ಕನ್ನಡದ ಪಾಲಾರ್ ಚಲನಚಿತ್ರದ ಪೋಸ್ಟರ್ ಅನ್ನು ನಟ ಡಾಲಿ ಧನಂಜಯ ಬಿಡುಗಡೆಗೊಳಿಸಿದರು. ಪಾಲಾರ್ ಸಿನಿಮಾ ಬಗ್ಗೆ ತಿಳಿದು ಚಿತ್ರ ತಂಡವನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡ ಡಾಲಿ ಧನಂಜಯ ಪಾಲಾರ್ ಹೊಸಬರ ಸಿನಿಮಾ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪಾಲಾರ್ ಸಿನೆಮಾ ಅವಿಭಜಿತ ಕೋಲಾರ ಜಿಲ್ಲೆ ಮತ್ತು ದೇವನಹಳ್ಳಿ ಭಾಗದಲ್ಲಿ ನಡೆದ ನೈಜ್ಯ ಘಟನೆಗಳನ್ನು ಅದೇ ಭಾಗದಲ್ಲಿ ಮಾತನಾಡುವ ಕನ್ನಡ ಭಾಷೆಯಲ್ಲಿ ಚಿತ್ರೀಕರಣ ಮಾಡಿದ್ದು ಇದು ಒಂದು ಮಹಿಳಾ ಪ್ರಧಾನ ಚಿತ್ರ, ಸಂಘರ್ಷದ ಕಥೆ, ತಮಗೂ ಬದುಕಲು ಹಕ್ಕಿದೆ ಎಂದು ತೋರಿಸುವ ಕಥೆ ಈ ಸಿನೆಮಾ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹೊಸದೊಂದು ಅನುಭವ ನೀಡಲಿದೆ, ಚಿತ್ರ ಕಮರ್ಷಿಯಲ್ ಆಗಿದೆ ಎಂದು ತಿಳಿದು ಬಂದಿದೆ.
ತೆಲುಗಿನ ‘ಸಿನಿಮಾ ಬಂಡಿ’ ಖ್ಯಾತಿಯ ನಟಿ, ಕನ್ನಡ ಕೋಗಿಲೆ ಗಾಯಕಿ ವೈ.ಜಿ.ಉಮಾ ಕೋಲಾರ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ನೀನಾಸಂ ಆದಿಮ ನಲ್ಲಿ ಪರಿಣಿತಿ ಪಡೆದಿರುವ ನಾಯಕಿ ಉಮಾ ಜೊತೆ ನಾಯಕ ನಟನಾಗಿ ರಾಷ್ಟ್ರೀಯ ನಾಟಕ ಶಾಲೆ (NSD) ಯ ತಿಲಕ್ ರಾಜ್ ಅವರು ನಟಿಸಿದ್ದಾರೆ.
ಚಿತ್ರಕ್ಕೆ ಕ್ಯಾಮರಾಮನ್ ಆಸಿಫ್ ರೆಹಾನ್, ಸಂಕಲನ ವಲಿ ಕುಲಾಯಿಸ್, ಚಿತ್ರಕ್ಕೆ ರಾಜಮೌಳಿ ತಂಡದ ಸಾಹಿತಿ ವರದರಾಜ್ ಚಿಕ್ಕಬಳ್ಳಾಪುರ ಅವರು ಕೈ ಜೋಡಿಸಿದ್ದು 4 ಹಾಡುಗಳನ್ನು ನೀಡಿದ್ದಾರೆ. ಸುಬ್ರಮಣ್ಯ ಆಚಾರ್ಯ ಸಂಗೀತ ನೀಡಿದ್ದಾರೆ.
ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ, ಚಿಕ್ಕಾಬಳ್ಳಾಪುರ ಸುತ್ತಮುತ್ತ ಪಾಲಾರ್ ಚಿತ್ರೀಕರಣಗೊಂಡಿದೆ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಬಿಡುಗಡೆಗೆ ಸಿದ್ಧವಾಗುತ್ತಿದೆ.
ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಅಡಿಯಲ್ಲಿ ಯುವ ನಿರ್ಮಾಪಕಿ ಕೆ.ಆರ್.ಸೌಜನ್ಯ, ಸೌಂದರ್ಯ ಕೆ.ಆರ್ ಮತ್ತು ನವೀನ್ ಕುಮಾರ್ ಬಾಬು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ಡಿಸೆಂಬರ್ ತಿಂಗಳಲ್ಲಿ ಸಿನೆಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.