Advt. 
 Views   267

ದಲಿತರ ಹಣ ಗ್ಯಾರಂಟಿಗೆ ಬಳಕೆ : ಬಿಜೆಪಿ ಬೃಹತ್ ಪ್ರತಿಭಟನೆ

Mar 01, 2025, 08:33 PM IST
ದಲಿತರ ಹಣ ಗ್ಯಾರಂಟಿಗೆ ಬಳಕೆ : ಬಿಜೆಪಿ ಬೃಹತ್ ಪ್ರತಿಭಟನೆ

ಕೊಪ್ಪಳ : ಕರ್ನಾಟಕ ರಾಜ್ಯ ಸರ್ಕಾರ scsp ಹಾಗೂ tsp ಯೋಜನೆಯ ಸಾವಿರಾರು ಕೋಟಿ ಹಣ ದುರ್ಬಳಕೆ ಮಾಡಿ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ ಎಂದು  ಖಂಡಿಸಿ ಬಿಜೆಪಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಿತು.

ಬಸವೇಶ್ವರ ವೃತ್ತದಿಂದ ಆರಂಭವಾದ ಪ್ರತಿಭಟನಾ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆದು ಬಂದರು. 

 ಈ ಸಂದರ್ಭದಲ್ಲಿ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿ ಮುಖಂಡರು ಕಾರ್ಯಕರ್ತರು  ಘೋಷಣೆಗಳನ್ನು ಕೂಗಿದರು. 

 ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಸಾವಿರಾರು ಕೋಟಿ ಹಣವನ್ನು ಸರ್ಕಾರ ಅಕ್ರಮವಾಗಿ ಕಾನೂನು ಬಾಹಿರವಾಗಿ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ. ಇದು ದಲಿತರ ಉದ್ಧಾರಕ್ಕಾಗಿ ಇಟ್ಟಂಥ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಿ ದಲಿತರಿಗೆ ವಂಚನೆ ಎಸುಗುತ್ತಿದೆ ಇಂಥ ದಲಿತ ವಿರೋಧಿ ಸರಕಾರಕ್ಕೆ ಬರುವ ಜಿ. ಪಂ. ತಾ.ಪಂ ಹಾಗೂ 2028 ರ ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

 ಪ್ರತಿಭಟನೆಯಲ್ಲಿ ವಿಧಾನಪರಿಷತ್  ವಿರೋಧ ಪಕ್ಷದ ನಾಯಕರು ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ದೊಡ್ಡನಗೌಡ ಪಾಟೀಲ್, ಶಾಸಕರಾದ ಜನಾರ್ಧನ್ ರೆಡ್ಡಿ , ಎಂಎಲ್ಸಿ ಹೇಮಲತಾ ನಾಯಕ್ , ಮಾಜಿ  ಸಚಿವರಾದ ಹಾಲಪ್ಪ ಆಚಾರ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ , ನವೀನಕುಮಾರ ಗುಳಗಣ್ಣವರ , ಕೊಪ್ಪಳ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಬಸವರಾಜ ದಡೇಸೂಗುರು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಹೊರತಟ್ನಾಳ, ಎಸ್ಟಿ ಮೋರ್ಚಾದ ವಿಜಯ ತಾಳಕೇರಿ, ಈ ಜನಾಂದೋಲನದ ಸಂಯೋಜಕರಾದ ವೈ. ಸಂಪಂಗಿ, ಶರಣು ತಳ್ಳಿಕೇರಿ ಸೇರಿದಂತೆ  ಮುಖಂಡರು ವಿವಿಧ ಮೋರ್ಚಾಗಳ ಮುಖಂಡರು ಭಾಗವಹಿಸಿದ್ದರು.



Share this news

 Comments   0

Post your Comment

PEOPLE'S OPINION

Be the first person to comment this.


LATEST ARTICLES


Feb 15 2026 6:15AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಫೆ. 24 ಕೊಪ್ಪಳ ಬಂದ್ ಹೋರಾಟ : ಗವಿಶ್ರಿಯವರ ಭೇಟಿಯಾದ ನಿಯೋಗ
Feb 14 2026 5:49AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಗಮನ ಸೆಳೆದ ಮಾಸ್ತಿ ಶಾಲೆಯ ಸೈನ್ಸ್ ಫೆಸ್ಟ್
Feb 14 2026 4:47AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಬಿಜೆಪಿ ಮಂಡಲಗಳಿಗೆ ಹೊಸ ಅಧ್ಯಕ್ಷರು
Feb 13 2026 6:39PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಫೆ 24 ಕೊಪ್ಪಳ ಭಾಗ್ಯನಗರ ಬಂದ್
Feb 12 2026 7:02AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ವಿವಾಹ ಪ್ರೋತ್ಸಾಹಧನ 7.77 ಕೋಟಿ ಬಾಕಿ
Feb 12 2026 4:53AM | ಜಿಲ್ಲಾ ಸುದ್ದಿಗಳು | ಕೊಪ್ಪಳ ದೇಶಾದ್ಯಂತ ಕಾರ್ಮಿಕರ ಮುಷ್ಕರ : ಕೊಪ್ಪಳದಲ್ಲೂ ಬೃಹತ್ ಪ್ರತಿಭಟನೆ
Feb 11 2026 6:23AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ ಶಾಸಕರು ರಾಘವೇಂದ್ರ ಹಿಟ್ನಾಳ ₹1 ಕೋಟಿ ಅನುದಾನ
Feb 9 2026 8:59PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಾಂಧಿ ಟೋಪಿ ದೇಶೀ ಊಟ ಸಂಸ್ಕೃತಿಯ ಘಮ
Feb 9 2026 8:47PM | ಜಿಲ್ಲಾ ಸುದ್ದಿಗಳು | ಕೊಪ್ಪಳ ಗಾಂಧಿ ಟೋಪಿ ದೇಶೀ ಊಟ ಸಂಸ್ಕೃತಿಯ ಘಮ
Feb 7 2026 6:44AM | ಜಿಲ್ಲಾ ಸುದ್ದಿಗಳು | ಕೊಪ್ಪಳ ಕೊಪ್ಪಳ : ಬಾಳೆ ತೋಟದಲ್ಲಿ ಬೆಂಕಿ




Copyright © 2026 Agni Divya. All Rights Reserved.
Designed & Developed by We Make Digitize