ಕೊಪ್ಪಳ : ರೈತರಿಗೆ ವಿರೋಧಿ ಮೂರು ಕರಾಳ ಕಾಯ್ದೆ ಕೇಂದ್ರ ಸರಕಾರ ವಾಪಸ್ ಪಡೆದಿದ್ದರೂ ಆ ಕಾಯ್ದೆಯನ್ನು ರಾಜ್ಯದ ಸಿದ್ದರಾಮಯ್ಯ ಸರಕಾರ ಹಿಂಪಡೆದಿಲ್ಲ. ರಾಜ್ಯ ಸರಕಾರಕ್ಕೆ ಇಚ್ಛಾಶಕ್ತಿ ಕೊರತೆ ಇದೆ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್ . ಹಿರೇಮಠ ಹೇಳಿದರು.
ಗುರುವಾರ ಕೊಪ್ಪಳದಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ಜನಪರವಾಗಿಲ್ಲ. ವಿಧಾನಸಭೆ ಚುನಾವಣೆ ಸಂದರ್ಭ ಅಧಿಕಾರಕ್ಕೆ ಬಂದರೆ ಮೂರು ಕರಾಳ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರು. ನಂತರ ಲೋಕಸಭಾ ಚುನಾವಣೆ ಮುಗಿಯಲಿ ಎಂದರು ಈವರೆಗೆ ಕಾಯ್ದೆ ಹಿಂಪಡೆಯದ ಹಿನ್ನೆಲೆಯಲ್ಲಿ ಹೋರಾಟ ರೂಪಿಸುತ್ತೇವೆ ಎಂದರು.
ಕುಮಾರಸ್ವಾಮಿ ಕುಟುಂಬದವರು ಕೇತನಗಾನಹಳ್ಳಿಯ 71 ಎಕರೆ ಗೋಮಾಳ ಭೂಮಿ ಕಬಳಿಸಿದ್ದಾರೆ. ಕುಮಾರಸ್ವಾಮಿ ಹಾಗೂ ಅವರ ಚಿಕ್ಕಮ್ಮ. ಮಂಜುನಾಥ. ಬೀಗರಾದ ಡಿ ಸಿ ತಮ್ಮಣ್ಣ ಹಾಗು ಕುಟುಂಬದವರು ಕಬಳಿಸಿರುವ ಭೂಮಿ ಬಗ್ಗೆ ಹೈಕೋರ್ಟ್ ನಲ್ಲಿ ಸಿವಿಲ್ ದಾವೆ ಹೂಡಲಾಗಿದೆ. ರಾಜ್ಯ ಸರಕಾರ ಹೈಕೋರ್ಟ್ ಗೆ ಸೂಕ್ತ ದಾಖಲೆ ಒದಗಿಸಿ ಹೆಚ್ ಡಿಕೆ ಕುಟುಂಬ ಕಬಳಿಸಿದ ಭೂಮಿ ಹಿಂಪಡೆಯಬೇಕು.
ಡಿ ಕೆ ಶಿವಕುಮಾರ ಸಿಎಂ ಆಗಬಾರದು. ಅವರು ಬೆನಗಾನಹಳ್ಳಿಯಲ್ಲಿ ಎಸ್ ಎಂ ಕೃಷ್ಣ ಸರಕಾರದ ಅವಧಿಯಲ್ಲಿ ನಗರಾಭಿವೃದ್ದಿ ಸಚಿವರಾಗಿ 4.20 ಎಕರೆ ಭೂಮಿ ಕಬಳಿಸಿದ್ದಾರೆ. ಯಡಿಯೂರಪ್ಪ ಸಿಎಂ ಆದಾಗ ಅದನ್ನು ಡಿನೋಟಿಫೈ ಮಾಡಲಾಗಿದೆ. ಈ ಕುರಿತು ನಾಳೆ ಫೆ. 7 ರಂದು ಸುಪ್ರೀಂ ಕೋರ್ಟ್ ನಲ್ಲಿ ಹಿಯರಿಂಗ್ ಇದೆ. ಈಗ ಭೂ ಕಬಳಿಕೆಯಲ್ಲಿ ಮೂರು ಪಕ್ಷದ ಮುಖಂಡರು ಒಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಹಿಂದೆ ರಾಷ್ಟ್ರೀಯ ಅರಣ್ಯ ನೀತಿಗಾಗಿ ಹೋರಾಟ ಮಾಡಿದ್ದೇವು ಈಗ ಜಾರಿಗೆ ಬಂದಿದೆ. ಅದು ಅನುಷ್ಠಾನಗೊಳ್ಳಬೇಕು. ರಾಜಕಾರಣಿಗಳಿಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಅಧಿಕಾರದ ಬಗ್ಗೆ ಕಾಳಜಿ ಇದೆ ಎಂದು ಹಿರೇಮಠ ಹೇಳಿದರು.