ಕೊಪ್ಪಳದಲ್ಲಿ ಜುಲೈ 24 ರವಿವಾರ ಅಪರೂಪದ ಮತ್ತು ವಿಶೇಷ ಸಾಹಿತ್ಯಕ ಕಾರ್ಯಕ್ರಮ ಜರುಗಲಿದೆ.
ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಹಾಗೂ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಸವರಾಜ ಪುಜಾರ ಅವರ ಕೃತಿಗಳ ಲೋಕಾರ್ಪಣೆ ಜರುಗಲಿದೆ.
ವಿಶೇಷತೆ ಅಂದ್ರೆ ಸಾಹಿತಿಯೊಬ್ಬರ ಏಕಕಾಲದಲ್ಲಿ 5 ಕೃತಿಗಳ ಲೋಕಾರ್ಪಣೆ.
ಇನ್ನೊಂದು ವಿಶೇಷ ಅಂದ್ರೆ 2000-21 ರ ಸಾಲಿನ ವಿದ್ಯಾರ್ಥಿಗಳ ಬಳಗ ಕೃತಿ ಲೋಕಾರ್ಪಣೆ ಮಾಡಲಿದೆ.
ಮತ್ತೊಂದು ವಿಶೇಷ ಅಂದ್ರೆ ಅದೇ 2000-21 ರ ಸಾಲಿನ ವಿದ್ಯಾರ್ಥಿಗಳ ಬಳಗದವರು ಕೃತಿಗಳ ಕುರಿತು ಮಾತನಾಡಲಿದ್ದಾರೆ.
ಲೋಕಾರ್ಪಣೆಗೊಳ್ಳಲಿರುವ 5 ಕೃತಿಗಳು
1. ಕೊಪ್ಪಳ ಜಿಲ್ಲೆಯ ಕೋಮು ಸೌಹಾರ್ದ ತಾಣಗಳು - ಇದು ಜಿಲ್ಲೆಯ ಸೌಹಾರ್ದ ಪರಂಪರೆಯ ತಾಣಗಳ ಇತಿಹಾಸ ತಿಳಿಸುವ ಮಾರ್ಗದರ್ಶಿ ಮತ್ತು ಮಹತ್ವದ ಕೃತಿ.
2. ಮೌನದೊಳಗಿನ ಮಾತು- ಕವನ ಸಂಕಲನ
3.ಕಾಲ್ನಡಿಗೆ- ಲೇಖನಗಳ ಮಾಲೆ
4. ಮಾತೆಂಬುದು ಮಕರಂದ
5. ಹಿತ್ತಲ ಗಿಡ ಮದ್ದು- ಪಾರಂಪರಿಕ ಔಷಧಿಗಳ ಕುರಿತ ಕೃತಿ.
ಕಾರ್ಯಕ್ರಮ ಉದ್ಘಾಟಿಸುವವರು ಉದ್ಯಮಿ ಬಸವರಾಜ ಗೌರಾ, ಭಾಗ್ಯನಗರದ ಉದ್ಯಮಿ ಶ್ರೀನಿವಾಸ ಗುಪ್ತಾ ಅತಿಥಿಯಾಗಿ ಆಗಮಿಸಲಿದ್ದು ಅಧ್ಯಕ್ಷತೆಯನ್ನು ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಬಳಗದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಗೌಡ ಪಾಟೀಲ್ ಹಲಗೇರಿ ವಹಿಸುವರು.
ಕೃತಿಗಳನ್ನು ಲೋಕಾರ್ಪಣೆಗೊಳಿಸುವವರು
1. ರಾಘವೇಂದ್ರ
2. ಮುತ್ತುರಾಜ ಕುಷ್ಟಗಿ ನಗರಸಭೆ ಸದಸ್ಯರು
3. ಅಮರೇಶ ಉಪಲಾಪುರ ತಾ.ಪಂ.ಮಾಜಿ ಅಧ್ಯಕ್ಷರು
4. ಆರ್.ಸಿ.ಪಾಟೀಲ್
5. ವೀರನಗೌಡ ಪೋತ್ನಾಲ್ ವಕೀಲರು ಮಾನವಿ.
ಕೃತಿಗಳ ಕುರಿತು ಮಾತನಾಡುವವರು
1. ಶಂಕ್ರಯ್ಯ ಅಬ್ಬಿಗೇರಿಮಠ
2.ಮಂಜುನಾಥ ಡೊಳ್ಳಿನ
3. ಮಂಜುನಾಥ ದಿಮ್ಮಕ್ಕನವರ
4. ಗವಿಸಿದ್ದಪ್ಪ ದೊಡ್ಡಮನಿ
5. ಶ್ರೀಮತಿ ಬೇಬಿ
ಕಾರ್ಯಕ್ರಮ ಬೆಳಗ್ಗೆ 10.30 ಕ್ಕೆ ಕೊಪ್ಪಳದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಜರುಗಲಿದೆ. ಡಾ.ಬಸವರಾಜ ಪುಜಾರ ಅವರು ಸರ್ವರಿಗೂ ಸ್ವಾಗತ ಕೋರಿದ್ದಾರೆ.