Advt. 
 Views   205

ಕೊಪ್ಪಳ ಗಂಗಾವತಿ : ಕಾಲುವೆಯಲ್ಲಿ ಈಜಲು ಹೋದ ಇಬ್ಬರಲ್ಲಿ ಓರ್ವ ಕಾಣೆ

Nov 08, 2025, 08:21 AM IST
ಕೊಪ್ಪಳ ಗಂಗಾವತಿ :   ಕಾಲುವೆಯಲ್ಲಿ ಈಜಲು ಹೋದ ಇಬ್ಬರಲ್ಲಿ ಓರ್ವ ಕಾಣೆ

ಕೊಪ್ಪಳ : ಕಾಲುವೆಗೆ ಈಜಲು ಹೋಗಿದ್ದ ಇಬ್ಬರು ಯುವಕರಲ್ಲಿ ಓರ್ವ ಯುವಕ ಕಾಣೆಯಾಗಿದ್ದಾನೆ. ಈ ಘಟನೆ ಗಂಗಾವತಿಯ ದಾಸನಾಳ ಸೇತುವೆ ಹತ್ತಿರದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಡೆದಿದೆ.

ಕೊಪ್ಪಳದ ಮಿಟ್ಟಿಕೇರಿಯ ಶರಣಬಸವ ಹಾಗೂ ಬ್ಯಾಳಿ ಓಷಿಯ ಮಂಜುನಾಥ ಪಲ್ಲೇದ ಇವರಿಬ್ಬರು ಈಜಲು ಕಾಲುವೆಗೆ ಹೋಗಿದ್ದರು. ಈಜುವಾಗ ಇಬ್ಬರಲ್ಲಿ ಮಂಜುನಾಥ ಕಾಣೆಯಾಗಿದ್ದು ಶರಣಬಸವ ಈಜಿ ದಡ ಸೇರಿದ್ದಾನೆ.

ಈಜಲೆಂದು ಕಾಲುವೆಗೆ ಹೋದ ಮಂಜುನಾಥ ಕಾಲುವೆಯಲ್ಲಿನ ನೀರಿನ ರಭಸಕ್ಕೆ ಈಜಲಾಗದೆ ಕಾಲುವೆಯಲ್ಲಿ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕಾಲುವೆಯಲ್ಲಿ ಕಾಣೆಯಾಗಿರುವ ಯುವಕ ಮಂಜುನಾಥನಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ತೀವ್ರ ಹುಡುಕಾಟ ನಡೆಸಿದ್ದಾರೆ.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize