತೆ, ಕೆಲವರಿಗೆ ಬಟ್ಟೆಯ ಅವಶ್ಯಕತೆ ಹಾಗೇ ಇನ್ನು ಬೇರೆ ಬೇರೆಯ ಅವಶ್ಯಕತೆ ಇರುತ್ತದೆ. ಹುಟ್ಟು ಹಬ್ಬದಂದು ಕೆಲವರಿಗಾದರೂ ಅವರ ಅವಶ್ಯಕತೆಗೆ ತಕ್ಕುದಾದ ಸಹಾಯ ಮಾಡೋಣ. ಆ ಮೂಲಕ ಆತ್ಮತೃಪ್ತಿಯ ಬಾಳು ಬಾಳೋಣ.

ಮಕ್ಕಳೊಂದಿಗೆ ಬೆರೆಯಿರಿ: ”ಪರಿಶುದ್ಧ ಆತ್ಮಗಳೆಂದರೆ  ಮಕ್ಕಳು” ಅಕ್ಷರಶ ಸತ್ಯವಾದ ಮಾತು. ಸಾದ್ಯವಾದಷ್ಟು ಮಕ್ಕಳೊಂದಿಗೆ ಬೆರೆಯಿರಿ. ಒತ್ತಡದ ನಮ್ಮ ಜೀವನ ಶೈಲಿಯಲ್ಲಿ ಮಕ್ಕಳೊಂದಿಗೆ ಆಟವಾಡುವ , ಮಾತಾಡುವ , ಅವರ ತುಂಟಾಟಗಳನ್ನು ಕಣ್ಣುತುಂಬಿಕೊಳ್ಳುವ ಗೋಜಿಗೆ ನಾವು ಹೋಗಿರುವುದಿಲ್ಲ. ಆದರೆ ಹುಟ್ಟು ಹಬ್ಬದಂದು ಹೆಚ್ಚು ಮಕ್ಕಳೊಂದಿಗೆ ಕಳೆಯಿರಿ ನಿಮ್ಮ ಮನಸ್ಸು ಹಗುರವಾಗುತ್ತದೆ ಮತ್ತು ನವಚೈತನ್ಯ ಮೂಡುತ್ತದೆ.

ಜೀವನದ ಯೋಜನೆ ಸಿದ್ದಪಡಿಸಿಕೊಳ್ಳಿ: ಪ್ರತಿಯೊಬ್ಬರು ಮಾಡಲೇಬೇಕಾದ ಅತಿ ಅವಶ್ಯಕ ಕೆಲಸವಿದು. ನೀವು ಭೂಮಿಗೆ ಬಂದಿರುವ ಕುರುಹಿಗಾಗಿ ಮಹತ್ತರವಾದದ್ದು ಅಲ್ಲದಾದರೂ ಚೊಕ್ಕದಾದ ಕೆಲಸಗಳನ್ನು ಮಾಡಬೇಕು ಅದಕ್ಕೆ ಯೋಜನೆ ಅತಿ ಮುಖ್ಯ. ಈ ದಿನವನ್ನು ಅಂತಹ ಯೋಜನೆ ಮಾಡಲು ಮೀಸಲಿಡಿ. ಧನಾತ್ಮಕವಾಗಿ ಚಿಂತಿಸುವ ಹಾಗೂ ಪದೋನ್ನತಿ ಹೊಂದುವ  ಹೀಗೆ ಬೇರೆ ಬೇರೆ ನಿರ್ಧಾರಗಳನ್ನು, ಪ್ರತಿಜ್ಞೆಗಳನ್ನು , ಗುರಿಗಳನ್ನು ಇಟ್ಟುಕೊಂಡು ಈ ದಿನವನ್ನು ಗುರುತರವಾಗಿರುವಂತೆ ಮಾಡಿ.

ಇವಿಷ್ಟೇ ಅಲ್ಲದೇ ಇನ್ನು ಬೇರೆ ಬೇರೆಯಾಗಿ ಆರೋಗ್ಯಕರವಾಗಿ ಮತ್ತು ಹವ್ಯಾಸಭರಿತವಾಗಿ ಜನುಮ ದಿನವನ್ನು ಆಚರಿಸಿಕೊಳ್ಳಬಹುದು. ಅಂತಹ ಐಡಿಯಾಗಳನ್ನು ಹುಡುಕಿ ಆಚರಣೆಗೆ ತರುವ ಕ್ರಿಯಾಶೀಲ ಮನಸ್ಸು ಬೇಕಷ್ಟೇ. ಹಾಗಾದರೆ ಅವರು ಇವರು ವಿಶ್ ಮಾಡಿದ ಪೋಟೊ ಸ್ಕ್ರೀನ್ ಸಾಟ್ ತೆಗೆದು ನಮ್ಮ ಸ್ಟೇಟಸಗೆ ಹಾಕುವ ಬದಲು ಸ್ವಲ್ಪ ಮನಸ್ಸು ಬದಲಾಯಿಸಿ ಮೇಲಿನ ವಿಧಾನದ ಮೂಲಕ ಆಚರಣೆ ಅನುಷ್ಠಾನಗೊಳಿಸೋಣ...

- ಸುರೇಶ ತಂಗೋಡ ಗದಗ582101 

ಮೊ:6364467324

Email: sdhallalli24@gmail.com



Share this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jul 12 2025 10:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕರಡಿ ಪತ್ತೆಗಾಗಿ ಡ್ರೋನ್ ಬಳಕೆ
Jul 12 2025 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾತ್ರಿ ಹೊಲಗಳಿಗೆ ಒಬ್ಬರೆ ಹೋಗಬೇಡಿ : ಅರಣ್ಯ ಇಲಾಖೆ
Jul 11 2025 8:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರೈತನ ಮೇಲೆ ಕರಡಿ ದಾಳಿ
Jul 11 2025 8:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಿಂಧನೂರು ಹುಬ್ಬಳ್ಳಿ ಸಿಂಧನೂರು ಪ್ಯಾಸೆಂಜರ್ ರೈಲು ಹೊಸ ವೇಳಾಪಟ್ಟಿ
Jul 11 2025 7:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ಹೊಸ ರೈಲು
Jul 11 2025 10:33AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಹೋಗಿದ್ದ ಪ್ರೇಮಿಗಳು ಮರಳಿ ಬಾರದ ಊರಿಗೆ ಹೊರಟರು
Jul 10 2025 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಊರು ತೊರೆದು ಕಾಲುವೆಗೆ ಜಿಗಿದ ಪ್ರೇಮಿಗಳು
Jul 9 2025 7:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗ್ರಾಮೀಣ ಅಂಚೆ ನೌಕರರಿಂದ ಕೊಪ್ಪಳದಲ್ಲಿ ಧರಣಿ
Jul 8 2025 9:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹೆಚ್ಚು ಫಂಡ್ ತರುವ ಅನುಕೂಲ ಶತ್ರು ರಾಯರಡ್ಡಿ
Jul 8 2025 9:45PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗಿನ ಹೆಲಿಕಾಪ್ಟರ್ ಗೆಳೆಯ ವಿರುದ್ದ ರಡ್ಡಿ ವಾಗ್ದಾಳಿ





     
Copyright © 2021 Agni Divya News. All Rights Reserved.
Designed & Developed by We Make Digitize