ಕೊಪ್ಪಳ : ಕ್ಷರ ಎಂದರೆ ನಾಶವಾಗುವುದು, ಅಕ್ಷರ ಎಂದರೆ ನಾಶವಾಗಲಾರದ್ದು ಜ್ಞಾನ ಎಂದಿಗೂ ನಾಶವಾಗಲಾರದ ಸಂಪತ್ತು ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಫಲ ಕೊಟ್ಟೆ ಕೊಡುತ್ತದೆ ಎಂದು ಗಿಣಿಗೇರಿ ಆನೆಗೊಂದಿ ಮಠದ ಶ್ರೀ ಅಭಿನವ ಶ್ರೀಕಂಠ ಸ್ವಾಮಿಗಳು ನುಡಿದರು.
ಅವರು ಗಿಣಿಗೇರಿಯ ಬಸವ ಬೆಳಗು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸರಸ್ವತಿ ಪೂಜೆ ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸ ನೆರವೇರಿಸಿ ಆಶೀರ್ವಚನ ನೀಡಿದರು.
ಮಾನವನ ಬದುಕಿನ 18 ಸಂಸ್ಕಾರಗಳಲ್ಲಿ ಮುಖ್ಯವಾದದ್ದು ಬಾಳಿನ ದಿಕ್ಕನ್ನು ಉನ್ನತಿಗೆ ಸಾಗಿಸುವ ಸಂಸ್ಕಾರ ಅಕ್ಷರಾಭ್ಯಾಸ. ಎಲ್ಲ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶಾಲೆ ಹಮ್ಮಿಕೊಂಡಿರುವ ಈ ಕಾರ್ಯ ಶ್ಲಾಘನೀಯ ಎಂದರು.
" ಪೋಷಕರು ಕೇವಲ ಶೈಕ್ಷಣಿಕ ಪ್ರಗತಿ ಅಲ್ಲದೆ ಮಗುವಿನ ನಡವಳಿಕೆ ನೈತಿಕ ಮೌಲ್ಯಗಳು ಮತ್ತು ಭಾವನಾತ್ಮಕ ಬೆಳವಣಿಗೆಗೆ ಭದ್ರವಾದ ಅಡಿಪಾಯ ಹಾಕಬೇಕು "
- ಶ್ರೀ ಅಭಿನವ ಶ್ರೀಕಂಠ ಸ್ವಾಮೀಜಿಗಳು
ಕಾರ್ಯಕ್ರಮದಲ್ಲಿ ಊರಿನ ಗಣ್ಯರು ಹಾಗೂ ಶಿಕ್ಷಣ ಪ್ರೇಮಿಗಳು ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರು, ಮುಖ್ಯೋಪಾಧ್ಯರು, ಶಿಕ್ಷಕಿಯರು ವಿದ್ಯಾರ್ಥಿಗಳು, ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.