Advt. 
 Views   258

ಹಂಪಿ ಪ್ರಾಧಿಕಾರದಿಂದ ಮುಕ್ತಿ ಕೊಡಿ : ಕೊಪ್ಪಳದಲ್ಲಿ ಆಗ್ರಹ

Apr 06, 2026, 06:50 AM IST
ಹಂಪಿ ಪ್ರಾಧಿಕಾರದಿಂದ ಮುಕ್ತಿ ಕೊಡಿ : ಕೊಪ್ಪಳದಲ್ಲಿ ಆಗ್ರಹ

ಕೊಪ್ಪಳ : ಗಂಗಾವತಿ ತಾಲೂಕಿನ 15 ಹಳ್ಳಿಗಳನ್ನು ಹಂಪಿ ಪ್ರಾಧಿಕಾರ ( Hampi world heritage area management authority) ವ್ಯಾಪ್ತಿಯಿಂದ ಮುಕ್ತಗೊಳಿಸುವಂತೆ ಆನೆಗೊಂದಿ ಭಾಗದ ಜನ ಮುಖಂಡರು ಇಂದು ಕೊಪ್ಪಳದಲ್ಲಿ ಪ್ರತಿಭಟಿಸಿದರು.

ಬಸವೇಶ್ವರ ವೃತ್ತದಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಮನವಿ ಸಲ್ಲಿಸಿದರು.

ನಮ್ಮ ಹಳ್ಳಿಗಳು ಹಂಪಿ ಪ್ರಾಧಿಕಾರ ವ್ಯಾಪ್ತಿಗೆ ಸೇರಿದ ನಂತರ ಯಾವುದೇ ಪರವಾನಗಿ, ಸೌಲಭ್ಯ, ವಿಶೇಷವಾಗಿ ನಿವೇಶನ, ಹಕ್ಕುಪತ್ರ, ಕಟ್ಟಡ ಅನುಮತಿ, ಕರೆಂಟ್ ಸಂಪರ್ಕ ಅನುಮತಿ ಸಿಗುತ್ತಿಲ್ಲ.‌

ಈ ಕಾರಣದಿಂದ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ಆಸ್ಪತ್ರೆ ಕಲ್ಪಿಸಲು ಆಗುತ್ತಿಲ್ಲ. ಪ್ರಾಧಿಕಾರದಿಂದ ಅಭಿವೃದ್ಧಿ ಕಾರ್ಯ ಆಗದೆ ಅದರ ನಿಯಮಗಳಿಂದ ಜನಜೀವನಕ್ಕೆ ತೊಂದರೆಯಾಗುತ್ತಿದೆ. ನಮಗೆ ಪ್ರಾಧಿಕಾರದಿಂದ ಮುಕ್ತಿ ಕೊಡಿ ಎಂದು ಆಗ್ರಹಿಸಿದರು.

ಜೊತೆಗೆ ಹಂಪಿಯ ವಿಠಲ ದೇವಸ್ಥಾನದಿಂದ ಆನೆಗೊಂದಿ, ಅಂಜನಾದ್ರಿಯಿಂದ ಹಂಪಿ ರಾಮಮಂದಿರ, ವಿರುಪಾಪುರ ಗಡ್ಡಿಯಿಂದ ಹಂಪಿ ವಿರುಪಾಕ್ಷ ದೇವಸ್ಥಾನವರೆಗೆ ಒಟ್ಟು ಮೂರು ಕಡೆ ಪಾದಚಾರಿ ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಲಲಿತಾರಾಣಿ ಶ್ರೀರಂಗದೇವರಾಯಲು, ಶ್ರೀಕೃಷ್ಣದೇವರಾಯ, ಡಾ. ಕೆ.ವಿ.ಬಾಬು, ಸಾಯಿಕುಮಾರ ವಕೀಲರು, ವಿಷ್ಣು ಜೋಷಿ, ಮಲ್ಲಿಕಾರ್ಜುನ, ಹೊನ್ನಪ್ಪ , ಶ್ರೀನಾಥ, ಪ್ರಶಾಂತ ಇತರರು ಭಾಗವಹಿಸಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


May 17 2026 8:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾ ಮಂತ್ರಿ ಆರೋಗ್ಯ ಮಂತ್ರಿ ಬೆಂಗಳೂರಿಗೆ ಸೀಮಿತ
May 16 2026 7:27PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮಳೆ ಬಿರುಗಾಳಿಗೆ ಬಾಳೆತೋಟಗಳಿಗೆ ಅಪಾರ ಹಾನಿ
May 15 2026 7:19AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹುಲಿಗೆಮ್ಮ ಜಾತ್ರೆಯ ಟ್ರಾಕ್ಟರ್ ನದಿಗೆ : ಮಗು ಸೇರಿ 6 ಸಾವು
May 14 2026 9:05AM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೀಟ್ ರದ್ದು ಮಾಡಿ ರಾಜ್ಯಗಳಿಗೆ ಅಧಿಕಾರ ನೀಡಿ
May 13 2026 8:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೋದಿ ಬೈದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆ : ಹಿಟ್ನಾಳಗೆ ಬಿಜೆಪಿ ಕೌಂಟರ್
May 12 2026 6:48AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಆಗ ಪ್ರದರ್ಶನಕ್ಕೆ ಇರುತ್ತಿದ್ದ ಮಿಯಾ ಜಾಕಿ ಈಗ ಮಾರಾಟಕ್ಕೆ !
May 11 2026 8:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಭಕ್ತಿ ಸಂಭ್ರಮದಲ್ಲಿ ಜರುಗಿದ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ
May 11 2026 7:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರೋಧಿ ಧರಣಿ 193ನೇ ದಿನಕ್ಕೆ : ಕೆರೆ ಲೀಸ್ ವಿವಾದ ಚರ್ಚೆ
May 11 2026 3:16AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಂಜನಾದ್ರಿಗೆ ಅರ್ಪಿಸಿದ ಆಭರಣದಲ್ಲಿ ಚಿನ್ನಲೇಪಿತ ತಾಮ್ರ ?
May 10 2026 9:13AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸುರೇಶ್ ಡಿ ನೂತನ ಪೊಲೀಸ್ ಇನ್ಸಪೆಕ್ಟರ್




Copyright © 2026 Agni Divya. All Rights Reserved.
Designed & Developed by We Make Digitize