ಕೊಪ್ಪಳ : ತಂಡವೊಂದು ಮಧ್ಯರಾತ್ರಿ ಹಂದಿಗಳ ಕಳ್ಳತನಕ್ಕೆ ಇಳಿದಿರುವ ಬಗ್ಗೆ ಗೊತ್ತಾಗಿದ್ದು ಮಾಲೀಕರ ಕಣ್ಣು ತಪ್ಪಿಸಿ 10 ಹಂದಿ ಕದ್ದು ಪರಾರಿಯಾಗಿರುವ ದೂರು ದಾಖಲಾಗಿದೆ.
ಹಂದಿಗಳ ಕಳ್ಳತನ ಘಟನೆ ಕುಷ್ಟಗಿ ತಾಲೂಕು ಶಾಖಾಪುರದಲ್ಲಿ ನಡೆದಿದ್ದು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಎಪ್ರಿಲ್ 8 ರ ಬೆಳಗಿನ ಎರಡೂವರೆ ಸುಮಾರಿಗೆ ಕುಷ್ಟಗಿ ತಾಲೂಕಿನ ಶಾಖಾಪುರದಲ್ಲಿ ಬೊಲೆರೊ ವಾಹನದಲ್ಲಿ ಬಂದ ಕಳ್ಳರ ತಂಡ ಶಿವಪ್ಪ ಭಜಂತ್ರಿಯವರ ಶೆಡ್ ಯಿಂದ ಹಂದಿ ಕದಿಯುವುದು ನೋಡಿದ ಶಿವಪ್ಪ ಅವರ ಸಂಬಂಧಿ ಎಲ್ಲರನ್ನು ಕೂಗಿ ಎಬ್ಬಿಸಿದ್ದಾರೆ.
ಆಗ ಎಲ್ಲರೂ ಹಂದಿ ಕಳ್ಳರ ಹಿಡಿಯಲು ಹೊರಟಾಗ ವೇಗವಾಗಿ ಬೊಲೆರೊದಲ್ಲಿ ಹೋದ ಕಳ್ಳರು ಬೆನ್ನಟ್ಟಿದವರತ್ತ ಬಾಟಲಿ ತೂರಿದ್ದಾರೆ.
ಶಾಖಾಪುರದಿಂದ ಕಾರಿನಲ್ಲಿಯೆ ಬೊಲೆರೊ ಬೆನ್ನಟ್ಟಿ ಬಂದ ಹಂದಿ ಮಾಲೀಕರು ಕುಷ್ಟಗಿಯಲ್ಲಿ ಕೊಪ್ಪಳ ರಸ್ತೆಯತ್ತ ಹೋದ ಬೊಲೆರೊ ಕಣ್ಮರೆಯಾಗಿ ಕಳ್ಳರು ಪರಾರಿಯಾಗಿದ್ದಾರೆ.
ವಾಪಸ್ ಹೋಗಿ ಹಂದಿ ಶೆಡ್ ನಲ್ಲಿ ಪರಿಶೀಲಿಸಿದಾಗ ಶಿವಪ್ಪ ಭಜಂತ್ರಿಯ 4, ದುರುಗಪ್ಪ , ಶಿವಪುತ್ರಪ್ಪ , ಮುತ್ತಣ್ಣ ಎಂಬುವವರ 6 ಹಂದಿ ಸೇರಿ ಒಟ್ಟು 10 ಹಂದಿ ಕಳವು ಆಗಿದ್ದು ಗೊತ್ತಾಗಿದ್ದು ಅವುಗಳ ಬೆಲೆ ಒಂದು ಲಕ್ಷ ರೂಪಾಯಿ.
ಕಳ್ಳರು KA 25 AB 4565 ಸಂಖ್ಯೆಯ ಬೊಲೆರೊ ವಾಹನದಲ್ಲಿ ಹಂದಿ ಹಾಕಿಕೊಂಡು ಪರಾರಿಯಾಗಿದ್ದಾರೆ.