ಕೊಪ್ಪಳ : ರಾಜ್ಯದಲ್ಲಿ ನಡೆದ ಬಾಣಂತಿಯರ ಸಾವಿಗೆ ನ್ಯಾಯ ಸಿಗಬೇಕು ಎಂದು ಡ್ರಗ್ ಅಕ್ಷನ್ ಫೋರಂ ಸಾರ್ವತ್ರಿಕ ಆರೋಗ್ಯ ಕೇಂದ್ರ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯ ಡಾ. ಗೋಪಾಲ ದಾಬಡೆ ಹೇಳಿದರು.
ಗುರುವಾರ ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಮಾತನಾಡಿದ ಅವರು ಬಳ್ಳಾರಿ ಬಾಣಂತಿಯರ ಸಾವಿಗೆ ಔಷಧಿಯಲ್ಲಿದ್ದ ವಿಷದ ಅಂಶ ಕಾರಣ ಎಂದು ಆರೋಗ್ಯ ಇಲಾಖೆ ಒಪ್ಪಿದೆ. ಔಷಧಿ ಸರಬರಾಜು ಮಾಡಿದ ಪಶ್ಚಿಮ ಬಂಗಾಳದ ಕಂಪನಿಯಲ್ಲಿ ಅಸ್ವಚ್ಛತೆ ಕಾರಣದಿಂದ ಔಷಧಿಯಲ್ಲಿ ಕೆಟ್ಟ ಅಂಶಗಳು ಸೇರಿವೆ ಇದರಿಂದ ಬಾಣಂತಿಯರ ಸಾವು ಸಂಭವಿಸಿವೆ.
ಸರಕಾರ ಖರೀದಿಸುವ ಔಷಧಿಯ ಪ್ರತಿ ಬ್ಯಾಚ್ ನ್ನು ಸಂಪೂರ್ಣ ಕೆಎಸ್ ಎಂಸಿಎಲ್ ನವರು ಸರಿಯಾಗಿ ಪರೀಕ್ಷೆ ಮಾಡುತ್ತಿಲ್ಲ. ಕೆಎಸ್ಎಂಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದು ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು.
ಸರಕಾರಿ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೆ ಉಚಿತ ಮತ್ತು ಗುಣಮಟ್ಟದ ಔಷಧಿ ದೊರೆಯಬೇಕು. ಸರಕಾರಿ ಆಸ್ಪತ್ರೆ ವೈದ್ಯರು ಔಷಧಿ ಹೊರಗಡೆ ಖರೀದಿಸಲು ಹೇಳಬಾರದು. ಸರಕಾರಿ ಆರೋಗ್ಯ ಸೇವೆ ಬಲಪಡಿಸಬೇಕು.
ರಾಜಸ್ಥಾನದಲ್ಲಿ ಜಾರಿಯಾಗಿರುವ ಹೆಲ್ತ್ ರೈಟ್ ಆಕ್ಟ್ ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕು. ಆ ಕಾಯ್ದೆ ಪ್ರಕಾರ ರಾಜ್ಯದ ಯಾವುದೆ ವ್ಯಕ್ತಿ ಅನಾರೋಗ್ಯಕ್ಕೀಡಾದರೆ ಅವರಿಗೆ ಔಷಧಿ ಉಪಚಾರ ಒದಗಿಸಬೇಕಾದ್ದು ಸರಕಾರದ ಕರ್ತವ್ಯ ಎಂದು ವೈದ್ಯ ದಾಬಡೆ ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಪರಿವರ್ತನಾ ಸಮಿತಿಯ ಎಸ್. ಆರ್ . ಹಿರೇಮಠ, ಮಂಜುಳಾ, ಗೋಪಕುಮಾರ ಕೆ ಎಂ. ಶೀಲಾ ಹಾಲ್ಕುರಿಕೆ ಉಪಸ್ಥಿತರಿದ್ದರು.