ಕೊಪ್ಪಳ : ಹುಟ್ಟಿದಾಗಿನಿಂದ ಈವರೆಗೆ ಎರಡೂ ಕಿಡ್ನಿಗಳ ಬೆಳವಣಿಗೆ ಸರಿಯಾಗಿ ಆಗದೆ ಬದುಕಲು ಕಷ್ಟ ಪಡುತ್ತಿರುವ 20 ವರ್ಷದ ಯುವಕನಿಗೆ ಈಗ ಬೇರೆ ಕಿಡ್ನಿ ಅಳವಡಿಸಲು ಬೇಕಾಗುವ ವೈದ್ಯಕೀಯ ಖರ್ಚಿಗಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾನೆ.
ಶುಕ್ರವಾರ ಮಾಧ್ಯಮಗಳನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿಕೊಂಡ ತಾಲೂಕಿನ ಚಿಲವಾಡಗಿ ಗ್ರಾಮದ ಯುವಕ ಪರಶುರಾಮ ಕಂಬಳಿ.
ತಂದೆ ಶೇಖರಪ್ಪ , ತಾಯಿ ಶಂಕ್ರಮ್ಮ ಕಷ್ಟಗಳ ಮಧ್ಯೆ ಪರಶುರಾಮನನ್ನು ಐಟಿಐ ಓದಿಸಿದ್ದಾರೆ. ಒಂದೂವರೆ ವರ್ಷದ ಹಿಂದಿನವರೆಗೂ ಆಗಾಗ ಆರೋಗ್ಯದ ಸಮಸ್ಯೆಗಳು ಕಂಡುಬರುತ್ತಿತ್ತು. ಕಾಮಣಿಯಾಗಿದೆ ಎಂದು ಅನೇಕ ವರ್ಷಗಳ ಕಾಲ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋದಾಗ ಕಿಡ್ಡಿಗಳು ಸರಿಯಾಗಿ ಬೆಳವಣಿಗೆಆ ಗಿಲ್ಲ ಎಂಬುದು 2024 ಜನವರಿಯಲ್ಲಿ ಗೊತ್ತಾಗಿದೆ.
ಈಗಾಗಲೆ ಪರಶುರಾಮನ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು ಅದಕ್ಕಾಗಿ ಒಂದು ಎಕರೆ ಹೊಲವನ್ನು ಮಾರಿದ್ದಾರೆ ಪರಶುರಾಮನ ತಂದೆ.
ಮಗ ಪರಶುರಾಮನನ್ನು ಉಳಿಸಿಕೊಳ್ಳುವ ಛಲದಿಂದ ತಂದೆ ಶೇಖರಪ್ಪ ತಮ್ಮ ಕಿಡ್ನಿ ಮಗನಿಗೆ ನೀಡಲು ರೆಡಿಯಾಗಿದ್ದಾರೆ. ಕಿಡ್ನಿ ಅಳವಡಿಸಿ ಸೇರಿ ಎಲ್ಲ ರೀತಿಯ ಚಿಕಿತ್ಸೆಗೆ ಸುಮಾರು 13-15 ಲಕ್ಷ ರೂಪಾಯಿ ವೆಚ್ಚ ಆಗಲಿದೆ.
ಅದಕ್ಕೆ ತಂದೆ ತಾಯಿ ಸಹೋದರನ ಜೊತೆ ಮಾಧ್ಯಮಗಳ ಮುಂದೆ ಆಗಮಿಸಿ ಸಾರ್ವಜನಿಕರು ದಾನಿಗಳಿಂದ ಸಹಾಯಕ್ಕಾಗಿ ಮನವಿ ಮಾಡಿದ್ದಾನೆ.
ಅಕೌಂಟ್ ಹೆಸರು : ಬಸವರಾಜ ( ಪರಶುರಾಮನ ಅಣ್ಣ ) ಬ್ಯಾಂಕ್ ಹೆಸರು : ಬ್ಯಾಂಕ್ ಆಫ್ ಇಂಡಿಯಾ ಕೊಪ್ಪಳ ಅಕೌಂಟ್ ನಂ : 847510110011466
IFSC ಕೋಡ್ BKID0008475
Phone pay : 9113521147