Advt. 
 Views   340

ದಸರಾ ವೇದಿಕೆಯಲ್ಲಿ ಪರಿಸರದ ಕಳಕಳಿ

Oct 11, 2026, 04:24 PM IST
ದಸರಾ ವೇದಿಕೆಯಲ್ಲಿ ಪರಿಸರದ ಕಳಕಳಿ

ಕೊಪ್ಪಳ ಜನ ಕುತೂಹಲ, ಆಸಕ್ತಿಯಿಂದ ಕಾಯುತ್ತಿದ್ದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಅವರಿಂದ ಮೈಸೂರು ದಸರಾ ಇಂದು ಉದ್ಘಾಟನೆ ಆಯಿತು.

ಇನ್ನೊಂದು ಆಸಕ್ತಿಯೆಂದರೆ ಗವಿಶ್ರೀಗಳು ಉದ್ಘಾಟನೆ ನಂತರ ನೀಡುವ ಆಶೀರ್ವಚನದಲ್ಲಿ ಯಾವ ಯಾವ ವಿಷಯ ಇರಬಹುದು ಎಂಬುದು.

ದಸರಾ ಉದ್ಘಾಟನೆ ನಂತರ ಮಾತನಾಡಿದ ಗವಿಶ್ರೀಗಳು 'ಈ ನಾಡಿನ ಮಣ್ಣು , ನೀರು, ಪರಿಸರ ರಕ್ಷಿಸಬೇಕು. ಏಕೆಂದರೆ ಸ್ವಚ್ಚವಾದ ಮಣ್ಣು ಸ್ವಚ್ಚವಾದ ನೀರು ಸ್ವಚ್ಚವಾದ ಗಾಳಿ ಇವು ಯಾವ ಸರಕಾರಗಳು ಕೊಟ್ಟಿದ್ದಲ್ಲ. ನಿಸರ್ಗ ನಮಗೆ ಕೊಟ್ಟಿದ್ದು.

ನೀವು ಮಣ್ಣು ಕೆಡಿಸಬಾರದು, ನೀರು ಕೆಡಿಸಬಾರದು, ಗಾಳಿ ಕೆಡಿಸಬಾರದು ಏಕೆಂದರೆ ಇವನ್ನು ನಮಗೆ ನಿಸರ್ಗ ಕೊಟ್ಟಿದ್ದು ಮತ್ತು ನಿಸರ್ಗವೆ ನಮಗೆ ಜೀವಿಸುವ ಹಕ್ಕನ್ನು ಕೊಟ್ಟಿದೆ. ಜೀವಿಸುವ ಹಕ್ಕನ್ನು ಯಾವ ಸರಕಾರಗಳು ಕೊಟ್ಟಿದ್ದಲ್ಲ.

ಅದಕ್ಕೆ ಯಾವ ಸರಕಾರದಲ್ಲೂ ಯಾವ ಪ್ರಜೆಯೂ ನಾನು ಜೀವಿಸುವ ಹಕ್ಕು ಕಳೆದುಕೊಳ್ಳುತ್ತಿದ್ದೇನೆ ಅಂತ ಯಾರಿಗೂ ಭಯ ಬರಬಾರದು. ಸರಕಾರಗಳು ಅಂಥ ಭಯ ನಿವಾರಿಸಬೇಕಾಗುತ್ತದೆ'.

ಇವು ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ದಸರಾ ವೇದಿಕೆಯಲ್ಲಿ ಹೇಳಿದ ಆಯ್ದ ಮಾತುಗಳು. ಸದ್ಯ ಕೊಪ್ಪಳ ಮತ್ತು ಸುತ್ತಲಿನ ಹಳ್ಳಿಗಳ ಜನ ಅನುಭವಿಸುತ್ತಿರುವ ಬವಣೆ ಮತ್ತು ಜನರ ಸಂಕಷ್ಟ ನಿವಾರಿಸಬೇಕು ಎಂದು ಸರಕಾರಕ್ಕೆ ಮುಖ್ಯಮಂತ್ರಿ ಇರುವ ವೇದಿಕೆಯಲ್ಲಿ ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ 2025 ಫೆ. 24 ರಂದು ಕೊಪ್ಪಳ ಹತ್ತಿರ ಕಾರ್ಖಾನೆ ಬೇಡ, ಮಾಲಿನ್ಯಕಾರಕ ಕಾರ್ಖಾನೆ ಸೀಜ್ ಮಾಡಿ ಅಂತ ಕೊಪ್ಪಳ ಬಂದ್ ನಡೆಯಿತು.

ಅಂದು ಬಂದ್ ನಲ್ಲಿ ಶ್ರೀಗಳು ಭಾಗವಹಿಸಿ ತಾಲೂಕು ಕ್ರೀಡಾಂಗಣದಲ್ಲಿ ಹೇಳಿದ ಮಾತುಗಳು, ಸರಕಾರದ ಜವಾಬ್ದಾರಿ, ಜಿಲ್ಲೆಯ ಮೂವರು ಜನಪ್ರತಿನಿಧಿಗಳಿಗೆ ಕಾರ್ಕಾನೆ ವಿಸ್ತರಣೆ ರದ್ದು ಆದೇಶ ತನ್ನಿ ಎಂದು ಹೇಳಿದ ಜವಾಬ್ದಾರಿಯ ಕಿವಿಮಾತು ಯಾವುದೂ ಈವರೆಗಿನ ಒಂದೂವರೆ ವರ್ಷದಲ್ಲಿ ಈಡೇರಿಲ್ಲ.

ಅದೇ ಬೇಡಿಕೆ ಇಟ್ಟು ನಡೆದಿರುವ ನಿರಂತರ ಧರಣಿ ಇದೆ ಅಕ್ಟೋಬರ್ 31 ಕ್ಕೆ ಒಂದು ವರ್ಷ ಆಗಲಿದೆ. ಆವತ್ತು 48 ಗಂಟೆಗಳ ಕೊಪ್ಪಳ ಬಂದ್ ಕರೆ ಕೊಟಿದ್ದಾರೆ ಧರಣಿ ನಿರತ ಹೋರಾಟಗಾರರು.

ಈ ನಡುವೆ ಪರಿಸರ ಹಾಗೂ ಪ್ರಗತಿಪರ ವಿಚಾರದ ಸ್ವಾಮಿಜಿಗಳು, ಹೋರಾಟಗಾರರು, ರೈತ ಹೋರಾಟಗಾರರು, ಚಿಂತಕರು, ಸೆಲೆಬ್ರಿಟಿಗಳು ಈ ಹೋರಾಟದಲ್ಲಿ ಭಾಗವಹಿಸಿದ್ದಾರೆ.

ಒಟ್ಟಾರೆ ತಾವು ಆರಂಭಿಸಿದ ಕಾರ್ಖಾನೆ ವಿಸ್ತರಣೆ ವಿರೋಧಿ ಹೋರಾಟ ಹಾಗೂ ಅದರ ಮುಂದುವರೆದ ಭಾಗವಾಗಿ ನಡೆದಿರುವ ಧರಣಿ ಮತ್ತು ಸರಕಾರ, ಜನಪ್ರತಿನಿಧಿಗಳ ನಡೆಯನ್ನು ಶ್ರೀಗಳು ಸೂಕ್ಷ್ಮವಾಗಿ ಗಮನಿಸುತ್ತಲೆ ಇದ್ದಾರೆ.‌

ಈ ಎಲ್ಲದರ ನಡುವೆ ಶ್ರೀ ಗಳು ದಸರಾ ಉದ್ಘಾಟನೆ ಮಾಡುವ ಅವಕಾಶ ಬಂತು. ಸಿಎಂ ಸಮ್ಮುಖದಲ್ಲಿ ಸೂಚ್ಯವಾಗಿ ಪ್ರಜೆಗಳ ಹಿತ ಕಾಯಬೇಕಾದ ನೈತಿಕ ಮಾತು ಹೇಳಿದರು ಎಂದೆ ವಾಖ್ಯಾನಿಸಲಾಗುತ್ತಿದೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Nov 15 2026 3:13PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗವಿಶಂಕರ ಅವರ ಸಾಧನೆಗೆ ರಾಜ್ಯಮಟ್ಟದ ಪ್ರಶಸ್ತಿ
Nov 14 2026 7:11AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾಂಗ್ರೆಸ್ ವಿರುದ್ದ ಜನಾಂದೋಲನ ರೂಪಿಸಿ : ಹೆಚ್ಡಿಕೆ
Nov 13 2026 8:16PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಚಿವರ ಸಮ್ಮುಖ ಹಾಸ್ಟೆಲ್ ದುಸ್ಥಿತಿ ಹೇಳಿದ್ರು ಹೇಮಲತಾ ನಾಯಕ
Nov 13 2026 8:09AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಶಾ ಕಾರ್ಯಕರ್ತೆಯರಿಂದ ಅಹೋರಾತ್ರಿ ಅನಿರ್ದಿಷ್ಟ ಧರಣಿ
Nov 12 2026 6:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವರ್ಷವಾದರೂ ಮುಗಿಯದ ರಸ್ತೆ ಕಾಮಗಾರಿ : ಜೆಡಿಎಸ್ ಆಕ್ರೋಶ
Nov 12 2026 4:30PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಎಎಸ್ಪಿ ಸರಕಾರಿ ಕಾರಿಗೆ ಟಿಟಿ ವಾಹನ ಡಿಕ್ಕಿ
Nov 11 2026 4:24PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನವೆಂಬರ್ 15 ರಂದು ರಾಜ್ಯಮಟ್ಟದ ಸಮಾವೇಶ
Nov 11 2026 8:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜನರ ಕೈಗೆ ಸಿಗದೆ ತಪ್ಪಿಸಿಕೊಂಡ ಖದೀಮ ಪೊಲೀಸರ ಬಲೆಗೆ ಬಿದ್ದ
Nov 10 2026 7:55PM | ವಿಶೇಷ ವರದಿ | ಆಸಕ್ತಿಕರ ವಿಷಯಗಳು ದೀಪಾವಳಿ ಸಂಭ್ರಮದ ನಡುವೆ ದುಃಖಿತರ ಮನೆಗೆ ಭೇಟಿ
Nov 9 2026 6:06PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಬೆಳಕಾಗೋಣ... ಮತ್ತೊಬ್ಬರ ಸಂಕಷ್ಟದ ಬದುಕಿಗೂ




Copyright © 2026 Agni Divya. All Rights Reserved.
Designed & Developed by We Make Digitize