ಕೊಪ್ಪಳ : ತಾಲೂಕು ಅಕ್ರಮಗಳ ಅಡ್ಡೆ ಆಗುತ್ತಿದೆಯಾ ? ಎಂಬ ಶಂಕೆ ಜನರನ್ನು ಕಾಡುತ್ತಿದೆ. ಒಂದೆಡೆ ಅಕ್ರಮ ಮದ್ಯ ಮಾರಾಟ. ಇನ್ನೊಂದೆಡೆ ಅಕ್ರಮ ಮರಳು ಗಣಿಗಾರಿಕೆ. ಅದೂ ಸಾಲದು ಅಂತ ಅಧಿಕೃತ ಗುತ್ತೆದಾರರೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿ ಸಿಕ್ಕಿಬಿದ್ದರು.
ಈಗ ಇದೆಲ್ಲ ಸಾಲದು ಅಂತ ಅಕ್ರಮ ದಂಧೆಕೋರರು ತುಂಗಭದ್ರಾ ನದಿ ಹಿನ್ನಿರಿನ ಭೂಮಿ ಬಗೆಯುತ್ತಿದ್ದಾರೆ. ಅಲ್ಲಿಂದ ಮಣ್ಣು , ಮರಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದು ಇದೆಲ್ಲ ಹದ್ದುಬಸ್ತಿನಲ್ಲಿ ಇಡಬೇಕಾದ ಅಧಿಕಾರಿಗಳು ಇದ್ದಾರಾ ? ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ಈ ಅಕ್ರಮಗಳು ಎಗ್ಗಿಲ್ಲದೆ ನಡೆದಿವೆ.
ಅಕ್ರಮ ಮರಳು ಗಣಿಗಾರಿಕೆಯಿಂದ ಹಿರೇಹಳ್ಳದಗುಂಟ ಇರುವ ಹಳ್ಳಿಗಳು ನಲುಗಿ ಹೋಗಿವೆ.
ಈಗ ತುಂಗಭದ್ರಾ ನದಿ ಹಿನ್ನಿರಿನಲ್ಲಿ ನಡೆದಿರುವ ಅಕ್ರಮ ಮರಳು, ಮಣ್ಣು ಗಣಿಗಾರಿಕೆಯಿಂದ ಹಲವಾಗಲಿ, ಕೇಸಲಾಪುರ ಗ್ರಾಮಗಳು ನಲುಗುತ್ತಿವೆ.
ಅನುಮತಿ ಇಲ್ಲದೆ ಹಗಲು ರಾತ್ರಿ ನಡೆದಿರುವ ಈ ಅಕ್ರಮದ ಬಗ್ಗೆ ಪ್ರಶ್ನಿಸಿದ ಹಲವಾಗಲಿಯ ಶಿವಾನಂದಯ್ಯ ಗುರುವಿನ ಅವರಿಗೆ ನಿಮ್ಮ ಮೇಲೆ ವಾಹನ ಹತ್ತಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾರಂತೆ. ನಿರಂತರ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು ರಾತ್ರಿ ಜನ ನಿದ್ದೆ ಮಾಡದಂಥ ಸ್ಥಿತಿ ಇದೆ.
ಈ ಎಲ್ಲ ಮಾಹಿತಿಯ ಮನವಿ ಪತ್ರ ಜಿಲ್ಲಾಧಿಕಾರಿ, ಎಸ್ಪಿ , ಗಣಿ ಮತ್ತು ಭೂವಿಜ್ಞಾನ ಇಲಾಖೆ, ತಹಶಿಲ್ದಾರರಿಗೆ ಮನವಿ ನೀಡಿದ್ದಾರೆ. ಇನ್ನಾದರೂ ಹಲವಾಗಲಿ, ಕೇಸಲಾಪುರ
ಹತ್ತಿರ ನಡೆದಿರುವ ಈ ಅಕ್ರಮಕ್ಕೆ ಆಡಳಿತ ತಡೆ ಹಾಕುತ್ತಾ ?