Advt. 
 Views   755

ಕುಷ್ಟಗಿ ಹತ್ತಿರ ರಸ್ತೆ ಅಪಘಾತ : ಕಾರ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

Aug 22, 2025, 10:11 PM IST
ಕುಷ್ಟಗಿ ಹತ್ತಿರ ರಸ್ತೆ ಅಪಘಾತ : ಕಾರ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು

ಕುಷ್ಟಗಿ : ಕುಷ್ಟಗಿ ತಾಲೂಕು ಕ್ಯಾದಿಗುಪ್ಪಾ ಹತ್ತಿರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಂಟೇನರ್ ಲಾರಿಗೆ ಕಾರ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರ್ ಚಲಾಯಿಸುತ್ತಿದ್ದಾತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ದುರಂತದಲ್ಲಿ ಸಾವನ್ನಪ್ಪಿದವರನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯ ನಿವಾಸಿ ಹಾಗೂ ಅಡುಗೆ ಅನಿಲ ಅಂಗಡಿ ಮಾಲೀಕ ಪ್ರಶಾಂತ ಪಾಟೀಲ (36) ಎಂದು ಗುರುತಿಸಲಾಗಿದೆ.

ಇಲಕಲ್‌ನಿಂದ ಕುಷ್ಟಗಿ ಕಡೆಗೆ ವೇಗವಾಗಿ ಬರುತ್ತಿದ್ದ ಕಾರ್, ಕಂಟೇನರ್ ಲಾರಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರಿನ ಮುಕ್ಕಾಲು ಭಾಗವೇ ಕಂಟೇನರ್ ಕೆಳಗೆ ನುಗ್ಗಿ ಹೋಗಿದೆ. ಕಂಟೇನರ್‌ನ ಹಿಂಭಾಗ ಕಾರಿನ ಹಿಂಬದಿ ಸೀಟ್ ವರೆಗೆ ನುಗ್ಗಿರುವ ಭೀಕರ ದೃಶ್ಯ ಕಂಡುಬಂದಿದೆ.

ಕಾರ್ ಡ್ರೈವಿಂಗ್ ಸೀಟ್‌ನಲ್ಲಿದ್ದ ಪ್ರಶಾಂತ ಪಾಟೀಲ್, ಕಾರು ನುಗ್ಗಿದ ತೀವ್ರತೆಗೆ ಹಿಂಬದಿ ಸೀಟಿನವರೆಗೂ ಸರಿದು ಮಲಗಿದ ಸ್ಥಿತಿಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಮತ್ತು ಮೇಲ್ಭಾಗ ಸಂಪೂರ್ಣವಾಗಿ ತುಂಡಾಗಿದ್ದು, ಕಾರಿನ ಭಾಗಗಳು ಹೆದ್ದಾರಿಯ ಮೇಲೆ ದೂರದವರೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದವು.

ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Sep 7 2026 9:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಕಿರಾಣಿ ಅಂಗಡಿಯಲ್ಲಿ ಕಳ್ಳತನ
Sep 6 2026 7:32PM | ಜಿಲ್ಲಾ ಸುದ್ದಿಗಳು | ಕೊಪ್ಪಳ ನೇತ್ರದಾನ ಮಹತ್ವ ಸಾರಿದ ಜಾಗೃತಿ ಜಾಥಾ
Sep 6 2026 7:04PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಗಲಿದ ರಂಗ ಜಂಗಮರಿಗೆ ನುಡಿ ನಮನ
Sep 6 2026 6:58PM | ಜಿಲ್ಲಾ ಸುದ್ದಿಗಳು | ಕೊಪ್ಪಳ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ
Sep 5 2026 8:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ವಿವಿಧ ಇಲಾಖೆಗಳ ಭ್ರಷ್ಟಾಚಾರ ಬಗ್ಗೆ SIT ತನಿಖೆಯಾಗಲಿ : ಕೊಡ್ಲಿಪೇಟೆ
Sep 4 2026 3:11PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಜಿಲ್ಲಾಸ್ಪತ್ರೆ ಪಾರ್ಕಿಂಗ್‌ನಿಂದ ಬೈಕ್ ಕಳ್ಳತನ ಕೇಸ್ ನಿಂದ ಪತ್ತೆ
Sep 3 2026 7:51PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಬ್ಬಿಗೆ ₹5500 ಬೆಂಬಲ ಬೆಲೆ ನೀಡಿ : ರೈತರ ಆಗ್ರಹ
Sep 3 2026 6:25PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಮೊದಲು ಕೆರೆ ಒತ್ತುವರಿ ತೆರವು : ಆಮೇಲೆ ಅಭಿವೃದ್ಧಿ
Sep 2 2026 7:23PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪಿಂಚಣಿ ಸ್ಥಗಿತ ಖಂಡಿಸಿ ಪ್ರತಿಭಟನೆ : ಅರ್ಹರಿಗೆ ಅನ್ಯಾಯ ಬೇಡ
Sep 2 2026 6:01PM | ಜಿಲ್ಲಾ ಸುದ್ದಿಗಳು | ಕೊಪ್ಪಳ KPSC ನೇಮಕಾತಿ ಹಗರಣ ಖಂಡಿಸಿ SFI ಪ್ರತಿಭಟನೆ




Copyright © 2026 Agni Divya. All Rights Reserved.
Designed & Developed by We Make Digitize