ಕೊಪ್ಪಳ : ತಾಲೂಕಿನ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಗಿದ್ದು, ಒಟ್ಟು ₹47,45,250 ಹಣ ಸಂಗ್ರಹವಾಗಿದೆ.
ಹುಂಡಿ ಎಣಿಕೆ ಸಂದರ್ಭದಲ್ಲಿ 50 ಗ್ರಾಂ ಕಚ್ಚಾ ಚಿನ್ನ ಹಾಗೂ 4 ಕೆಜಿ 300 ಗ್ರಾಂ ಕಚ್ಚಾ ಬೆಳ್ಳಿ ಪತ್ತೆಯಾಗಿದೆ.
ದೇವಸ್ಥಾನದ ಒಟ್ಟು 23 ಹುಂಡಿಗಳನ್ನು ಇಂದು ತೆರೆದು ಎಣಿಕೆ ಮಾಡಲಾಯಿತು. ಬ್ಯಾಂಕ್ ಸಿಬ್ಬಂದಿ, ಹೋಂಗಾರ್ಡ್ ಸಿಬ್ಬಂದಿ ಹಾಗೂ ಕಂದಾಯ ಅಧಿಕಾರಿಗಳ ಸಮಕ್ಷಮದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.
ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್ ರಾವ್, ಉಪ ಕಾರ್ಯದರ್ಶಿ ಸಣ್ಣ ಬಸವರಾಜ್ ಜೀರ್ಗಾಳ್, ಡಿಟಿ ಮಲ್ಲಿಕಾರ್ಜುನ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.
ಈ ಹಿಂದೆ ಸೆಪ್ಟೆಂಬರ್ 24, 2026ರಂದು ದೇವಸ್ಥಾನದ ಹುಂಡಿಗಳನ್ನು ತೆರೆದು ಎಣಿಕೆ ಮಾಡಲಾಗಿತ್ತು.