ಕೊಪ್ಪಳ : ಕೆಪಿಎಸ್‌ಸಿಯಲ್ಲಿ ನಡೆದಿರುವ ಎಲ್ಲ ಭ್ರಷ್ಟಾಚಾರ ಆರೋಪಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು AIDYO ಹಾಗೂ JASC ಸಂಘಟನೆ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.
ಕೆಪಿಎಸ್‌ಸಿ ಅಧ್ಯಕ್ಷರ, ಸದಸ್ಯರನ್ನಾಗಿ ವಿಷಯ ತಜ್ಞರನ್ನು ಪರಿಗಣಿಸಬೇಕು. ಕೆಪಿಎಸ್‌ಸಿಯ ಎಲ್ಲಾ ಹಂತದ ಸಿಬ್ಬಂದಿಗಳನ್ನು ನಿಯಮಿತವಾಗಿ ಬದಲಾಯಿಸಬೇಕು.
ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ, ಹಾಗೂ ಭ್ರಷ್ಟಾಚಾರ ಮುಕ್ತವಾಗಿರಬೇಕು.
ಪಿ.ಸಿ. ಹೋಟಾ ಸಮಿತಿಯು ಶಿಫಾರಸ್ಸು ಮಾಡಿದ ಸುಧಾರಣೆಗಳನ್ನು ಸರ್ಕಾರ ಕೂಡಲೇ ಜಾರಿಗೆ ತರಬೇಕು.
ಉದ್ಯೋಗಾಕಾಂಕ್ಷಿಗಳ ಹಿತಾಸಕ್ತಿ ರಕ್ಷಿಸುತ್ತ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
ಕೃಷಿ ಅಧಿಕಾರಿ, ಸಹಾಯಕ ಕೃಷಿ ಅಧಿಕಾರಿ, ಕಂದಾಯ ಇಲಾಖೆ ಭೂಮಾಪಕರ ನೇಮಕಾತಿ ನಿರ್ವಹಣೆ ಕೆಪಿಎಸ್‌ಸಿಯಿಂದ ಕೆಇಎಗೆ ವಹಿಸಿದ್ದು ಅಭ್ಯರ್ಥಿಗಳಿಂದ ಈ ಹುದ್ದೆಗಳಿಗಾಗಿ ಕೆಇಎ ಕೂಡ ಅರ್ಜಿ ಶುಲ್ಕ ಸಂಗ್ರಹಿಸಿದೆ. ಆದರೆ ಇದಕ್ಕೂ ಮೊದಲು ಇದೇ ಹುದ್ದೆಗಳಿಗಾಗಿ ಕೆಪಿಎಸ್‌ಸಿ ಸಹ ಅರ್ಜಿ ಶುಲ್ಕ ಸಂಗ್ರಹಿಸಿದ್ದು, ಅದನ್ನು ಅಭ್ಯರ್ಥಿಗಳಿಗೆ ಮರುಪಾವತಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಶರಣು ಪಾಟೀಲ್, ಸುಭಾನ್ ನೀರಲಗಿ, ಶಿವಮೂರ್ತಿ ವದಗನಾಳ್, ಹೊನ್ನೂರ್ ಹನಕುಂಟಿ, ಸ್ಪರ್ಧಾರ್ಥಿಗಳಾದ ಫಯಾಜ್ ಮೆಹಬೂಬ್ ನಗರ್, ಶ್ರೀಧರ್ ಮಾಲಿಪಾಟೀಲ್, ಬಸವರಾಜ್, ಕಿರಣ್, ಅಶೋಕ್ ಬಿ ಹೊಸಳ್ಳಿ, ಮಾರುತಿ, ಹೊನ್ನೂರಸಾಬ್ ಅನೇಕರು ಇದ್ದರು.