ಕೊಪ್ಪಳ : ಸಿದ್ದರಾಮಯ್ಯ ಸರಕಾರ ಜನಪರವಾಗಿದೆ. ಸದೃಡವಾಗಿದೆ. ಹಾಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರರಿಂದ ಸದೃಡ ಸಂಘಟನೆಯಾಗುತ್ತಿದೆ. ಏನೇ ಬದಲಾವಣೆ ಆದರೂ ಅದು ಹೈಕಮಾಂಡ್ ನಿರ್ಧಾರ ಪಕ್ಷದಲ್ಲಿ ಎಐಸಿಸಿ ಅಧ್ಯಕ್ಷರು ನಿರ್ಧಾರ ಅಂತಿಮ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಮಾತನಾಡಿ ನಾವು ಸಚಿವರು ಶಾಸಕರು ಸಭೆ ಮಾಡಿದರೆ ಅದನ್ನು ಬೇರೆ ರೀತಿ ಅರ್ಥೈಸಿದರೆ ಹೇಗೆ ಎಂದ ಅವರು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಬಗ್ಗೆ ಪ್ರತಿಕ್ರಿಯಿಸಿ ದೆಹಲಿಯಲ್ಲಿ ಕಾಂಗ್ರೆಸ್ ಕಳೆದ ಚುನಾವಣೆಗಿಂತ ಈಗ ಓಟ್ ಶೇರಿಂಗ್ ಹೆಚ್ಚಿಸಿಕೊಂಡಿದೆ ಎಂದರು.
ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮೈಕ್ರೋ ಫೈನಾನ್ಸಗಳಲ್ಲಿ ಕೆಲವು ಚೆನ್ನಾಗಿ ಕೆಲಸ ಮಾಡುತ್ತೀವಿ. ಕಾಯ್ದೆ ಮೀರಿ ಬೇರೆ ರೀತಿಯಲ್ಲಿ ಸಾಲ ನೀಡುವ ಸಂಸ್ಥೆಗಳು ಹುಟ್ಟಿಕೊಂಡಿವೆ. ಮೈಕ್ರೋ ಫೈನಾನ್ಸಿನಿಂದಾಗುವ ಆತ್ಮಹತ್ಯೆ ತಡೆಗಾಗಿ ಸುಗ್ರಿವಾಜ್ಞೆ ತರಲು ಸರಕಾರ ಹೊರಟಿದೆ. ರಾಜ್ಯಪಾಲರು ಕೆಲವು ಕ್ಲಾರಿಫಿಕೇಷನ್ ಗಾಗಿ ವಾಪಸ್ಸು ಕಳುಹಿಸಿದ್ದು ಸರಿ ಪಡಿಸಿ ಮತ್ತೆ ಕಳುಹಿಸಲಾಗಿದೆ. ರಾಜ್ಯಪಾಲರು ಸುಗ್ರಿವಾಜ್ಞೆ ತಿರಸ್ಕರಿಸಿಲ್ಲ ಕೆಲ ನಿಯಮಗಳ ಮಾಹಿತಿ ಕೇಳಿದ್ದಾರೆ ಎಂದರು.