ಕೊಪ್ಪಳ : ವಾಲ್ಮೀಕಿ ನಿಗಮದ ಹಗರಣ, SCP TSP ಹಣ ದುರ್ಬಳಕೆ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಬಿಜೆಪಿಯ ಪಾದಯಾತ್ರೆ ಇಂದು ಲಿಂಗಸೂರಿನಿಂದ ಆರಂಭವಾಗಲಿದೆ.
ಸೆಪ್ಟೆಂಬರ್ 4ರಂಉ ಬಿಜೆಪಿ ಪಾದಯಾತ್ರೆ ಕೊಪ್ಪಳ ಜಿಲ್ಲೆಗೆ ಆಗಮಿಸಲಿದ್ದು ಸೆಪ್ಟಂಬರ್ 6 ವರೆಗೆ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಯಲಿದೆ.
ಸೆಪ್ಟಂಬರ್ 4ರಂದು ಸಂಜೆ 5 ಗಂಟೆಗೆ ಕಾರಟಗಿ ಹತ್ತಿರದ ಚನ್ನಳ್ಳಿ ಕ್ರಾಸ್ ಮೂಲಕ ಜಿಲ್ಲೆಗೆ ಪಾದಯಾತ್ರೆ ಆಗಮಿಸಲಿದೆ. ಅಂದು ಸಂಜೆ ಕಾರಟಗಿಯ ನವಲಿ ಕ್ರಾಸ್ ಹತ್ತಿರ ಬಹಿರಂಗ ಸಭೆ ನಡೆಯಲಿದೆ. ರಾತ್ರಿ ಕಾರಟಗಿಯಲ್ಲಿ ವಾಸ್ತವ್ಯ.
ಸೆಪ್ಟಂಬರ್ 5ರಂದು ಬೆಳಗ್ಗೆ 9ಕ್ಕೆ ಕಾರಟಗಿಯಿಂದ ಪಾದಯಾತ್ರೆ ಆರಂಭವಾಗಿ ಸಂಜೆ ಜಂಗಮರ ಕಲ್ಗುಡಿಯಲ್ಲಿ ಬಹಿರಂಗ ಸಭೆ ನಡೆಸಿ ರಾತ್ರಿ ಜಂಗಮರ ಕಲ್ಗುಡಿಯಲ್ಲಿ ವಾಸ್ತವ್ಯ.
ಸೆಪ್ಟೆಂಬರ್ 6 ರಂದು ಬೆಳಗ್ಗೆ ಜಂಗಮರ ಕಲ್ಗುಡಿಯಿಂದ ಪಾದಯಾತ್ರೆ ಆರಂಭವಾಗಿ ಮಧ್ಯಾಹ್ನ 12 ಕ್ಕೆ ಗಂಗಾವತಿಗೆ ಆಗಮಿಸಲಿದ್ದು ನಂತರ ಗಾಂಧಿ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಯಲಿದೆ. ನಂತರ ಮಧ್ಯಾಹ್ನ ಪಕ್ಕದ ಜಿಲ್ಲೆಯ ಕಂಪ್ಲಿಗೆ ಪಾದಯಾತ್ರೆ ತೆರಳಲಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ MLC ಹೇಮಲತಾ ನಾಯಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರು ಗೀತಾ ಮುತ್ತಾಳ, ನಗರ ಅಧ್ಯಕ್ಷ ಅಮರೇಶ ಮುರಲಿ ಮಾಹಿತಿ ನೀಡಿದರು.
ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಪಾದಯಾತ್ರೆಯನ್ನು ಮಾಜಿ ಶಾಸಕರಾದ ಬಸವರಾಜ ದಡೇಸೂಗುರು, ಶರಣು ತಳ್ಳಿಕೇರಿ, ಡಾ. ಬಸವರಾಜ ಕ್ಯಾವಟರ್ ಸಂಯೋಜಿಸಲಿದ್ದಾರೆ.
ಈ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.
ಪಕ್ಷದ ವಿವಿಧ ಮೋರ್ಚಾಗಳ ಮುಖಂಡರು ಪದಾಧಿಕಾರಿಗಳು ಹಾಗೂ ಬಿಜೆಪಿಯಲ್ಲಿರುವ ವಾಲ್ಮೀಕಿ ಸಮುದಾಯದ ಹಾಲಿ ಮಾಜಿ ಜನಪ್ರತಿನಿಧಿಗಳು ಮುಖಂಡರುಗಳು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.