ಕೊಪ್ಪಳ: ಕನ್ನಡದ ಖ್ಯಾತ ನಿರ್ದೇಶಕರಾದ ಯೋಗಭಟ್ ಹಾಗೂ ರವಿ ಶಾಮನೂರು ನಿರ್ಮಾಣದ ' ಪದವಿ ಪೂರ್ವ ' ಸಿನಿಮಾ ಡಿ.30 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಹರಿಪ್ರಸಾದ ಜಯಣ್ಣ ನಿರ್ದೇಶನ ಮಾಡಿದ್ದಾರೆ.
1996 ರ ಕಾಲದ ಫ್ರೆಂಡ್ಸ್ ಶಿಪ್ , ಪ್ರೀತಿ , ಫ್ಯಾಮಿಲಿ ಸೆಂಟಿಮೆಂಟ್ ಮೂರು ಹದವಾಗಿ ಸೇರಿರುವ ಸಿನಿಮಾ ನೋಡಿದರೆ ಫೀಲ್ ಗುಡ್ ಕೊಡುವ ಸಿನಿಮಾ ಪದವಿ ಪೂರ್ವ ಎಂದು ನಾಯಕ ನಟ ಪೃಥ್ವಿ ಶಾಮನೂರು ಹೇಳಿದರು.
ಇದು ಬಹುತೇಕ ಹೊಸಬರು ನಟಿಸಿರುವ ಸಿನಿಮಾ ಶರತ್ ಲೋಹಿತಾಶ್ವ, ಆದಿತಿ ಪ್ರಭುದೇವ ಕೂಡ ನಟಿಸಿದ್ದು ಹಳೇ ಬೇರು ಹೊಸ ಚಿಗುರು ಎನ್ನಬಹುದು. ನುರಿತ ತಂತ್ರಜ್ಞರು ಈ ಸಿನಿಮಾಗೆ ಕೆಲಸ ಮಾಡಿದ್ದಾರೆ.
ಕನ್ನಡದ ಸ್ಟಾರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿರುವ ಪದವಿ ಪೂರ್ವ ಸಿನಿಮಾದಲ್ಲಿ ವಿಜಯಪ್ರಕಾಶ ಒಂದು ಹಾಡು ಹಾಡಿದ್ದಾರೆ.
ನಾಯಕನಾಗಿ ಪೃಥ್ವಿ ಶಾಮನೂರು, ನಾಯಕಿಯಾಗಿ ಅಂಜಲಿ ಅನೀಶ್ ಹಾಗೂ ಇವರ ಪಿಯುಸಿ ವಿದ್ಯಾರ್ಥಿ ಫ್ರೆಡ್ಸ್ ಆಗಿ ವಿಜಯೇಶ ( ಟಿಕ್ ಟಾಕ್ ಖ್ಯಾತಿ ) ರಜನೀಶ, ಸುಷ್ಮೀತಾ, ವೆಂಕಟ್ ಸೇರಿದಂತೆ ಅನೇಕರು ನಟಿಸಿದ್ದಾರೆ.
ಶಿವಮೊಗ್ಗ , ಮಂಗಳೂರು, ಹೊಸನಗರ, ಬೆಂಗಳೂರಿನಲ್ಲಿ ಪದವಿ ಪೂರ್ವ ಸಿನಿಮಾ ಶೂಟಿಂಗ್ ಆಗಿದೆ.
ಚಿಕ್ಕವಯಸ್ಸಿನಿಂದ ನಟಿಸುವ ಆಸೆ ಇತ್ತು ಈಗ ಅದು ಕೈಗೂಡಿದೆ. ಈಗ ಹೀರೋ ಆಗಿ ನಟಿಸಿದ ನನ್ನ ಮೊದಲ ಸಿನಿಮಾ ಪದವಿ ಪೂರ್ವ ನೋಡಿ ಹರಸಿ ಹಾರೈಸುವಂತೆ ಕನ್ನಡಿಗರಲ್ಲಿ ಮನವಿ ಮಾಡಿಕೊಂಡರು ನಟ ಪೃಥ್ವಿ ಶಾಮನೂರು.
ಕೊಪ್ಪಳದ ವಿವಿಧ ಕಾಲೇಜುಗಳ ಹತ್ತಿರ ಪದವಿ ಪೂರ್ವ ಸಿನಿಮಾ ಪ್ರಚಾರ ಕಾರ್ಯವನ್ನು ಚಿತ್ರ ತಂಡ ನಡೆಸಿತು.