ಕೊಪ್ಪಳ : ಪಾದಚಾರಿಗಳಿಗೆ ದಾರಿ ಮಾಡಿಕೊಡಲು ಬೈಕ್ ನಿಧಾನಗೊಳಿಸಿದಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಬಸ್ ಕಂಡಕ್ಟರ್ ಮೃತಪಟ್ಟ ಘಟನೆ ಕುಷ್ಟಗಿ ತಾಲೂಕು ವಣಗೇರಿ ಬಳಿ NH ನಲ್ಲಿ ನಡೆದಿದೆ.
ಮೃತರನ್ನು ಗದಗ ಜಿಲ್ಲೆ ಗಜೇಂದ್ರಗಡ ಬಸ್ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾದಿಗುಪ್ಪಾ ಗ್ರಾಮದ ಮೈಲಾರಪ್ಪ (40) ಎಂದು ತಿಳಿದುಬಂದಿದೆ.
ಮೈಲಾರಪ್ಪ ಅವರು ಕ್ಯಾದಿಗುಪ್ಪಾದಿಂದ ಕುಷ್ಟಗಿಗೆ ಬೈಕ್ನಲ್ಲಿ ಬರುತ್ತಿದ್ದರು. ಈ ವೇಳೆ ವಣಗೇರಿ ಹತ್ತಿರ ಹೆದ್ದಾರಿಯಲ್ಲಿ ಪಾದಚಾರಿಗಳಿಗೆ ದಾರಿ ಮಾಡಿಕೊಡಲು ಹೋದಾಗ ಹಿಂದಿನಿಂದ ಬಂದ ಲಾರಿ ಬೈಕ್ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಮೈಲಾರಪ್ಪ ಮೃತಪಟ್ಟಿದ್ದಾರೆ.
ಘಟನೆ ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.