ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ನಿನಾ ಗುಪ್ತ ಅಭಿನಯದ ಹಿಂದಿ ಸಿನಿಮಾ ಗುಡ್ ಬೈ ಶುಕ್ರವಾರ ಬಿಡುಗಡೆಯಾಗಿದೆ.
ತಾರಾ ಭಲ್ಲಾ (ರಶ್ಮಿಕಾ ಮಂದಣ್ಣ) ಪಾರ್ಟಿಯಲ್ಲಿ ಇರುವಾಗ ತಂದೆ ಹರೀಶ ಭಲ್ಲಾ ( ಅಮಿತಾಬ್ ಬಚ್ಚನ್) ಮೊಬೈಲ್ ಗೆ ಕರೆ ಮಾಡಿದ್ರೆ ಸ್ವೀಕರಿಸಲ್ಲ. ಮರುದಿನ ತಾರಾ ಕರೆ ಮಾಡುತ್ತಾಳೆ. ಆಗ ಆಕೆಯ ತಂದೆ ಹೇಳೋದು ನಿನ್ನ ತಾಯಿ ಗಾಯಿತ್ರಿ (ನಿನಾ ಗುಪ್ತ) ತೀರಿಹೋದಳು ಅದನ್ನ ಹೇಳೋಕೆ ಕರೆ ಮಾಡಿದ್ದೆ.
ಕಥೆ ಮುಂದೇನು ? ಅದನ್ನು ಸಿನಿಮಾ ನೋಡಿಯೇ ಅರಿಯಬೇಕು.
ಭಾವನಾತ್ಮಕ ಕೌಟುಂಬಿಕ ಕಥೆಯ ಸಿನಿಮಾ ಗುಡ್ ಬೈ ಸಾಂಪ್ರದಾಯಿಕ ನಂಬಿಕೆಗಳ ತಂದೆ ಆಧುನಿಕ ವಿಚಾರಗಳ ಮಗಳ ಪಾತ್ರದಲ್ಲಿ ರಶ್ಮಿಕಾ ಮತ್ತು ಬಿಗ್ ಬಿ ಅಭಿನಯಿಸಿದ್ದಾರೆ.
ಪುಷ್ಪಾ ಸಿನಿಮಾ ನಟನೆಯಿಂದ ದೇಶದ ತುಂಬ ಖ್ಯಾತಿಯಾಗಿರುವ ರಶ್ಮಿಕಾ ನಟಿಸಿದ ಮೊದಲ ಹಿಂದಿ ಸಿನಿಮಾ ಗುಡ್ ಬೈ.
ಬಿಗ್ ಬಿ ಜೊತೆ ನಟಿಸಿದ ರಮ್ಯ ನಂತರ ನಟಿಸಿದ ಕನ್ನಡತಿ ರಶ್ಮಿಕಾ. ಅಮೃತಧಾರೆಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಬಿಗ್ ಬಿ. ಈಗ ಪೂರ್ಣ ಪ್ರಮಾಣದ ಪಾತ್ರದಲ್ಲಿ ಬಿಗ್ ಬಿ ಜೊತೆ ನಟಿಸಿರುವುದೆ ರಶ್ಮಿಕಾ ಹೆಗ್ಗಳಿಕೆ.
ಇಬ್ಬರು ಹಿರಿಯ ಜೀವಗಳು ಮತ್ತು ಅವರಲ್ಲಿ ಒಬ್ಬರು ಇಲ್ಲವಾದ ಮೇಲೆ ಮತ್ತೊಬ್ಬರನ್ನು ಕಾಡುವ ಖಾಲಿತನದ ದೃಶ್ಯಗಳು ಪ್ರೇಕ್ಷಕರನ್ನು ವಿಷಾದಗೊಳಿಸುತ್ತವೆ.