Advt. 
 Views   299

ಹಿಂದಿ ಪರ ರಾಜ್ಯಪಾಲರು : ಕರವೇ ಆಕ್ರೋಶದ ಪ್ರತಿಭಟನೆ

Apr 07, 2026, 07:22 AM IST
ಹಿಂದಿ ಪರ ರಾಜ್ಯಪಾಲರು : ಕರವೇ ಆಕ್ರೋಶದ ಪ್ರತಿಭಟನೆ

ಕೊಪ್ಪಳ : ಹಿಂದಿ ಪರವಾಗಿ ಕರ್ನಾಟಕ ವಿರೋಧಿ ಧೋರಣೆ ತಳೆದಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸರ್ಕಾರ ಕೂಡಲೇ ಹಿಂದಕ್ಕೆ ಕರಸಿಕೊಳ್ಳಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಬಿ.ಗಿರೀಶಾನಂದ ಜ್ಞಾನಸುಂದರ ಆಗ್ರಹಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಸರ್ಕಾರ ಎಸ್.ಎಸ್.ಎಲ್.ಸಿ ಪರೀಕ್ಷೇಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರ ಮರುಪರಿಶೀಲಿಸುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ರಾಜ್ಯಪಾಲರು ತಮ್ಮ ಕಾರ್ಯವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರು ಕರ್ನಾಟಕದಲ್ಲಿ ಒಂದೇ ಒಂದು ನಿಮಿಷವು ರಾಜ್ಯಪಾಲರಾಗಿ ಉಳಿಯುವ ನೈತಿಕತೆ ಕಳೆದುಕೊಂಡಿದ್ದಾರೆ.

ಜನರಿಂದ ಆಯ್ಕೆಯಾದ ರಾಜ್ಯ ಸರಕಾರ ನಾಡಿನ ಜನರ ಬೇಕು, ಬೇಡ ತಿರ್ಮಾನಿಸುತ್ತದೆ. ರಾಜ್ಯಪಾಲರು ಸರ್ಕಾರದ ಮುಖ್ಯಸ್ಥರಾಗಿ ಸರ್ಕಾರದ ನಾಡಪರ ಕಾಳಜಿಯ ನಿರ್ಧಾರಗಳನ್ನು ಬೆಂಬಲಿಸಬೇಕು. ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘ ಎಂಬ ಅನಾಮಧೇಯ ಸಂಘಟನೆಯ ಮನವಿಯಿಂದ ತುರ್ತಾಗಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ವಲಸೆ ಬರುತ್ತಿರುವ ಹಿಂದಿ ಭಾಷಿಕರಿಗೆ ಕರ್ನಾಟಕ ಸುರಕ್ಷಿತ ಸ್ವರ್ಗವನ್ನಾಗಿಸುವ ಉದ್ದೇಶ ಹಿಂದಿ ಮಾಫಿಯಾದ್ದು ಅದರಂತೆ ರಾಜ್ಯಪಾಲರು ಪತ್ರ ಬರೆದಿದ್ದಾರೆ.

ಕರ್ನಾಟಕದ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ತಿರ್ಮಾನಿಸುತ್ತದೆ. ಇದನ್ನು ಪ್ರಶ್ನಿಸಲು ರಾಜ್ಯಪಾಲರು ಯಾರು? ಅವರಿಗೆ ಸಂವಿಧಾನ ಈ ಅವಕಾಶ ನೀಡಿಲ್ಲ.
ಕನ್ನಡಿಗರ ಹಿತಕ್ಕೆ ವಿರುದ್ದ ಯಾರೇನೆ ಹೇಳಿದರೂ ರಾಜ್ಯ ಸರ್ಕಾರ ಪರಿಗಣಿಸಬಾರದು. ನಾವು ಹಿಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ದ ಹೋರಾಡಿದ್ದೆವು. ಈಗ ಹಿಂದಿ ಸಾಮ್ರಾಜ್ಯಶಾಹಿ ನಮ್ಮನ್ನು ಆಳಲು ಯತ್ನಿಸುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ತೃತೀಯ ಭಾಷೆ ಗ್ರೇಡಿಂಗ್ ಬದಲಿಸುವ ಪ್ರಯತ್ನ ಮಾಡಿದರೆ ಕ್ರಾಂತಿಯಾಗುತ್ತದೆ.

ಹಿಂದಿ ರಾಜ್ಯಗಳಲ್ಲಿ ತೃತೀಯ ಭಾಷೆಯಾಗಿ ಕನ್ನಡ ಕಲಿಸಲು ರಾಜ್ಯಪಾಲರು ಪತ್ರ ಬರೆಯಲಿ. ಅವರ ಸ್ವಂತ ರಾಜ್ಯ ಮಧ್ಯಪ್ರದೇಶದಲ್ಲಿಯೂ ಎರಡೇ ಭಾಷೆ ಕಲಿಸಲಾಗುತ್ತಿದೆ. ಕನ್ನಡ ಮೂರನೇ ಭಾಷೆಯನ್ನಾಗಿ ಕಲಿಸುವಂತೆ ಅಲ್ಲಿನ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಆಗ್ರಹಿಸಿದ ಅವರು ಇಂಥ ರಾಜ್ಯಪಾಲರನ್ನು ಕೇಂದ್ರ ವಾಪಸ್ ಕರೆಸಿಕೊಳ್ಳಲಿ ಎಂದು ಒತ್ತಾಯಿಸಿದರು.

ಜಿಲ್ಲಾ ಯುವ ಘಟಕ ಅಧ್ಯಕ್ಷ ಹನುಮಂತ ಬೆಸ್ತರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ್, ಜಿಲ್ಲಾ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹಲಗೇರಿ, ಜಿಲ್ಲಾ ಮಹಿಳಾ ಅಧ್ಯಕ್ಷೆ ಭುವನೇಶ್ವರಿ ಮೊಟಗಿ, ಜಿಲ್ಲಾ ಪ್ರಧಾನ ಸಂಚಾಲಕ ಗವಿಸಿದ್ದಪ್ಪ ಚಕ್ಕಡಿ, ಕೊಪ್ಪಳ ತಾಲೂಕ ಅಧ್ಯಕ್ಷ ಹುಸೇನ ಬಾಷಾ ಮಣ್ಣೂರು, ಕನಕಗಿರಿ ತಾಲೂಕಾ ಅಧ್ಯಕ್ಷ ಹರೀಶ ಪೂಜಾರ, ಕುಕನೂರು ತಾಲೂಕ ಅಧ್ಯಕ್ಷ ರಮೇಶ ಚಂಡೂರು, ಕುಷ್ಟಗಿ ತಾಲೂಕ ಅಧ್ಯಕ್ಷ ಪ್ರಕಾಶ ಮನ್ನೇರಾಳ, ಜಿ.ಸಾ.ಜಾಲತಾಣ ಸಂಚಾಲಕ ಸಿದ್ದು ಸಶಿಮಠ, ಮಹಿಳಾ ಘಟಕ ಉಪಾಧ್ಯಕ್ಷೆ ಗಂಗಮ್ಮ ಕುಂಬಾರ, ಕನಕಗಿರಿ ಮಹಿಳಾ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ಮಹಿಳಾ ಗೌರವಾಧ್ಯಕ್ಷೆ ಶಂಕ್ರಮ್ಮ ಮ್ಯಾಗಳಮನಿ, ತಾಲೂಕಾ ಉಪಾಧ್ಯಕ್ಷ ಶ್ರೀಧರ ಭೂತಣ್ಣವರ, ರವಿ ಆದಿ, ಶೇಖರ ಭಾಗ್ಯನಗರ, ನಗರ ಅಧ್ಯಕ್ಷ ಪ್ರಫುಲ್ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


May 17 2026 8:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾ ಮಂತ್ರಿ ಆರೋಗ್ಯ ಮಂತ್ರಿ ಬೆಂಗಳೂರಿಗೆ ಸೀಮಿತ
May 16 2026 7:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಳೆ ಬಿರುಗಾಳಿಗೆ ಬಾಳೆತೋಟಗಳಿಗೆ ಅಪಾರ ಹಾನಿ
May 15 2026 7:19AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಲಿಗೆಮ್ಮ ಜಾತ್ರೆಯ ಟ್ರಾಕ್ಟರ್ ನದಿಗೆ : ಮಗು ಸೇರಿ 6 ಸಾವು
May 14 2026 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೀಟ್ ರದ್ದು ಮಾಡಿ ರಾಜ್ಯಗಳಿಗೆ ಅಧಿಕಾರ ನೀಡಿ
May 13 2026 8:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೋದಿ ಬೈದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆ : ಹಿಟ್ನಾಳಗೆ ಬಿಜೆಪಿ ಕೌಂಟರ್
May 12 2026 6:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗ ಪ್ರದರ್ಶನಕ್ಕೆ ಇರುತ್ತಿದ್ದ ಮಿಯಾ ಜಾಕಿ ಈಗ ಮಾರಾಟಕ್ಕೆ !
May 11 2026 8:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಭಕ್ತಿ ಸಂಭ್ರಮದಲ್ಲಿ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ
May 11 2026 7:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರೋಧಿ ಧರಣಿ 193ನೇ ದಿನಕ್ಕೆ : ಕೆರೆ ಲೀಸ್ ವಿವಾದ ಚರ್ಚೆ
May 11 2026 3:16AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಂಜನಾದ್ರಿಗೆ ಅರ್ಪಿಸಿದ ಆಭರಣದಲ್ಲಿ ಚಿನ್ನಲೇಪಿತ ತಾಮ್ರ ?
May 10 2026 9:13AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸುರೇಶ್ ಡಿ ನೂತನ ಪೊಲೀಸ್ ಇನ್ಸಪೆಕ್ಟರ್




Copyright © 2026 Agni Divya. All Rights Reserved.
Designed & Developed by We Make Digitize