ಕೊಪ್ಪಳ : ಮೊನ್ನೆ ನಡೆದ ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬ ಗೊಂದಲ ಸಾರ್ವಜನಿಕರಲ್ಲಿದೆ. ಆವತ್ತು ಗಂಗಾವತಿಯಲ್ಲಿ ಗೆದ್ದಿದ್ದು ಕಾಂಗ್ರೆಸ್ ನವರು ಸಂಭ್ರಮಿಸಿದ್ದು ಬಿಜೆಪಿಯವರು. ಇದು ಮೇಲ್ನೋಟಕ್ಕೆ ಕಂಡಿದ್ದು.
ಈ ಬಗ್ಗೆ ಗಂಗಾವತಿಯ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ ಆಡಿಯೋ ಹೇಳಿಕೆ ಬಿಡುಗಡೆ ಮಾಡಿ ನಗರಸಭೆಯಲ್ಲಿ ಬಿಜೆಪಿಯವರೇ ಕಾಂಗ್ರೆಸ್ ಸದಸ್ಯರನ್ನು ಅಧ್ಯಕ್ಷ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಈಗ ಅಧಿಕಾರಕ್ಕೆ ಏರಿದ ಅಧ್ಯಕ್ಷ ಮೌಲಾಸಾಬ, ಉಪಾಧ್ಯಕ್ಷೆ ಪಾರ್ವತಮ್ಮ ಕಾಂಗ್ರೆಸ್ ಚಿನ್ಹೆಯಿಂದ ಆಯ್ಕೆಯಾದವರು.
ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಗೆದ್ದು ಬಂದಿಲ್ಲ ಎಂದು ಆಡಿಯೋದಲ್ಲಿ ತಿಳಿಸಿದ್ದಾರೆ.
ಗಂಗಾವತಿ ನಗರಸಭೆ ಚುನಾವಣೆ ಸಂದರ್ಭದಲ್ಲಿ ನಾವು ರಾಜತಾಂತ್ರಿಕ ನೀತಿ ಅನುಸರಿಸಿದ್ದೇವೆ. ನಮ್ಮಿಂದ ದೂರವಾದವರನ್ನು ಅಧ್ಯಕ್ಷ ಉಪಾಧ್ಯಕ್ಷರನ್ನು ಮಾಡದಿದ್ದರೆ ನಮ್ಮ ಕಡೆಯಿಂದಲೂ ಆಯ್ಕೆಯಾಗುತ್ತಿದ್ದರು.
ರಡ್ಡಿ ವಿಧಾನಸಭಾ ಚುನಾವಣೆಯ ಮುನ್ನ ನಮ್ಮ 9 ಜನ ಸದಸ್ಯರನ್ನು ಹಣ ಕೊಟ್ಟು ಖರೀದಿಸಿದ್ದಾರೆ. ಅವರ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ ಎಂದಿರುವ ಅವರು ಗಂಗಾವತಿ ನಗರಸಭೆಯಲ್ಲಿ ಇರುವುದು ಕಾಂಗ್ರೆಸ್ ಅಧಿಕಾರ ಎಂದು ಅವರು ಆಡಿಯೋ ಮೂಲಕ ಪ್ರತಿ ಪಾದಿಸಿದ್ದಾರೆ.