ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶ್ರೀ ಗವಿಸಿದ್ದೇಶ್ವರ ಮೂರ್ತಿ ಪಲ್ಲಕ್ಕಿಗೆ ಹೆಗಲು ಕೊಟ್ಟರು.
ನಂತರ ಜಾತ್ರಾ ಮಹೋತ್ಸವದ ಗಣ್ಯರ ವೇದಿಕೆಯಲ್ಲಿ ಮಾತನಾಡಿದ ವಿಜಯೇಂದ್ರ ಅವರು ಪ್ರಯಾಗದಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಇಲ್ಲಿ ಕುಂಭಮೇಳ ರೀತಿ ಜಾತ್ರೆ ನಡೆಯುತ್ತಿದೆ ಇದು ನಮಗೆ ಹೆಮ್ಮೆ. ಈ ಜಾತ್ರೆ ಆಡಂಬರಕ್ಕೆ ಸೀಮಿತ ಆಗದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯ ಕೈಗೊಳ್ಳುತ್ತಿರುವುದು ಸಂತೋಷದ ವಿಷಯ. ಭವಿಷ್ಯದಲ್ಲಿ ಕಿವುಡು ಮೂಕ ಮಕ್ಕಳ ಶಾಲೆ ಆರಂಭಿಸುವ ಆಸೆ ಶ್ರೀಗಳದ್ದು. ಅದು ಈಡೇರಲಿ ಎಂದು ಬೇಡಿಕೊಳ್ಳುತ್ತೇನೆ. ಜಗತ್ತಿನ ಎಂಟನೇ ಅದ್ಭುತ ಕೊಪ್ಪಳ ಜಾತ್ರೆ ಎಂದರು.
---------------------
ಜಾತ್ರೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ ಅವರು ರಾಜ್ಯದಲ್ಲಿ ಯಡಿಯೂರಪ್ಪ ಹಳ್ಳಿ ಹಳ್ಳಿ ಅಡ್ಡಾಡಿ ಪಕ್ಷ ಕಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಇದೀಗ ಪಕ್ಷಕ್ಕೆ ಬಂದಿದ್ದಾರೆ. ಅವರು ಬಾಯಿ ಹಿಡಿತದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಮಾತನಾಡಬೇಕು
ಅವರ ಸಮಸ್ಯೆ ಇದ್ರೆ ಹೈಕಮಾಂಡ್ ಜೊತೆ ಮಾತನಾಡಲಿ
ಬಹಿರಂಗವಾಗಿ ಮಾತನಾಡುವದು ಸರಿಯಲ್ಲ. ಕೆಲವೇ ದಿನಗಳಲ್ಲಿ ಪಕ್ಷದಲ್ಲಿ ಎಲ್ಲವು ಸರಿಹೋಗುತ್ತೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡೋ ಸಂದರ್ಭ ಬಂದಿದೆ. ನಾಡಿನ ಜನ ಭ್ರಷ್ಟ ಕಾಂಗ್ರೆಸ್ ಗೆ ಹಿಡಿಶಾಪ ಹಾಕ್ತಿದ್ದಾರೆ. ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ ಆಡಳಿತ ಪಕ್ಷದ ಶಾಸಕರಿಗೂ ಕೂಡಾ ಇದೇ ಭಾವನೆ ಇದೆ. ಒಂದೇ ಒಂದು ರೂಪಾಯಿ ಅಭಿವೃದ್ಧಿ ಗೆ ಅನುದಾನ ಬಿಡುಗಡೆ ಮಾಡಿಲ್ಲ. ಜನಪರ ಸರ್ಕಾರವಲ್ಲ ಇದು ಕಮಿಷನ್ ಸರ್ಕಾರ.
ಹಿಂದೆ ನಮ್ಮ ಸರ್ಕಾರದ ಮೇಲೆ ಇವರು ಆರೋಪ ಮಾಡಿದ್ರು ಆದ್ರೆ ಇದೀಗ ಇವರ ಬಗ್ಗೆ ಸಾಮಾನ್ಯ ಜನರು ಆರೋಪ ಮಾಡ್ತಿದ್ದಾರೆ.
ಶಾಸಕರಿಗೆ ಕ್ಷೇತ್ರಕ್ಕೆ ಮೊನ್ನೆ ಹತ್ತು ಕೋಟಿ ಕೊಡೋದಾಗಿ ಸಿಎಂ ಹೇಳಿದ್ದಾರೆ. ಅದು ಬಿಡುಗಡೆ ಯಾಗಿ ನಮ್ಮ ಕ್ಷೇತ್ರ ಕ್ಕೆ ಬರಲು ಎಷ್ಟು ತಿಂಗಳು ಆಗುತ್ತೊ ಗೊತ್ತಿಲ್ಲ. ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಲಾಬಿ ಆರಂಭವಾಗಿದೆ ಡಿ.ಕೆ. ಶಿವಕುಮಾರ ಸೇರಿದಂತೆ ಅನೇಕರು ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.