Advt. 
 Views   624

ಮಕ್ಕಳಿಗೆ ಶಿಕ್ಷಣ ನೀಡುವುದೇ ದೊಡ್ಡ ಧರ್ಮ- ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು


ಕೊಪ್ಪಳ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಪುರಸ್ಕಾರ ಮಾಡೋದು ಅತ್ಯುತ್ತಮ ಕಾರ್ಯ.

ಪ್ರತಿಭೆ ಯಾರ ಸೊತ್ತಲ್ಲ. ಅದು ಬಜಾರದಲ್ಲಿ ಸಿಗುವುದಿಲ್ಲ. ಪ್ರತಿಭೆ ಶ್ರೀಮಂತರ ಸೊತ್ತಲ್ಲ. ಅದು ಸಾಧಕರ ಸೊತ್ತು ಅನ್ನೋದಕ್ಕೆ ಸಾಕ್ಷಿ ಕಲಾಂ ಅವರು. ಅವರು ಹಡಗು ಕಟ್ಟುವವರ ಮಗ. ದೇಶ ಅಷ್ಟೇ ಅಲ್ಲ ವಿಶ್ವವೇ ಮೆಚ್ಚುವಂಥವರು ಆಗಿದ್ರು.

ದುಡ್ಡು ಇದ್ರೆ ಜಗತ್ತು ಆಳಬಹುದು ಅಲ್ಲ. ಜ್ಞಾನ ಇದ್ರೆ ಜಗತ್ತು ಆಳಬಹುದು. ಮೆದುಳಿನಲ್ಲಿ ಜ್ಞಾನ, ಹೃದಯದಲ್ಲಿ ಎಲ್ಲರ ಬಗ್ಗೆ ಪ್ರೇಮ ಇದ್ದರೆ ಜಗತ್ತು ಆಳಬಹುದು.

ಗಾಂಧಿಜಿಯವರನ್ನು ಮಹಾತ್ಮಾ ಅಂತ ಕರಿತಾರೆ. ಅವರು ಏಕೆ ದೊಡ್ಡವರಾದರು ಅಂದ್ರೆ ಅವರದು ದೊಡ್ಡ ಮನಸ್ಸು ಅದಕ್ಕೆ ಅವರು ದೊಡ್ಡವರಾದರು.

ಯಾವುದೇ ಜಾತಿ ಧರ್ಮ ಇರಲಿ ಮಾಡಬೇಕಾದ ದೊಡ್ಡ ಕೆಲಸ ಅಂದ್ರೆ ಮಕ್ಕಳಿಗೆ ಶಿಕ್ಷಣ ನೀಡುವುದು. ಅದಕ್ಕಿಂತ ದೊಡ್ಡ ಧರ್ಮವೇ ಇಲ್ಲ. 

ಒಂದು ಮಗು ಬೆಳೆದು ಯಶಸ್ಸು ಪಡೆಯಬೇಕಾದರೆ ಮೂರು ವಿಷಯಗಳು ಮುಖ್ಯ.- ಪರಿಸರ, ಪ್ರೇರಣೆ, ಪ್ರಯತ್ನ.
ಪರಿಸರ ಚೆನ್ನಾಗಿರಬೇಕು.  ಜೊತೆಗೆ ಪ್ರೇರಣೆ ಪ್ರಯತ್ನ ಬೇಕು. ಇವು ಇದ್ರೆ ಉನ್ನತ ಸಾಧನೆ ಸಾಧ್ಯ.
 ಬೀಜ ಸಸಿಯಾಗಿ ಗಿಡವಾಗಿ ಬೆಳೆಯಲು ಒಳ್ಳೆಯ ಮಣ್ಣು ಗೊಬ್ಬರ ನೀರು ಚೆನ್ನಾಗಿರಬೇಕು ಆಗ ಸಸಿ ಗಿಡವಾಗುತ್ತೆ. 

ವಿದ್ಯಾರ್ಥಿಗಳು ಒಂದೇ ಶಾಲೆ ಒಂದೇ ಕ್ಲಾಸ್ ಅದೇ ವಿಷಯ ಓದಿರ್ತಾರೆ ಆದರೆ ಪರೀಕ್ಷೆಯಲ್ಲಿ ಕೆಲವರು ರ‌್ಯಾಂಕ್ ಬಂದ್ರೆ ಕೆಲವರು ಫೇಲ್ ಆಗಿರ್ತಾರೆ ಕಾರಣ ಪರಿಸರ ಚೆನ್ನಾಗಿದ್ದರೂ ಪ್ರೇರಣೆ ಬೇಕು.

ಬಿದಿರು ಕಟ್ಟಿಗೆ ಆಯುವವನ ಕೈಗೆ ಸಿಕ್ಕರೆ ಒಲೆಗೆ ಹೋಗಿ ಕರಕಲ ಆಗುತ್ತದೆ. ಅದು ಕೊಳಲು ಮಾಡುವವನ ಕೈಗೆ ಹೋದರೆ ದೇವರ ಕೈಗೆ ತಲುಪುತ್ತದೆ. ಅದಕ್ಕೆ ಹೇಳೋದು ಪರಿಸರ ಮುಖ್ಯ ಅಂತ.

ಯಾರಿಗೆ ತಂದೆ ತಾಯಿ ಹೀರೋ ಆಗಲ್ಲವೋ ಅವರ ಜೀವನ ಜೀರೋ. ನಮ್ಮ ತಂದೆ ತಾಯಿ ಶ್ರಮ ಅವರ ಬೆವರ ಹನಿ, ಅವರ ಜೀವನ ನಮಗೆ ಪ್ರೇರಣೆ ಆಗಬೇಕು. ಮಕ್ಕಳಿಗೆ ತಂದೆ ತಾಯಿ ಕೊಡಲಿಕ್ಕೆ ಸಾಧ್ಯ ಇರೋದು ಎರಡೇ. ಒಂದು ಶಿಕ್ಷಣ ಇನ್ನೊಂದು ಸಂಸ್ಕಾರ.

ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡದು ಪ್ರಯತ್ನ. ಎಷ್ಟೇ ಸೋಲು ಆಗಲಿ ಪ್ರಯತ್ನ ಮಾಡಬೇಕು. ಜೀವನದ ನಿಜವಾದ ಸೌಂದರ್ಯ ಅಂದ್ರೆ ಬಿದ್ದವರು ಎದ್ದು ನಡೆಯೋದು ಓಡೋದು. ಕಷ್ಟ ಅಪಮಾನ ನೋವುಗಳ ಮಧ್ಯೆಯೂ ಸಾಧನೆ ಮಾಡಬೇಕುShare this news

 Comments   0

Post your Comment

PEOPLE'S OPINION

Be the first person to comment this.

ಹೊಸ ಸುದ್ದಿಗಳು


Jun 14 2024 8:17PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ಲಿಂಗಾಯತ ಸಮಾವೇಶ
Jun 13 2024 4:57PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಮಳೆ ನೀರು ಮನೆ ಹೊಕ್ಕುವ ಭೀತಿ
Jun 13 2024 3:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ತಹಶೀಲ್ ಕಚೇರಿ ಶಿರಸ್ತೇದಾರ ಲೋಕಾಯುಕ್ತ ಬಲೆಗೆ
Jun 11 2024 7:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಹದಗೆಟ್ಟ ಈ ರಸ್ತೆ ಶಾಸಕರಿಗೆ ಕಾಣುವುದಿಲ್ಲ ?
Jun 9 2024 9:03PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮರಗಳು ಬೆಳೆದಷ್ಟು ಮನುಕುಲ ಉಳಿಯುತ್ತದೆ : DSP ಸವರಗೋಳ
Jun 9 2024 7:44PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಜ್ಯ ಸರಕಾರ ಒಪ್ಪಿದರೂ ಕೇಂದ್ರ ಸ್ಪಂದಿಸಿಲ್ಲ
Jun 9 2024 12:52PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ
Jun 9 2024 7:46AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಸಾವಿರಾರು ಜನರಿಗೆ ಉಚಿತ ಅಸ್ತಮಾ ಔಷಧಿ
Jun 7 2024 9:36PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಲೋಕಸಭೆ ಚುನಾವಣೆ ಪ್ರಚಾರ ಜೋರು : ಪಡೆದ ಮತಗಳೆಷ್ಟು ?
Jun 7 2024 9:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ವಿನ್ : ಮ್ಯಾನ್ ಆಫ್ ಮ್ಯಾಚ್ ಯಾರಿಗೆ ?

     
Copyright © 2021 Agni Divya News. All Rights Reserved.
Designed & Developed by We Make Digitize