ಕೊಪ್ಪಳ : ಗಣೇಶ ವಿಸರ್ಜನೆ ನಂತರ ಮನೆಗೆ ಹೊರಟಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ಗಂಗಾವತಿಯ ಬಸಾಪಟ್ಟಣ ಹತ್ತಿರ ನಡೆದಿದೆ.
ಮೃತ ಯುವಕ ನವೀನಕುಮಾರ (28) ಎಂದು ತಿಳಿದು ಬಂದಿದೆ. ಘಟನೆ ಸೋಮವಾರ ಮಧ್ಯರಾತ್ರಿ ನಡೆದಿದೆ.
ಗಂಗಾವತಿಯ ಉಪ್ಪಾರ ಓಣಿಯ ಭಗೀರಥ ವೃತ್ತದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನನ್ನು ವಿಸರ್ಜಿಸಿ ವಾಪಸ್ ಮನೆಗೆ ಬರುವಾಗ ಬಸಾಪಟ್ಟಣ ಹತ್ತಿರದ ಕೆ ಎಲ್ ಇ ಕಾಲೇಜ್ ಬಳಿ ಟ್ಯಾಂಕರ್ ಲಾರಿ ಮತ್ತು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ನವೀನಕುಮಾರ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.