ಕೊಪ್ಪಳ : ಗಂಗಾವತಿ ತಾಲೂಕು ಚಿಕ್ಕರಾಂಪುರದ ಅರ್ಚಕರಾದ ವಿದ್ಯಾದಾಸ ಬಾಬಾ ವಿರುದ್ದ ಗಂಗಾವತಿ ತಹಶಿಲ್ದಾರ ನೀಡಿದ ಅತಿಕ್ರಮ ಪ್ರವೇಶ ಹಾಗೂ ಸರಕಾರಿ ಕರ್ತವ್ಯಕ್ಕೆ ಅಡ್ಡಿ ದೂರಿನಂತೆ FIR ದಾಖಲಾಗಿದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಿನ್ನೆ ಮಧ್ಯರಾತ್ರಿ ಸುಮಾರಿಗೆ ದೂರು ದಾಖಲಾಗಿದೆ.
ಕಳೆದ ಎಪ್ರಿಲ್ ನಲ್ಲಿ ಉಚ್ಚನ್ಯಾಯಾಲಯದ ಆದೇಶದಂತೆ ವಿದ್ಯಾದಾಸ ಬಾಬಾ ಅಂಜನಾದ್ರಿ ಬೆಟ್ಟದ ಅಂಜನಾದ್ರಿ ದೇವಸ್ಥಾನದ ಪೂಜೆ ಮತ್ತು ಅರ್ಚಕರ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದರು.
ಅವರಿಗೆ ಅಲ್ಲಿ ಉಳಿದುಕೊಳ್ಳಲು ಕೋಣೆ ಮತ್ತು ವೇದಪಾಠಶಾಲೆ ನಡೆಸಲು ಸ್ಥಳಾವಕಾಶ ಹಾಗೂ ಜೊತೆಗೊಬ್ಬ ಸಹಾಯಕ ಇರಲು ಅವಕಾಶ ಆಡಳಿತ ಅವಕಾಶ ನೀಡಿದೆ.
ಆದರೆ ನಿನ್ನೆ ಮಧ್ಯಾಹ್ನ 4.30 ಸುಮಾರಿಗೆ ಅಂಜನಾದ್ರಿ ಬೆಟ್ಟದ ಮ್ಯಾನೇಜರ್ ಕಚೇರಿಗೆ ಹೋದ ವಿದ್ಯಾದಾಸ ಬಾಬಾ ಮ್ಯಾನೇಜರ್ ವೆಂಕಟೇಶ ಹಾಗೂ ಸಿಬ್ಬಂದಿಯನ್ನು ಹೊರಹಾಕಿ ಕಚೇರಿಗೆ ಬೀಗ ಹಾಕಿದ್ದಾರೆ.
ವಿಷಯ ತಿಳಿದು ತಹಶಿಲ್ದಾರ ವಿನಾಯಕ ಗೊಡಬೋಲೆ ಅಲ್ಲಿಗೆ ತೆರಳಿ ಕಚೇರಿಗೆ ಹಾಕಿರುವ ಬೀಗ ತೆರೆಯುವಂತೆ ವಿದ್ಯಾದಾಸ ಬಾವಾರಿಗೆ ಹೇಳಿದರೆ ನ್ಯಾಯಾಲಯದ ಆದೇಶ ನನ್ನ ಪರವಾಗಿದೆ. ನಾನೆ ಅಂಜನಾದ್ರಿ ಬೆಟ್ಟಕ್ಕೆ ವಾರಸ್ದಾರ ನೀವು ಇದಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ತಹಶಿಲ್ದಾರರಿಗೆ ಅಡ್ಡಗಟ್ಟಿ ಕರ್ತವ್ಯ ನಿರ್ವಹಿಸದಂತೆ ಸರಕಾರಕ್ಕೆ ಕೆಲಸ ಅಡ್ಡಪಡಿಸಿದರು ಎಂದು ನೀಡಿದ ದೂರಿನಂತೆ ದೂರು ದಾಖಲಾಗಿದೆ.