Advt. 
 Views   470

ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ

Mar 24, 2025, 07:49 PM IST
ಟ್ರಾಫಿಕ್ ಸಿಗ್ನಲ್ ಸರ್ಕಲ್ ನ ರಸ್ತೆಗಳಿಗೆ ನೆರಳಿನ ಪರದೆ ಹಾಕಿ

ಕೊಪ್ಪಳ : ಈ ಸಲದ ಬೇಸಿಗೆಯಲ್ಲಿ ಬಿಸಿಲಿನ ತಾಪ ದಿನೇ ದಿನೆ ಹೆಚ್ಚುತ್ತಿದ್ದು ನಗರದ ಟ್ರಾಫಿಕ್ ಸಿಗ್ನಲ್ ನ ನಾಲ್ಕೂ ರಸ್ತೆಗಳಲ್ಲಿ ನೆರಳಿನ ಪರದೆ ಹಾಕುವಂತೆ ಕೊಪ್ಪಳ ಜೆಡಿಎಸ್ ನಗರ ಘಟಕ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ವಾಹನಗಳ ದಟ್ಟಣೆ ವಿಪರೀತ ಇರುವ ಕೊಪ್ಪಳದಲ್ಲಿ ಬೇಸಿಗೆಯ ಈ ದಿನದಲ್ಲೂ ಟ್ರಾಫಿಕ್ ಸಿಗ್ನಲ್ ಕಾರ್ಯನಿರ್ವಹಿಸ ಬೇಕಿದೆ. ಈ ಮಾರ್ಚ್, ಏಪ್ರಿಲ್ , ಮೇ ತಿಂಗಳಲ್ಲಿ ಬಿಸಿಲಿನ ತಾಪದಿಂದ ಸಂಚಾರವೆ ಕಷ್ಟ. ಬಿಸಿಲಿನ ಧಗೆ ಹೆಚ್ಚಾಗಿ ಮೈ ಮೇಲಿನ ಚರ್ಮ ಸುಟ್ಟು ಹೋಗುತ್ತಿದೆ. ಸಿಗ್ನಲ್ ನಲ್ಲಿ ಟೂ ವ್ಹಿಲರ್ ಸವಾರರು ಕನಿಷ್ಠ ಒಂದು ನಿಮಿಷ ನಿಲ್ಲಬೇಕಾಗುತ್ತೆ. ಈ ಸಂದರ್ಭದಲ್ಲಿ ಬಿಸಿಲಿನ ಧಗೆ  ತಡೆದುಕೊಳ್ಳುವುದು ಅಸಾಧ್ಯ. 

ಹಾಗಾಗಿ ಸಿಗ್ನಲ್ ಇರುವ ಸರ್ಕಲ್ ನ  ಪ್ರತಿ ರಸ್ತೆಗೆ ಎತ್ತರದಲ್ಲಿ 100 ಮೀಟರ್ ಉದ್ದದಷ್ಟು  ನೆರಳಿನ ಪರದೆ ಹಾಕಿದರೆ ಬೈಕ್ ಸವಾರರಿಗೆ ಬಹಳ ಸಹಾಯ ಆಗುತ್ತೆ. ಕೂಡಲೇ ನೆರಳಿನ ಪರದೆ ಅಳವಡಿಸುವಂತೆ  ಜೆಡಿಎಸ್ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದೆ. 

ಈ ಸಂದರ್ಭದಲ್ಲಿ ( ಸಿ.ವಿ ಚಂದ್ರಶೇಖರ ರಾಜ್ಯ ಕೋರ್ ಸಮಿತಿ ಸದಸ್ಯರು ಇವರ ನಿರ್ದೇಶನದಂತೆ) ಕೊಪ್ಪಳ  ಜೆಡಿಎಸ್  ಜಿಲ್ಲಾ ಮುಖಂಡ  ಮಂಜುನಾಥ್ ಸೋರಟೂರ, ರಮೇಶ್ ಡಂಬ್ರಳ್ಳಿ,  ಜೆಡಿಎಸ್ ನಗರ ಘಟಕದ ಅಧ್ಯಕ್ಷರು ಸೋಮನಗೌಡ ಹೊಗರನಾಳ ಮತ್ತು ತಾಲೂಕ ಎಸ್ ಟಿ ವಿಭಾಗದ ಅಧ್ಯಕ್ಷರು ಮಲ್ಲಪ್ಪ ವಾಲ್ಮೀಕಿ, ಜೆಡಿಎಸ್ ಮುಖಂಡ ಸಂಜೀವಗೌಡ ಪೊಲೀಸ್ ಪಾಟೀಲ್, ಮಂಜುನಾಥ್ ಮಾಲಿ ಪಾಟೀಲ್, ಸಿದ್ದನಗೌಡ ಮಾಲಿ ಪಾಟೀಲ್ ಹಾಗೂ ಸಿರಾಜ್ ಕೋಲ್ಕಾರ್ ಉಪಸ್ಥಿತರಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Dec 11 2025 8:38AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ನಗರಸಭೆ ಚುನಾವಣೆಗೆ ಜೆಡಿಎಸ್ ತಯಾರಿ ?
Dec 10 2025 7:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಅಂತರ್ಜಾತಿ ವಿವಾಹ : ಎಸ್ಪಿ ಮೊರೆ ಹೋದ ಯುವಕ
Dec 9 2025 8:31PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಹಣಕ್ಕೆ ಬೇಡಿಕೆ : ದೂರು FIR
Dec 8 2025 7:12AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಡಿ 10 : ಬೆಳಗಾವಿಯಲ್ಲಿ ಮೌನ ಪ್ರತಿಭಟನೆ
Dec 8 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕಾರ್ಖಾನೆ ವಿರುದ್ದ ಧರಣಿಗೆ 39 ದಿನ : ಭಾದಿತ ಗ್ರಾಮದ ಮಹಿಳೆಯರು ಭಾಗಿ
Dec 8 2025 1:28AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಪ್ರಿವೆಡ್ಡಿಂಗ್ ಶೂಟ್ ನಂತರ ಅಪಘಾತದಲ್ಲಿ ಜೋಡಿ ಸಾವು
Dec 7 2025 6:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಸದನದಲ್ಲಿ ಮಾತನಾಡಿ ಇಲ್ಲ ರಾಜೀನಾಮೆ ನೀಡಿ
Dec 6 2025 6:03AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬೆಳೆದದ್ದು ಕಾರ್ಖಾನೆಗಳಿಂದ ಅಲ್ಲ : ಶ್ರೀನಿವಾಸ ಗುಪ್ತಾ
Dec 6 2025 5:50AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಅಕ್ರಮ ಮರಳು ಸಾಗಾಟದವರಿಗೆ ಪ್ರಭಾವಿ ವ್ಯಕ್ತಿಗಳ ಬೆಂಬಲ
Dec 5 2025 8:54AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಅಶೋಕ ಸರ್ಕಲ್ : ಹಣ ದುರುಪಯೋಗ ತನಿಖೆ ?




Copyright © 2025 Agni Divya. All Rights Reserved.
Designed & Developed by We Make Digitize