ಕೊಪ್ಪಳ : ಇಲ್ಲಿಂದ 12 ಕಿ.ಮೀ ದೂರದ ಭಾಣಾಪುರ ಕ್ರಾಸ್ ವಿಶ್ವವಿದ್ಯಾಲಯ ಹತ್ತಿರ ಬೆಂಕಿ ಅವಘಡ ನಡೆದಿದ್ದು ಓ ಎಫ್ ಸಿ ಕೇಬಲ್ ಗಳಿಗೆ ಬೆಂಕಿ ಹೊತ್ತಿದೆ.
ಘಟನೆ ಇಂದು ಮಂಗಳವಾರ ಮಧ್ಯಾಹ್ನ ನಡೆದಿದ್ದು ಕೇಬಲ್ ಗೆ ಹೊತ್ತಿದ ಬೆಂಕಿ ಪಕ್ಕದ ಮನೆಯ ಮರಕ್ಕೂ ತಗುಲಿದ್ದು ಬೆಂಕಿ ಬೆಂಕಿ ಜ್ವಾಲೆ ಧಗದಗಿಸುವ ಆಕಾಶಕ್ಕೆ ದೃಶ್ಯ ಭಯಾನಕವಾಗಿತ್ತು.
ಈ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಓ ಎಫ್ ಸಿ ಕೇಬಲ್ ಬೆಂಕಿಗಾಹುತಿಆಗಿವೆ ಆದರೆ ಈ ಕೇಬಲ್ ಯಾರಿಗೆ ಸೇರಿದ್ದು ಎಂಬ ಮಾಹಿತಿ ಗೊತ್ತಾಗಿಲ್ಲ.
ಬೆಂಕಿ ಹೊತ್ತಿಕೊಂಡ ಅರ್ಧ ಗಂಟೆ ಅಗ್ನಿಶಾಮಕ ದಳ ಆಗಮಿಸಿದ್ದು ಅದಕ್ಕೂ ಮುಂಚೆ ಸ್ಥಳೀಯರೂ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಈ ಘಟನೆ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.