Advt. 
 Views   186

ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ

Dec 08, 2025, 07:12 AM IST
ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ

ಕೊಪ್ಪಳ : ಕಳೆದ ವರ್ಷ ಬೆಳಗಾವಿ ಅಧಿವೇಶನ ಸಂದರ್ಭ 2 A ಮೀಸಲಾತಿ ಹೋರಾಟಗಾರರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ಡಿ. 10 ನ್ನು 'ಲಿಂಗಾಯತರ ಮೇಲಿನ ದೌರ್ಜನ್ಯ ದಿನ ' ಎಂದು ಆಚರಿಸಲು ಲಿಂಗಾಯತ ಪಂಚಮಸಾಲಿ ಸಮುದಾಯ ನಿರ್ಧರಿಸಿದೆ.

ಈ ಬಗ್ಗೆ ರವಿವಾರ ಕೊಪ್ಪಳದಲ್ಲಿ ಜಯಮೃತ್ಯುಂಜಯ ಸ್ವಾಮಿಜಿಯವರು ನಡೆಸಿದ ಸಭೆಯಲ್ಲಿ ನಿರ್ಧಾರ ಪ್ರಕಟವಾಗಿದೆ.

ಈ ಕುರಿತು ಪಂಚಸೇನಾ ಸಂಘಟನೆ ಕಲ್ಯಾಣ ಕರ್ನಾಟಕದ ಮಾಧ್ಯಮ ವಕ್ತಾರ ರವೀಂದ್ರ ತೋಟದ ಪತ್ರಿಕಾ ಪ್ರಕಟಣೆ ನೀಡಿದ್ದು ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ಮೇಲೆ ನಡೆಸಿದ್ದ ಲಾಠಿ ಪ್ರಹಾರ ಖಂಡಿಸಿ ಇದೆ ಡಿ. 10 ರಂದು ಬೆಳಗಾವಿಯಲ್ಲಿ ಬಾಯಿ ಮತ್ತು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಒಂದು ದಿನದ ಮೌನ ಪ್ರತಿಭಟನೆ ಮಾಡಲಾಗುತ್ತದೆ.


ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಬೇಕು ಎಂದು ಶ್ರೀಗಳು ಕರೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಭೆಯಲ್ಲಿ ಪಂಚ ಸೇನಾ ರಾಜ್ಯ ಅಧ್ಯಕ್ಷರು ರುದ್ರಗೌಡ ಸೊಲಬಗೌಡ್ರ, ಜಿಲ್ಲಾ ಅಧ್ಯಕ್ಷರು ವಿಶ್ವನಾಥ ಮರಿಬಸಪ್ಪನವರ, ಬಸವಲಿಂಗಪ್ಪ ಭೂತೆ, ಶಿವಶರಣಪ್ಪ ಶಿವಪೂಜಿ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಜಿಲ್ಲಾಧ್ಯಕ್ಷರು ಬಸನಗೌಡ ತೊಂಡಿಹಾಳ, ತಾಲೂಕು ಅಧ್ಯಕ್ಷರು ಕರಿಯಪ್ಪ ಮೇಟಿ ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ವೀರಣ್ಣ ಅಣ್ಣಿಗೇರಿ, ಸುರೇಶಗೌಡ್ರ ಶಿವನಗೌಡ್ರ, ಹಾಗೂ ಏಳು ತಾಲೂಕಿನ ಪಂಚಸೇನಾ ಅಧ್ಯಕ್ಷರು ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Jan 17 2026 4:34AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸಾಮಾಜಿಕ ಕಳಕಳಿಯ ಮಿಠಾಯಿ ಅಂಗಡಿಯವರಿಗೆ ಕರವೇ ಸನ್ಮಾನ
Jan 16 2026 7:05PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮುಂಬೈನಲ್ಲಿ ಗೆಲುವು : ವೋಟ್ ಚೋರಿ ಅಲ್ಲ ದಿಲ್ ಚೋರಿ
Jan 14 2026 6:42AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ
Jan 14 2026 6:37AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಹೆಚ್ಚುವರಿ ಬಸ್ ಸೌಕರ್ಯಕ್ಕೆ ಜೆಡಿಎಸ್ ಮನವಿ
Jan 14 2026 6:29AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಊಟದ ತಟ್ಟೆ–ನೀರಿನ ಗ್ಲಾಸ್ ದೇಣಿಗೆ
Jan 14 2026 6:18AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮನರೆಗಾ ಹೆಸರು ಬದಲಾವಣೆ : ಕಾಂಗ್ರೆಸ್ ಪ್ರತಿಭಟನೆ ಹಾಸ್ಯಾಸ್ಪದ - ತೆಂಗಿನಕಾಯಿ
Jan 14 2026 5:58AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಹುಮತ ಇದ್ದರೂ ಕಾಂಗ್ರೆಸ್ ಸೋಲು: ನಾಲತ್ವಾಡ
Jan 13 2026 8:04AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ಚುನಾವಣೆ : ಬಿಜೆಪಿ ಜಯಭೇರಿ
Jan 13 2026 8:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾ ಯೋಜನಾ ಸಮಿತಿ ಚುನಾವಣೆ : ಬಿಜೆಪಿ ಜಯಭೇರಿ
Jan 12 2026 4:16AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಸನ್ನ ಗಡಾದ




Copyright © 2026 Agni Divya. All Rights Reserved.
Designed & Developed by We Make Digitize