Advt. 
 Views   224

ಗಂಗಾವತಿ : ನಿಗೂಢ ಚಾಕು ದಾಳಿ: ತಂದೆ ಮಗಳು ಸಾವು

Jun 07, 2026, 11:57 AM IST
ಗಂಗಾವತಿ : ನಿಗೂಢ ಚಾಕು ದಾಳಿ: ತಂದೆ ಮಗಳು ಸಾವು

ಕೊಪ್ಪಳ : ಸಂಶಯಾಸ್ಪದ ಘಟನೆಯಲ್ಲಿ ನಾಲ್ವರಿಗೆ ಚಾಕು ಇರಿತದ ಘಟನೆ ಗೊತ್ತಾಗಿದ್ದು ಇಬ್ಬರು ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘನೆ ನಿನ್ನೆ ರಾತ್ರಿ ಗಂಗಾವತಿ ತಾಲೂಕಿನ ಹೊಸ ಅಯೋಧ್ಯೆಯಲ್ಲಿ ಜರುಗಿದೆ.

ಘಟನೆಯಲ್ಲಿ ವೆಂಕಟನಾಯ್ಡು (48) ಮತ್ತವರ ಮಗಳು ಪ್ರಗತಿ (19) ಸಾವಿಗೀಡಾಗಿದ್ದಾರೆ. ವೆಂಕಟನಾಯ್ಡು ಪತ್ನಿ ಸೌಜನ್ಯ ತೀವ್ರಗಾಯಗಳಿಂದ ಹಾಗೂ ಸಣ್ಣಪುಟ್ಟ ಗಾಯಗಳಿಂದ ಮಗ ಸಾಯಿ ಬಳ್ಳಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ತೀವ್ರ ಕುತೂಹಲ ಮೂಡಿಸಿದ್ದು ಚಾಕು ಹಾಕಿದವರು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ ಚಾಕು ದಾಳಿಗೆ ಒಳಗಾದವರು ಮನೆಯಲ್ಲಿದ್ದಾರೆ. ಮತ್ತು ಬಾಗಿಲು ಒಳಗಿನಿಂದ ಲಾಕ್ ಆಗಿತ್ತು.

ನಿನ್ನೆ ರಾತ್ರಿ ಅಜ್ಜ ಅಜ್ಜಿ, ತಂದೆ ತಾಯಿ ಇಬ್ಬರು ಮಕ್ಕಳು ಹಣ್ಣು ಸೇವಿಸಿ ಅಜ್ಜ ಅಜ್ಜಿ ಒಂದು ಕೋಣೆಯಲ್ಲಿ ವೆಂಕಟನಾಯ್ಡು , ಸೌಜನ್ಯ , ಪ್ರಗತಿ , ಸಾಯಿ ನಾಲ್ವರೂ ಒಂದು ಕೋಣೆಯಲ್ಲಿ ಮಲಗಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ಲೈಟ್ ಆರಿದ್ದು ಆಗ ವೆಂಕಟನಾಯ್ಡು, ಸೌಜನ್ಯ , ಪ್ರಗತಿಯ ತಲೆ ಕುತ್ತಿಗೆ ಹತ್ತಿರ ಚಾಕುವಿನಿಂದ ದಾಳಿಯಾಗಿದೆ.

ಗಲಾಟೆ ವಿಷಯ ಕೇಳಿ ಅಕ್ಕಪಕ್ಕದವರು ಬಾಗಿಲು ಮುರಿದು ನೋಡಿದಾಗ ಮೂವರ ಜೊತೆ ಅವರ ಮಗ ಸಾಯಿ ಕೂಡ ಚಾಕು ದಾಳಿಗೆ ಈಡಾದಂತೆ ಕಂಡು ಬಂದಿದ್ಧಾನೆ. ಆದರೆ ಆತನಿಗೆ ಸಣ್ಣ ಪುಟ್ಟ ಗಾಯಗಲಾಗಿವೆ.

ಹಾಗಾದರೆ ಈ ನಾಲ್ವರಿಗೆ ಚಾಕು ಇರಿದವರು ಯಾರು ? ಯಾರಾದರೂ ಚಾಕು ಇರಿದು ಪರಾರಿಯಾಗಿದ್ದರೆ ಒಳಗಿನಿಂದ ಬಾಗಿಲು ಲಾಕ್ ಆಗಿದ್ದು ಹೇಗೆ ? ಮನೆಯಲ್ಲಿ ಇದ್ದವರು ಆರು ಜನ. ಹಾಗಾದರೆ ಇವರಲ್ಲಿ ಯಾರಾದರೊಬ್ಬರು ಕತ್ತಲಲ್ಲಿ ಚಾಕುವಿನಿಂದ ಇರಿದರೆ ? ಎಂಬ ಶಂಕೆ ಮೂಡಿದೆ.

ಇದರ ಜೊತೆಗೆ ಸಾಯಿನೆ ಚಾಕುನಿಂದ ಕೊಂದಿರುವುದು ಎಂದು ಅಜ್ಜ ತಾತಾರಾವ್ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ಧಾರೆ.

ಚಾಕು ಇರಿತದಿಂದ ಗಾಯಗೊಂಡ ಪ್ರಗತಿ ಗಂಗಾವತಿ ಆಸ್ಪತ್ರೆಯಲ್ಲಿ ಮೃತಪಟ್ಟರೆ , ವೆಂಕಟನಾಯ್ಡು ಬಳ್ಳಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.‌ ಸೌಜನ್ಯ ಎಂಬುವವರು ತೀವ್ರ ಗಾಯಗೊಂಡು ಹಾಗೂ ಸಾಯಿ ಸಣ್ಣಪುಟ್ಟ ಗಾಯಗಳಿಂದ ಬಳ್ಳಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳ್ಳಾರಿಯಲ್ಲಿ ಐಜಿಯವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಪೊಲೀಸರು ಘಟನೆಯ ತನಿಖೆ ತೀವ್ರಗೊಳಿಸಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jul 10 2026 3:56PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜೆಡಿಎಸ್ ಬರ ಅಧ್ಯಯನ ತಂಡಕ್ಕೆ CVC
Jul 10 2026 8:59AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳದಲ್ಲಿ ಗ್ರಾಮಾಯಣ ಸಂಭ್ರಮ : ಅಭಿಮಾನಿಗಳೊಂದಿಗೆ ವಿನಯರಾಜಕುಮಾರ್
Jul 9 2026 4:42PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಚುನಾವಣೆ
Jul 8 2026 7:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೂರಾರು ವಿದ್ಯಾರ್ಥಿಗಳ ಶಾಲೆಗೆ ಸಾಮೂಹಿಕ ಗೈರು
Jul 6 2026 8:19PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಸ್ರಾವನೆ ಲೋಪ : 8ನೇ ತರಗತಿಗಾಗಿ ವಿದ್ಯಾರ್ಥಿಗಳು ಪರದಾಟ
Jul 6 2026 5:07PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಲೆಯಾದಾತನ ಅಣ್ಣ - ಅಳಿಯ ಅರೆಸ್ಟ್
Jul 6 2026 1:55PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಲಾರಿಗೆ ಕಾರು ಡಿಕ್ಕಿ : ಓರ್ವ ಸಾವು ಮೂವರು ಗಾಯ
Jul 5 2026 11:25AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಂತ್ರಿಗಿರಿಗಾಗಿ ಹೋರಾಟ ಜನರ ಸಮಸ್ಯೆಗೆ ಮೌನ : ಕ್ಯಾವಟರ್
Jul 4 2026 3:48PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಲ : ಒಂದೆ ಕುಟುಂಬದ ಮೂವರು ನೇಣಿಗೆ ಶರಣು
Jul 3 2026 12:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು : ಲೋಕಾಯುಕ್ತ ದಾಳಿ 8 ಜನರ ವಿರುದ್ದ ಕೇಸ್




Copyright © 2026 Agni Divya. All Rights Reserved.
Designed & Developed by We Make Digitize