ಕೊಪ್ಪಳ : ಸರಕಾರಿ ಆಸ್ಪತ್ತೆ ಆವರಣದಲ್ಲಿ ಇರುವ ಜನೌಷಧಿ ಕೇಂದ್ರಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿರುವ ರಾಜ್ಯ ಸರಕಾರದ ವಿರುದ್ದ ಇಂದು ಬಿಜೆಪಿ ಜಿಲ್ಲಾ ಘಟಕದಿಂದ ಜಿಲ್ಲಾಸ್ಪತ್ರೆ ಆವರಣದಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಯಿತು.
ಜನೌಷಧಿ ಮಳಿಗೆಗಳಿಂದ ಕಡಿಮೆ ವೆಚ್ಚದಲ್ಲಿ ಔಷಧಿ ಖರೀದಿಸಬಹುದು. ಈ ಜನೌಷಧಿ ಮಳಿಗೆಗಳನ್ನು ಕೇಂದ್ರ ಸರಕಾರ ಆರಂಭಿಸಿದೆ.
ಜನೌಷಧಿ ಕೇಂದ್ತ ಮುಚ್ಚುವ ರಾಜ್ಯ ಸರಕಾರದ ಆದೇಶದಿಂದ ಬಡ ರೋಗಿಗಳಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಇದು ಸಂಪೂರ್ಣ ಜನ ವಿರೋಧಿ ನಿರ್ಧಾರ. ಕಡಿಮೆ ಬೆಲೆಯಲ್ಲಿ ಉತ್ತಮ ಔಷಧಿ ಪಡೆಯುವ ಜನರ ಅವಕಾಶವನ್ನು ರಾಜ್ಯ ಸರಕಾರ ಕಿತ್ತುಕೊಳ್ಳುತ್ತಿದೆ.
ಮೋದಿ ಸರಕಾರದ ಯೋಜನೆಗಳ ವಿರುದ್ದ ರಾಜ್ಯ ಸರಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ಖಾಸಗಿ ಮೆಡಿಕಲ್ ಮಾಫಿಯಾಗೆ ಮಣಿದು ಜನೌಷಧಿ ಕೇಂದ್ರಗಳನ್ನು ರಾಜ್ಯ ಸರಕಾರ ಸ್ಥಗಿತಗೊಳಿಸುತ್ತಿದೆ ಇಂಥ ಹೀನ ರಾಜಕೀಯ ಕೈ ಬಿಡಬೇಕು. ಇಲ್ಲವಾದರೆ ತೀವ್ರಸ್ವರೂಪದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತೆ ಎಂದು ಮುಖಂಡರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ ದಡೇಸೂಗುರು, ಡಾ. ಕೆ.ಜಿ. ಕುಲಕರ್ಣಿ, ಚಂದ್ರಶೇಖರಗೌಡ ಪಾಟೀಲ ಹಲಗೇರಿ, ಚಂದ್ರಶೇಖರ ಕವಲೂರು, ನಗರಸಭೆ ಸದಸ್ಯೆ ಕವಿತಾ ಬಸವರಾಜ ಗಾಳಿ, ಗಣೇಶ ಹೊರತಟ್ನಾಳ, ಶೋಭಾ ನಗರಿ, ಕೀರ್ತಿ ಪಾಟೀಲ್, ಮಹಾಲಕ್ಷ್ಮಿ ಕಂದಾರಿ, ಗೀತಾ ಮುತ್ತಾಳ ಸೇರಿದಂತೆ ಅನೇಕರು ಭಾಗವಹಿಸಿದ್ದರು.