ಕೊಪ್ಪಳ : ತಾಲ್ಲೂಕಿನ ಚಿಕ್ಕಬಗನಾಳ ಹತ್ತಿರ ಇಂದು (ಬುಧವಾರ) ಲಾರಿ ಮತ್ತು ಬೈಕ್ ನಡುವೆ ನಡೆದ ಡಿಕ್ಕಿಯಲ್ಲಿ ಬೈಕ್ ಸವಾರ ಭೀಮೇಶ ಚೆನ್ನದಾಸರ (19) ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಘಟನೆಯು ಬೆಳಗ್ಗೆ ಬಗನಾಳ ಹತ್ತಿರ ಹುಲಿಗೆಮ್ಮ ಧಾಬಾ ಬಳಿ ನಡೆದಿದೆ. ಬೆಳಗ್ಗೆ ಜಮೀನಿನಿಂದ ಬೈಕ್ ನಲ್ಲಿ ವಾಪಸ್ ಮನೆಗೆ ಹೊರಟಾಗ ವೇಗವಾಗಿ ಬಂದ ಲಾರಿ ಬೈಕ್ ಗೆ ಡಿಕ್ಕಿ ಹೊಡೆದು ಭೀಮೇಶ ಮೃತಪಟ್ಟಿದ್ದಾನೆ.
ಲಾರಿ ಚಾಲಕ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಮುನಿರಾಬಾದ್ ಪಿಎಸ್ಐ ಸುನೀಲ್ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.