ಕೊಪ್ಪಳ : ಹೊಸಪೇಟೆ MLA ಪಟ್ಟಕ್ಕಾಗಿ ಕಸರತ್ತು ನಡೆಸಿರುವ ರಾಜಶೇಖರ ಹಿಟ್ನಾಳರಿಗೆ ಮಂಗಳವಾರ ( ಮೇ 2 ) ಬಿಗ್ ಶಾಕ್.
ಹೊಸಪೇಟೆ ನಗರಸಭೆಗೆ 4 ತಿಂಗಳ ಹಿಂದೆ ಗೆದ್ದಿದ್ದ ಕಾಂಗ್ರೆಸ್ ನ 10 ರಲ್ಲಿ ಅರ್ಧಕರ್ಧ ಕೌನ್ಸಿಲರ್ ಗಳು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ , ಹೊಸಪೇಟೆ ಶಾಸಕ ( ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ) ಆನಂದ ಸಿಂಗ್ ಸಮ್ಮುಖದಲ್ಲಿ ಇಂದು ಬಿಜೆಪಿ ಸೇರಿದ್ದಾರೆ.
ಕಾಂಗ್ರೆಸ್ ನಿಂದ 10 ಕೌನ್ಸಿಲರ್ ಗಳು ಗೆದ್ದಿದ್ದರು. ಈಗ ಕಾಂಗ್ರೆಸ್ ನಲ್ಲಿ ಇರೋದು ಬರೀ 5 ಕೌನ್ಸಿಲರ್ ಗಳು ಮಾತ್ರ.
ಕಾಂಗ್ರೆಸ್ ನಿಂದ ಬಿಜೆಪಿ ಸೇರಿದವರು ಹುಲುಗಪ್ಪ ( ವಾರ್ಡ್ 8 ),
ರೋಹಿಣಿ ವೆಂಕಟೇಶ ( ವಾರ್ಡ್ 10 ),
ಮಂಜುನಾಥ ( ವಾರ್ಡ್ 28 ),
ಲಕ್ಷ್ಮೀ ( ವಾರ್ಡ್ 33 ),
ರಾಧಾ ಮಲ್ಲಿಕಾರ್ಜುನ ( ವಾರ್ಡ್ 35 )
35 ಸದಸ್ಯರ ಹೊಸಪೇಟೆ ನಗರಸಭೆಯಲ್ಲಿ 5 ಕೌನ್ಸಿಲರ್ ಗಳಿದ್ದರೆ ರಾಜಶೇಖರ ಹಿಟ್ನಾಳ MLA ಸೀಟ್ ಗೆಲ್ಲೋಕ್ಕಾಗುತ್ತಾ ? ಎಂಬುದು ಈಗ ಪ್ರಶ್ನೆ.
ಹೊಸಪೇಟೆ ಜನಸಂಖ್ಯೆ ಲಕ್ಷ ಮೀರಿದೆ. ಹೊಸಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಫಲಿತಾಂಶದಲ್ಲಿ ಹೊಸಪೇಟೆ ನಗರವೂ ಮಹತ್ವದ ಪಾತ್ರ ವಹಿಸುತ್ತೆ. ಈಗ ಅಲ್ಲಿಯೇ ಕಾಂಗ್ರೆಸ್ ಬೇರು ಸಡಿಲಗೊಂಡರೆ ರಾಜಶೇಖರ ರಾಜಕೀಯ ಭವಿಷ್ಯ ಹೇಗೆ ? ಅದೂ ಚುನಾವಣೆ ಒಂದು ವರ್ಷ ಇರುವಾಗಲೇ ಹೀಗಾದರೆ ಕಾಂಗ್ರೆಸ್ ಗತಿ ?
ಮಂತ್ರಿ ಆನಂದ್ ಸಿಂಗ್ ತಂತ್ರಕ್ಕೆ ರಾಜಶೇಖರ ಅತಂತ್ರ ಆಗೋದು ಖಚಿತವೇ ಎನ್ನುವ ಚರ್ಚೆ ಈಗ ಆರಂಭವಾಗಿದೆ.
ಹೊಸಪೇಟೆ ಕ್ಷೇತ್ರದಲ್ಲಿ ರಾಜಶೇಖರ ಸುತ್ತಾಟ ಆರಂಭಿಸಿದ್ದಾರೆ ಹೊರತು ಅವರು ಹೊಸಪೇಟೆ ಕಾಂಗ್ರೆಸ್ ನಲ್ಲಿ ಹಿಡಿತ ಸಾಧಿಸಿಲ್ಲ ಎನ್ನಲು ಈಗ ಕಾಂಗ್ರೆಸ್ ಕೌನ್ಸಿಲರ್ ಗಳು ಬಿಜೆಪಿ ಸೇರಿರುವುದೇ ಸಾಕ್ಷಿ. ರಾಜಶೇಖರ ಬೆಂಬಲಿಗರು ಮಾತ್ರ ಹೊಸಪೇಟೆಯ ಭಾವಿ ಶಾಸಕರು ಎಂದು ( ಸೋಷಿಯಲ್ ಮೀಡಿಯಾದಲ್ಲಿ) ಬಹುಪರಾಕ್ ಹಾಕುತ್ತಿರುವಾಗಲೇ ಕಾಂಗ್ರೆಸ್ ಬೇರುಗಳು ಅಲ್ಲಾಡುತ್ತಿವೆ.
ಕೊಪ್ಪಳ ಜಿ.ಪಂ ನಲ್ಲಿ ಎರಡನೇ ಬಾರಿ ರಾಜಶೇಖರ ಅಧ್ಯಕ್ಷರಾಗಲು ವಿಶ್ವನಾಥರನ್ನು ಅವಿಶ್ವಾಸ ಮಾಡಬೇಕಾಯ್ತು. ಇವರ ತಂತ್ರಕ್ಕೆ ಬಿಜೆಪಿ ಸಾಥ್ ಕೊಟ್ಟಿತು. ಅವಿಶ್ವಾಸ ಆಗಿ ರಾಜಶೇಖರ ಎರಡನೇ ಸಲ ಅಧ್ಯಕ್ಷರಾದರು.
ಆದರೆ ಹೊಸಪೇಟೆ ಬಿಜೆಪಿಯ, ಸತತ ಗೆಲ್ಲುತ್ತಿರುವ ಆನಂದ್ ಸಿಂಗ್ ರ ತಂತ್ರಗಳ ಮುಂದೆ ರಾಜಶೇಖರ ಅತಂತ್ರ ಆಗ್ತಾರಾ ? ಪ್ರತಿ ತಂತ್ರ ಹೂಡುತ್ತಾರಾ ? ಮುಂದಿನ ದಿನಗಳು ಹೇಳುತ್ತವೆ.