ಕೊಪ್ಪಳ : ನಗರಸಭೆಯ ಕೋಟ್ಯಂತರ ರೂಪಾಯಿ ಹಗರಣಕ್ಕೆ ಸಂಬಂಧ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಸಹೋದರ ಶಕೀಲ್ ಪಟೇಲ್ , ಜೆಇ ಸೋಮಲಿಂಗಪ್ಪ , ಗುತ್ತಿಗೆದಾರ ಪ್ರವೀಣ ಕಂದಾರಿ, RI ಉಜ್ವಲ್ ನಿವಾಸಕ್ಕೆ ಇಂದು ಬೆಳಗ್ಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಈ ಎಲ್ಲ ಸ್ಥಳಗಳಲ್ಲಿ ದಾಖಲೆ ಪರಿಶೀಲನೆ ಹಾಗೂ ವಿಚಾರಣೆ ಮುಂದುವರೆದಿದೆ.
ಕಳೆದ ವರ್ಷದ 336 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂಪಾಯಿಗೂ ಹೆಚ್ಚು ಹಣದ ಹಗರಣ ನಡೆದಿದೆ. ಕೆಲವು ಕಾಮಗಾರಿ ಮಾಡದೆ ಬಿಲ್ ಪಡೆದಿರುವುದು, ಕೆಲವು ಕಾಮಗಾರಿ ಅರ್ಧ ಮಾಡಿ ಹಣ ಪಡೆದಿರುವುದು, ಇನ್ನು ಒಂದೆ ಕಾಮಗಾರಿಗೆ ಎರಡೆರಡು ಬಿಲ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ನಗರಸಭೆಯಲ್ಲಿ ವಿಪರೀತ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದ್ದವು. ನಗರಸಭೆಯ ವಿವಿಧ ಅನುದಾನಗಳಲ್ಲಿ ಬೋಗಸ್ ಬಿಲ್ ಮೂಲಕ ಹಣ ಎತ್ತುವಳಿ ನಡೆದಿದೆ ಎಂಬ ಆರೋಪಗಳೂ ಕೇಳಿ ಬರುತ್ತಿದ್ದವು.
ನಾಗರಿಕರ ದೂರಿನ ಆಧಾರದಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು ವಿಚಾರಣೆ ದಾಖಲೆ ಪರಿಶೀಲನೆ ನಡೆದಿದೆ.