ಕೊಪ್ಪಳ : ತಪಾಸಣೆ ನೆಪದಲ್ಲಿ ಆರ್ ಟಿಒ ಕಚೇರಿ ಸಿಬ್ಬಂದಿ ಸುಲಿಗೆಗೆ ನಿಂತಿದ್ದಾರೆ ಎಂದು ಲಾರಿ ಡ್ರೈವರ್ ಒರ್ವರು ರೊಚ್ಚಿಗೆದ್ದು ಪ್ರತಿಭಟಿಸಿದ ಘಟನೆ ಎನ್. ಹೆಚ್. 50 ರ ಶಹಪುರ ಹತ್ತಿರದ ಚೆಕ್ ಪೋಸ್ಟ್ ನಲ್ಲಿ ಶನಿವಾರ ಮುಂಜಾನೆ ಜರುಗಿದೆ.
ದಾಖಲೆ ತಪಾಸಣೆ ನೆಪದಲ್ಲಿ ಜಗಳ ತೆಗೆದು ತಮ್ಮ ಮೇಲೆ ಹಲ್ಲೆ
ಮಾಡಿದ್ದಾರೆ ಎಂದು ಅರಸಿಕೆರೆ ಮೂಲದ ಲಾರಿ ಡ್ರೈವರ್ ಆನಂದ ಆರೋಪಿಸಿದರು.
ಬೆಂಗಳೂರಿನಿಂದ ಕಬ್ಬಿಣದ ಆಂಕಲರ್ ಲೋಡ್ ನೊಂದಿಗೆ ಜಮಖಂಡಿಗೆ ಲಾರಿ ಹೊರಟಿತ್ತು. ಲಾರಿ ದಾಖಲೆಗಳು ಎಲ್ಲ ಸರಿಯಾಗಿವೆ. ಆದರೂ ಆರ್ ಟಿಒ ಅಧಿಕಾರಿಗಳು ಅನಾವಶ್ಯಕ ಕಿರಿಕ್ ಮಾಡುತ್ತಾರೆ. ಹಣಕ್ಕಾಗಿ ಜಗಳ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದರು.
ಆರ್ ಟಿಒ ಅಧಿಕಾರಿಗಳು ಲಂಚ ಕೊಟ್ಟಿಲ್ಲ ಅಂದ್ರೆ ಜಗಳ ಆಡ್ತಾರೆ. ಪ್ರತಿ ತಿಂಗಳು ಕೋಟಿಗಟ್ಟಲೆ ವಸೂಲಿ ಮಾಡ್ತಾರೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಆರೋಪಿಸಿದರು.
ಸ್ಥಳಕ್ಕೆ ಮುನಿರಾಬಾದ್ ಪೊಲೀಸರು ಭೇಟಿ ನೀಡಿದರು.