ಕೊಪ್ಪಳ : ಪತ್ನಿ ಬಗ್ಗೆ ಅನುಮಾನದ ರೋಗ ಹೊಂದಿದ್ದ ಪತಿ
ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾದ ಘಟನೆ ಗಂಗಾವತಿಯ ಮುರಾರಿ ನಗರದಲ್ಲಿ ನಡೆದಿದೆ.
ಲಕ್ಷ್ಮಿ (35) ಗಂಡನಿಂದ ಕೊಲೆಯಾದ ದುರ್ದೈವಿ. ಭೀಮೇಶ ಕೊಲೆ ಮಾಡಿ ಪರಾರಿಯಾದ ಪಾಪಿ ಪತಿ.
ಭೀಮೇಶನ ಮೂಲ ಸಿಂಧನೂರಿನ ಹಟ್ಟಿ ವಿರುಪಾಪುರ. ಕೆಲ ವರ್ಷಗಳ ಹಿಂದೆ ಲಕ್ಷ್ಮಿ ಜೊತೆ ಮದುವೆಯಾಗಿದ್ದ. ನಂತರದ ದಿನಗಳಲ್ಲಿ ಪತ್ನಿ ಬಗ್ಗೆ ಅನುಮಾನ ಪಟ್ಟು ಹೊಡೆಯೊದು ಬಡಿಯೊದು ಮಾಡುತ್ತಿದ್ದ. ಈ ಹಿಂದೆ ಎರಡು ಬಾರಿ ಲಕ್ಷ್ಮಿಯ ಕೊಲೆಗೆ ಯತ್ನಿಸಿದ್ದ. ಆಗೆಲ್ಲ ನಾವು ತವರು ಮನೆಗೆ ಕರಕೊಂಡು ಬಂದಿದ್ವಿ. ಮತ್ತೆ ಗಂಡನ ಮನೆಗೆ ಹೋದ ಮಗಳಿಗೆ ಮತ್ತೆ ಕಿರುಕುಳ ಕೊಡತೊಡಗಿದ. ತಿಂಗಳ ಹಿಂದೆ ಮತ್ತೆ ಮಗಳನ್ನು ತವರಿಗೆ ಕರಕೊಂಡು ಬಂದ್ವಿ. ಈ ಸಲ ಭೀಮೇಶನನ್ಜು ಮನೆಗೆ ಕರಕೊಬೇಡ ಅಂದ್ರೂ ಮಗಳು ಕರಕೊಂಡ್ಲು. ಮಲಗಿದಾಗ ಅವನು ಕೊಂದು ಪರಾರಿಯಾಗಿದ್ದಾನೆ ಎಂದು ಲಕ್ಷ್ಮಿ ತಾಯಿ ರೋಧಿಸುತ್ತಿದ್ದಾರೆ.
ಮಗಳನ್ನು ಕೊಂದವನನ್ನು ಬಿಡಬೇಡಿ ಶಿಕ್ಷೆ ಕೊಡಿಸಿ ಎಂದು ಲಕ್ಷ್ಮಿ ತಾಯಿ ಪೊಲೀಸರಿಗೆ ಮನವಿ ಮಾಡಿದ್ದಾರೆ.