ಕೊಪ್ಪಳ : ಎರಡು ಬೈಕ್ ಗಳ ಓವರ್ ಟೇಕ್ ಸಂದರ್ಭದಲ್ಲಿ ನಡೆದ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟು ಇನ್ನೊರ್ವ ಯುವಕ ತೀವ್ರ ಗಾಯಗೊಂಡ ಘಟನೆ ರವಿವಾರ ಬೆಳಗ್ಗೆ ಜರುಗಿದೆ.
ಘಟನೆ ಕೊಪ್ಪಳ ಬೈಪಾಸ್ ನಲ್ಲಿ ನಡೆದಿದ್ದು ಬಹದ್ದೂರ ಬಂಡಿ ಗ್ರಾಮದ ಗವಿಸಿದ್ದಪ್ಪ ಗೆಜ್ಜಲಾರ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಅಳವಂಡಿ ಗ್ರಾಮದ ಯುವಕ ತೀವ್ರ ಗಾಯಗೊಂಡಿದ್ದಾನೆ.
ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲಿಸಿದರು.