Advt. 
 Views   4207

ಆರನೇ ಕ್ಲಾಸ್ ಓದುವಾಗ ಬೆಟ್ಟದ ಹೂ ನೋಡಿದ್ದೆ

Mar 14, 2022, 05:06 PM IST
ಆರನೇ ಕ್ಲಾಸ್ ಓದುವಾಗ ಬೆಟ್ಟದ ಹೂ ನೋಡಿದ್ದೆ

(ಕೊಪ್ಪಳದ ಪಟಾಕಿ ಬಸು ಕಿರುಚಿತ್ರಗಳ ನಿರ್ದೇಶಕರು, ಯುಟೂಬರ್ ಕೂಡ ಹೌದು. ಪುನೀತ್ ರಾಜಕುಮಾರವರ ಬಗ್ಗೆ ಅಪಾರ  ಪ್ರೀತಿ ಅಭಿಮಾನದ ಬಸು ಅವರ ಬಗ್ಗೆ ಮಾತನಾಡಿದ್ದಾರೆ)

ನಾನು ಇಷ್ಟಪಡುವ ನಟರಲ್ಲಿ  ಕಮಲಹಾಸನ್ ಹಾಗೂ ಪುನೀತ್ ರವರು. ಅವರ ಬೆಟ್ಟದ ಹೂ ಸಿನಿಮಾದಿಂದ ಇಷ್ಟ ಆದರು.  ಆಗ ಬಹುಶಃ ನಾನು ಆರನೇ ಕ್ಲಾಸ್ ಓದುತ್ತಿದ್ದೆ. ನಮ್ಮ ತಂದೆ ಕರೆದುಕೊಂಡು ಹೋಗಿದ್ರು ಗಂಗಾವತಿಯಲ್ಲಿ. ಟಾಕೀಸ್ ಯಾವುದು ಅಂತ ಸರಿಯಾಗಿ ನೆನಪಿಲ್ಲ. ಅಲ್ಲಿ ಬೆಟ್ಟದ ಹೂ ಸಿನಿಮಾ ನೋಡಿದ್ದೆ.

ರೇಡಿಯೋದಲ್ಲಿ ಆ ಹಾಡು ಬರುತ್ತಿತ್ತು. 'ತಾಯಿ ಶಾರದೆ ಲೋಕಪೂಜಿತೆ....ಅದನ್ನು ನಾವು ಕೇಳಿ ಕೇಳಿ ಪುನೀತ್ ರವರನ್ನು ಇನ್ನಷ್ಟು ಇಷ್ಡಪಡೋಕೆ ಆರಂಭಿಸಿದೇವೆನೋ  ಅನಿಸುತ್ತೆ. ಪುನೀತ್ ರವರ ಸಿನಿಮಾಗಳಲ್ಲಿ ಯಾವುದೇ ರೀತಿಯ ಅಭಾಸಗಳ್ತಿರಲಿಲ್ಲ. ಪ್ರತಿಯೊಬ್ರು ಫ್ಯಾಮಿಲಿ ಜೊತೆ ನೋಡುವಂಥ ಸಿನಿಮಾ ಮಾಡುವುದರಲ್ಲಿ ಕನ್ನಡದಲ್ಲಿ ಮೊದಲಿಗರು ಅಣ್ಣಾವ್ರು. ನಂತರ ಇವರೆ (ಅಪ್ಪು) . ಸಿನಿಮಾದಲ್ಲಿ ಕೆಟ್ಟ ಹವ್ಯಾಸಗಳ ದೃಶ್ಯ ಇರುತ್ತಿರಲಿಲ್ಲ. ಕಮರ್ಷಿಯಲ್ ಆಗಿ ಹಾಡುಗಳಿದ್ರೂ ಅಶ್ಲಿಲತೆ ಇರುತ್ತಿರಲಿಲ್ಲ ಅವರ ಸಿನಿಮಾಗಳಲ್ಲಿ.

ಅವರ ಸಿನಿಮಾಗಳಲ್ಲಿ ಅತಿ ಹೆಚ್ಚು ಇಷ್ಟಪಟ್ಟಿದ್ದು ಅರಸು ಸಿನಿಮಾ. ಆ ಸಿನಿಮಾದಲ್ಲಿ ದುಡ್ಡಿನ ಮಹತ್ವದ ಬಗ್ಗೆ , ಮನುಷ್ಯರಿಗೆ ಇರೋ ದುಡ್ಡಿನ ವ್ಯಾಮೋಹದ ಬಗ್ಗೆ , ದುಡಿಮೆಯ ಬಗ್ಗೆ ಬಹಳ ಚೆನ್ನಾಗಿ ತೋರಿಸಿದ್ದಾರೆ.

ಆಕಾಶ ಸಿನಿಮಾದಲ್ಲಿ ಒಂದು ದೃಶ್ಯ ಬರುತ್ತೆ. ಯುವಕ ಲವ್ ಫೆಲ್ಯೂರ್ ಆಗಿ ಸೂಸೈಡ್ ಮಾಡಿಕೊಳ್ಳೊಕೆ ಹೋಗ್ತಾನೆ. ಆತನನ್ನು ತಡೆದು ಯಾವುದೇ ಒಂದು ಉದ್ಯೋಗ ಮಾಡು. ಉದ್ಯೋಗದಲ್ಲಿ ಸಣ್ಣದು ದೊಡ್ಡದು ಅಂತ ಇರಲ್ಲ. ಎನೇ ಮಾಡಿದರೂ ಚೊಕ್ಕಟವಾಗಿ ಮಾಡು ಅಂದಾಗ ಆ ಯುವಕ ಉಪ್ಪಿನಕಾಯಿ ವ್ಯಾಪಾರ ಆರಂಭಿಸುತ್ತಾನೆ. ಚೆನ್ನಾಗಿ ದುಡಿತಾನೆ. ಸ್ವಲ್ಪ ದಿನ ಆದ ಮೇಲೆ ಅವನು ಬಂದಾಗ ಇವರು ಗುರುತು ಹಿಡಿಯಲ್ಲ. ಯುವಕ ಗುರುತು ಹಿಡಿದು ಮಾತನಾಡಿಸಿ ತನ್ನ ತಾಯಿ ಪರಿಚಯಿಸ್ತಾನೆ. ಆ ದೃಶ್ಯ ನೋಡಿ ಬದುಕು ಕಟ್ಟಿಕೊಂಡವರು ಇದ್ದಾರೆ.

ಒರ್ವ ಆದರ್ಶ ವ್ಯಕ್ತಿ ನಟರಾಗಿ ಸಿನಿಮಾದಲ್ಲಿ ನಟಿಸುವಾಗ ಮನರಂಜನೆ ಜೊತೆ ಆದರ್ಶವನ್ನೂ ಹೇಳಬಹುದು ಅಂತ ಸಾಬೀತು ಪಡಿಸಿದ್ದಾರೆ ಅಪ್ಪು. ಪರಭಾಷಾ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತೆ ಕನ್ನಡ ಸಿನಿಮಾ ಮಾಡ್ತಾ ಇದ್ರು. ಹಾಡು, ಡ್ಯಾನ್ಸ್ , ಫೈಟ್- ಮೇಕಿಂಗ್ ನಲ್ಲಿಯೂ. ಪರಭಾಷಾ ನಟರೂ ಮೆಚ್ಚುವ  ನಟ ಅಂದ್ರೆ ಪುನೀತ್ ರಾಜಕುಮಾರರವರು.

ದಕ್ಷಿಣ ಭಾರತದ ಭಾಷೆಗಳ ಸಿನಿಮಾಗಳು ಮೀರುವಂತೆ ಸಿನಿಮಾ ಮಾಡಬೇಕಂದ್ರೆ ಪ್ರತಿಯೊಂದರಲ್ಲಿ ಪರ್ಫೆಕ್ಟ್ ಆಗಿರಬೇಕು. ಹಾಗೇ ಪೂರ್ವ ತಯಾರಿ ಇಲ್ಲದೆ ಒಂದು ದೃಶ್ಯವನ್ನೂ ಮಾಡುತ್ತಿರಲಿಲ್ಲ ಅವರು.

ಕನ್ನಡದ ಎಲ್ಲ ನಟರ ಅಭಿಮಾನಿಗಳು ಪುನೀತ್ ರಾಜಕುಮಾರರವರ ಸಿನಿಮಾ ನೋಡ್ತಾ ಇದ್ರು ಅದನ್ನ ನಾನು ಕಣ್ಣಾರೆ ಕಂಡಿದ್ದೇನೆ. ಅವರು ಅಂದ್ರೆ ಎಲ್ಲರಿಗೂ ಪ್ರೀತಿ ಇಷ್ಟ.

ಶೂಟಿಂಗ್ ನಲ್ಲಿ ಎಲ್ಲರನ್ನೂ ಪ್ರೀತಿಯಿಂದ ಕಾಣ್ತಾ ಇದ್ರು. ಅವರ ಕಷ್ಟ ಅರಿತು ಸಹಾಯ ಮಾಡುತ್ತಿದ್ರು. ಅವರು ಮಾಡಿದ ಸಹಾಯ ಎಷ್ಟು ಹೇಳಿದ್ರು ಕಡಿಮೆ.

ಅವರ ನೆನಪುಗಳೊಂದಿಗೆ ಅವರ ಆದರ್ಶ ಪಾಲನೆ ಮಾಡ್ತಾ ಹೋಗೋಣ.



Share this news

 Comments   1

Post your Comment

PEOPLE'S OPINION


Nandita   Mar 14 2022 9:16PM



LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize