ಕೊಪ್ಪಳ : ಅಂಜನಾದ್ರಿಯ ಆಂಜನೇಯ ದರ್ಶನಕ್ಕೆ ಹೊರಟಿದ್ದ ಬೈಕ್ ಸವಾರ ಬೈಕ್ ಸಮೇತ ಕಾಲುವೆಗೆ ಬಿದ್ದು ಸಾವಿಗೀಡಾದ ಘಟನೆ ಇಂದು ಜರುಗಿದೆ.
ಗಂಗಾವತಿ ತಾಲೂಕಿನ ಸಾಣಾಪುರ ಹತ್ತಿರ ಈ ಘಟನೆ ಜರುಗಿದ್ದು ಮೃತ ಬೈಕ್ ಸವಾರ ಓರಿಸ್ಸಾ ಮೂಲದ ಲುಲ್ಲು ಲಾಲ್ (30) ಎಂದು ತಿಳಿದು ಬಂದಿದೆ. ಬೈಕ್ ಹಿಂಬದಿ ಸವಾರನಿಗೆ ಗಾಯಗಳಾಗಿದ್ದು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳ ತಾಲೂಕಿನ ಮೆತಗಲ್ ಬಳಿ ವಿಂಡ್ ಪವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಈ ಇಬ್ಬರು ಶನಿವಾರ ಬೆಳಗ್ಗೆ ಬೈಕ್ ನಲ್ಲಿ ಅಂಜನಾದ್ರಿ ಗೆ ಹೊರಟಿದ್ದಾಗ
ಸಾಣಾಪುರ ಹತ್ತಿರ ನಿಯಂತ್ರಣ ತಪ್ಪಿ, ಬೈಕ್ ಸಮೇತ ರಸ್ತೆ ಪಕ್ಕದ ಕಾಲುವೆಗೆ ಬಿದ್ದ ದುರ್ಘಟನೆ ನಡೆದಿದೆ.