ಕೊಪ್ಪಳ : ಪ್ರೀತಿಸಿ ಮದುವೆಯಾದ ಜೋಡಿಯನ್ನು ಪೊಲೀಸರ ಸಮ್ಮುಖದಲ್ಲಿ ಅಗಲಿಸಿದ್ದು ಪತ್ನಿಯನ್ನು ಪೋಷಕರು ಕರೆದೊಯ್ದಿದ್ದು ನನ್ನ ಪತ್ನಿ ಹುಡುಕಿ ಕೊಡಿ ಎಂದು ಯುವಕನೊರ್ವ ಎಸ್ಪಿ ಕಚೇರಿ ಮೊರೆ ಹೋಗಿರುವ ಪ್ರಕರಣ ಕಂಡು ಬಂದಿದೆ.
ಕೊಪ್ಪಳ ತಾಲೂಕಿನ ಚುಕ್ಕನಕಲ್ಲ್ ನ ಗಣೇಶ ವಾಲ್ಮೀಕಿ, ಮುದ್ದಾಬಳ್ಳಿಯ ಉಷಾರಾಣಿ ಪ್ರೀತಿಸಿ ಮದುವೆಯಾಗಿದ್ದಾರೆ.
ಅಂತರ್ಜಾತಿ ವಿವಾಹ ಆಗಿರುವ ಇವರನ್ನು ಗಂಗಾವತಿ ಪೊಲೀಸರು ಕೊಪ್ಪಳ ಪೊಲೀಸ್ ಠಾಣೆಗೆ ಕಳಿಸಿದ್ದಾರೆ. ಇಲ್ಲಿ ಪೊಲೀಸರ ಸಮ್ಮುಖದಲ್ಲೆ ಜೋಡಿಗೆ ಮಾತಾಡಲು ಅವಕಾಶ ಕೊಡದಂತೆ ಬೇರೆ ಬೇರೆ ಇರಿಸಿ ನಂತರ ಬೇರ್ಪಡಿಸಲಾಗಿದೆ. ಇದರಲ್ಲಿ ಉಷಾರಾಣಿ ಪೋಷಕರ ಕೈವಾಡ ಇದೆ ಎಂಬುದು ಗಣೇಶ್ ಆರೋಪ.
ನಾನು ಸ್ವಚ್ಛೆಯಿಂದ ಗಣೇಶ್ ನನ್ನು ಮದುವೆಯಾಗಿದ್ದೇನೆ. ಇದ್ದರೆ ಅವನ ಜೊತೆ ಇರುತ್ತೇನೆ. ಇಲ್ಲವಾದರೆ ಇಬ್ಬರೂ ಸಾಯುತ್ತೇವೆ ಎಂದು ಪತ್ರ ಬರೆದುಕೊಟ್ಟರುವ ಉಷಾರಾಣಿ ನನ್ನ ಅಣ್ಣಂದಿರು, ಪಾಲಕರಿಂದ ನಮಗೆ ಜೀವ ಬೆದರಿಕೆ ಇರುತ್ತದೆ, ನಮಗೆ ಜೀವನ ಮಾಡಲು ಅವಕಾಶ ಕೊಡಿಸಿ ಎಂದು ಪತ್ರದಲ್ಲಿ ಬರೆದಿದ್ದು ಈಗ ಗಣೇಶ ನನ್ನ ಪತ್ನಿ ಹುಡುಕಿ ಕೊಡಿ ಎಂದು ಎಸ್ಪಿ ಕಚೇರಿ ಮೊರೆ ಹೋಗಿದ್ದಾನೆ.